ಕೊಡಗು: (ನ್ಯೂಸ್ ಮಲ್ನಾಡ್ ವರದಿ) ವೆರಿಕೋಸ್ ವೆಯ್ನ್ ಖಾಯಿಲೆ ಕುರಿತು ಅರಿವು ಮೂಡಿಸುವ ಸಲುವಾಗಿ ಮಾಹಿತಿ ಅರಿವು ಹಾಗೂ ಉಪನ್ಯಾಸ ಕಾರ್ಯಕ್ರಮ ಆಯೋಜನೆಗೊಂಡಿದೆ.
ಕೊಡಗು ಜಿಲ್ಲೆಯ ಸುಂಟಿಕೊಪ್ಪದಲ್ಲಿ ದಿನಾಂಕ 25. ಸೆಪ್ಟೆಂಬರ್ 2022 ರಂದು ಈ ಮಾಹಿತಿ ಕಾರ್ಯಾಗಾರ ನಡೆಯಲಿದ್ದು, ಜೆಸೀಸ್ ಸುಂಟಿಕೊಪ್ಪ ಹಾಗೂ ಡಾ. ಉರಾಳ್ಸ್ ವೆರಿಕೋಸ್ ವೇನ್ಸ್ ಆಯುರ್ವೇದ ಕೇರ್ ಶೃಂಗೇರಿ, ಇವರ ಸಂಯುಕ್ತ ಆಶ್ರಯದಲ್ಲಿ ಈ ಕಾರ್ಯಕ್ರಮ ಜರುಗಲಿದೆ.
ಇದನ್ನೂ ಓದಿ: ಲಕ್ಷಗಟ್ಟಲೇ ಹಣದ ಸಾಲದೊಂದಿಗೆ ಸಬ್ಸಿಡಿ ದೊರಕಿಸುವುದಾಗಿ ಅಮಾಯಕರಿಗೆ ಪಂಗನಾಮ ಹಾಕಿದ್ದ ಮಹಿಳೆ ಅಂದರ್
ವೆರಿಕೋಸ್ ವೇನ್ಸ್ ಬಗ್ಗೆ ಸಂಪೂರ್ಣವಾದ ಮಾಹಿತಿ ಹಾಗೂ ಅರಿವು ಮೂಡಿಸುವ ಉಪನ್ಯಾಸ ಕಾರ್ಯಕ್ರಮ ಇದಾಗಿದ್ದು, ಈ ಕಾರ್ಯಕ್ರಮದ ಉಪನ್ಯಾಸವನ್ನು ಡಾ.ದಯಾನಂದ್ ಆರ್. ಡಿ M.D ಇವರು ನಡೆಸಲಿದ್ದು ಆಸಕ್ತರು ಹಾಗೂ ವೆರಿಕೋಸ್ ವೇನ್ಸ್ ಕುರಿತು ಹೆಚ್ಚಿನ ಮಾಹಿತಿಯನ್ನು ಪಡೆಯಲಿಚ್ಚಿಸುವವರು ದಿನಾಂಕ 25.09.2022 ರ ಭಾನುವಾರ ಬೆಳಗ್ಗೆ 11 ಗಂಟೆಗೆ ಶ್ರೀ ಮಂಜುನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪ, ಸುಂಟಿಕೊಪ್ಪ ಕೊಡಗು ಇಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಹುದು.





0 Comments