ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಸ್ವಾತಂತ್ರದ ಅಮೃತ ಮಹೋತ್ಸವ ಹಾಗೂ ಕೋಮುಗಳ ನಡುವೆ ಉಂಟಾಗಿರುವ ದ್ವೇಷವನ್ನು ಶಮನ ಮಾಡುವ ನಿಟ್ಟಿನಲ್ಲಿ ಮತ್ತು ಗಣೇಶೋತ್ಸವದ ಅಂಗವಾಗಿ ಶೃಂಗೇರಿಯಲ್ಲಿ ಸರ್ವಧರ್ಮ ಸಮನ್ವಯ ಗಣಪತಿ ಸೇವಾ ಸಮಿತಿ ಇವರಿಂದ ಸಾರ್ವಜನಿಕ ಗಣೇಶೋತ್ಸವದ ಆಚರಣೆ ನಡೆಯಿತು.

75ನೆಯ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸವಿನೆನಪಿಗಾಗಿ ಸರ್ವಧರ್ಮ ಸಮನ್ವಯ ಗಣಪತಿ ಸೇವಾ ಸಮಿತಿಯು ಆಯೋಜಿಸಿದ್ದ ಸಾರ್ವಜನಿಕ ಗಣೇಶೋತ್ಸವ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು. 


ಶೃಂಗೇರಿಯ ಶಾರದ ನಗರದಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಗಣಪತಿಯನ್ನು ಪ್ರತಿಷ್ಠಾಪನೆ ಮಾಡಿ ಪೂಜೆ ಪುನಸ್ಕಾರಗಳನ್ನು ನೆರವೇರಿಸಿದ ಮಂಡಳಿಯು, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿತ್ತು. ಮತ ಪಂಥ ಜಾತಿಭೇದಗಳನ್ನು ಮರೆತು ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸರ್ವಧರ್ಮ ಸಮನ್ವಯ ಭ್ರಾತೃತ್ವವನ್ನು ಮೆರೆದರು. 

ಮೂರು ದಿನಗಳ ಕಾಲ ನಡೆದ ಗಣೇಶೋತ್ಸವ ಕಾರ್ಯಕ್ರಮದ ಕೊನೆಯ ಘಟ್ಟವಾದ ವಿಸರ್ಜನಾ ಮಹೋತ್ಸವದಲ್ಲಿ ಶೃಂಗೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಟಿ.ಡಿ ರಾಜೇಗೌಡ ಭಾಗಿಯಾಗಿದ್ದರು ಅಂತೆಯೇ ಸರ್ವಧರ್ಮ ಸಮನ್ವಯ ಗಣಪತಿ ಸೇವಾ ಸಮಿತಿಯ ಅಧ್ಯಕ್ಷರಾದ ಸೌಮ್ಯ ವಿಜಯ್ ಕುಮಾರ್, ಗೌರವಾಧ್ಯಕ್ಷರಾದ ಟಿ.ಸಿ ವೆಂಕಟೇಶ್, ಕಾಂಗ್ರೆಸ್ ವಕ್ತಾರರಾದ ಉಮೇಶ್ ಪೊದುವಾಳ್, ಯುವಕಾಂಗ್ರೆಸ್ ನ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು, ಪಟ್ಟಣ ಪಂಚಾಯತ್ ಸದಸ್ಯರಾದ ಲತಾ ಗುರುದತ್, ರಫೀಕ್ ಅಹಮದ್, ಆಶಾ ದಿನೇಶ್ ಶೆಟ್ಟಿ, ರೂಪ ಮುರಳಿಧರ್ ಪೈ, ದಿನೇಶ್ ಶೆಟ್ಟಿ, ಗ್ರಾಮ ಪಂಚಾಯತ್ ಸದಸ್ಯ ಶಬರೀಶ್, ಸ್ಟೈಲೋ ದಿನೇಶ್ ಶೆಟ್ಟಿ ಹಾಗೂ ಕಾಂಗ್ರೆಸ್ ನ ವಿವಿಧ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಮುಸ್ಲಿಂ ಮುಖಂಡರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.