ಕೊಪ್ಪ: (ನ್ಯೂಸ್ ಮಲ್ನಾಡ್ ವರದಿ) ಅಕ್ರಮವಾಗಿ ಗೋವನ್ನು ಕಡಿದು ಮಾಂಸ ಮಾಡಿ ಮಾರಾಟ ಮಾಡಲು ತಯಾರಿ ನಡೆಸಿದ ಇಬ್ಬರು ಗೋ ಹಂತಕರನ್ನು ಕಾರ್ಯಾಚರಣೆಯ ಮೂಲಕ ಮಾಂಸದ ಸಮೇತ ಸೆರೆ ಕೊಪ್ಪದ ಪೊಲೀಸರು ಸೆರೆಹಿಡಿದಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಸಣ್ಣಕೆರೆ ಝಾಬಿರ್ ಹಾಗೂ ಆತನ ತಂದೆ ಇಬ್ರಾಹಿಂ ಎಂಬ ಇಬ್ಬರು ಆರೋಪಿಗಳು ಅಕ್ರಮವಾಗಿ ಗೋವನ್ನು ಕಡಿದು ಮಾಂಸ ಮಾಡಿ ಮಾರಾಟಕ್ಕೆ ತಯಾರಿ ನಡೆಸುತ್ತಿರುವುದರ ಕುರಿತು ಖಚಿತ ಮಾಹಿತಿ ಪಡೆದ ಕೊಪ್ಪ ಪೊಲೀಸ್ ಠಾಣೆಯ ಪಿಎಸ್ಐ ಶ್ರೀನಾಥ್ ರೆಡ್ಡಿ ಅವರು ಕ್ಷಿಪ್ರವಾಗಿ ಕಾರ್ಯಾಚರಣೆ ನಡೆಸಿ ಇಬ್ಬರೂ ಗೋ ಹಂತಕರನ್ನು ಬಂಧಿಸಿದ್ದಾರೆ.
ಈ ಕಾರ್ಯಾಚರಣೆ ನಡೆಸಿದ ಪಿಎಸ್ಐ ಶ್ರೀನಾಥ್ ರೆಡ್ಡಿ ಅವರ ಕಾರ್ಯವೈಖರಿ ಅತ್ಯಂತ ಅಭಿನಂದನಾರ್ಹ, ಮಲೆನಾಡು ಭಾಗದಲ್ಲಿ ಎಗ್ಗಿಲ್ಲದೆ ನಿರಂತರವಾಗಿ ಗೋಹಂತಕರು ಕ್ರೌರ್ಯವನ್ನು ಮೆರೆಯುತ್ತಿದ್ದು, ನೂತನ ಕಾಯ್ದೆಯ ಪ್ರಕಾರ ಈ ಆರೋಪಿಗಳಿಗೆ ಶಿಕ್ಷೆಯಾಗಬೇಕು. ಅಧಿಕಾರಿಗಳು ಆರೋಪಿಗಳ ಸ್ವತ್ತನ್ನು ಮುಟ್ಟುಗೋಲು ಹಾಕಿಕೊಂಡು ಇಂತಹ ಕೃತ್ಯಗಳನ್ನು ಎಸಗುವವರ ಮೇಲೆ ಕ್ರಮ ಕೈಗೊಳ್ಳಬೇಕು - ರಾಕಿ ಹಿರೇಕೊಡಿಗೆ, ಬಜರಂಗದಳ ಸಂಚಾಲಕ, ಕೊಪ್ಪ
ಬಂಧಿತರಿಂದ ಗೋಮಾಂಸ ಹಾಗೂ ದನದ ಇನ್ನಿತರೆ ಭಾಗಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಈ ಸಂಬಂಧ ಆರೋಪಿಗಳಿಂದ ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಕೊಪ್ಪ ಠಾಣೆಯ ಪಿಎಸ್ಐ ಶ್ರೀನಾಥ್ ರೆಡ್ಡಿ ಅವರ ಈ ಕಾರ್ಯಕ್ಕೆ ಸಾರ್ವಜನಿಕರು ವ್ಯಾಪಕವಾದ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದು, ಆರೋಪಿಗಳಿಗೆ ಗೋ ಹತ್ಯ ನಿಷೇಧ ಕಾಯ್ದೆಯಡಿಯಲ್ಲಿ ಕಠಿಣ ಶಿಕ್ಷೆಯಾಗುವಂತೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ದ್ವಾರಕ ಹಾಗೂ ಬದರೀ ಮಠದ ಉಭಯ ಶ್ರೀಗಳಿಗೆ ದಂಡಕಮಂಡಲ ನೀಡಿ ಅನುಗ್ರಹಿಸಿದ ಶೃಂಗೇರಿ ಜಗದ್ಗುರುಗಳು:
ಶೃಂಗೇರಿ: ದಕ್ಷಿಣಾಮ್ನಾಯ ಶೃಂಗೇರಿ ಶ್ರೀ ಶಾರದಾ ಪೀಠದಲ್ಲಿ ನಿನ್ನೆಯಿಂದ ಶರನ್ನವರಾತ್ರಿಯ ವಿಶೇಷ ಪೂಜಾ ಕೈಂಕರ್ಯಗಳು ಆರಂಭವಾಗಿದ್ದು ಇಂದಿನಿಂದ ವಿದ್ಯಾಧಿದೇವತೆ ಶಾರದೆಯ ಉತ್ಸವ ನಡೆಯಲಿದೆ. ಜಗನ್ಮಾತೆ ಶಾರದಾ ದೇವಿಯು ವಿವಿಧ ಅಲಂಕಾರಗಳಲ್ಲಿ ಕಂಗೊಳಿಸಲಿದ್ದು ಭಕ್ತರು ದೇವಿಯ ದರ್ಶನವನ್ನು ಪಡೆದು ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸುತ್ತಿದ್ದಾರೆ.
ನವರಾತ್ರಿಯ ಪ್ರಥಮ ದಿನವಾದ ಇಂದು ಶೃಂಗೇರಿಯ ಶ್ರೀ ಮಠದ ಆವರಣದಲ್ಲಿ ಸಂಭ್ರಮ ಮನೆ ಮಾಡಿತ್ತು, ವಿಶೇಷವಾಗಿ ದ್ವಾರಕಾ ಪೀಠದ ಉತ್ತರಾಧಿಕಾರಿ ಜಗದ್ಗುರು ಶಂಕರಾಚಾರ್ಯ ಶ್ರೀ ಸದಾನಂದ ಸರಸ್ವತಿ ಸ್ವಾಮೀಜಿಗಳು ಮತ್ತು ಉತ್ತರಾಮ್ನಾಯ ಬದರಿ ಪೀಠದ ಉತ್ತರಾಧಿಕಾರಿಗಳಾದ ಜಗದ್ಗುರು ಶ್ರೀ ಅವಿಮುಕ್ತೇಶ್ವರಾನಂದ ಸರಸ್ವತಿ ಮಹಾಸ್ವಾಮೀಜಿಗಳಿಗೆ ಇಂದು ದಕ್ಷಿಣಾಮ್ನಾಯ ಶೃಂಗೇರಿ ಶಾರದಾಪೀಠದ ಜಗದ್ಗುರು ಶ್ರೀ ಶ್ರೀ ಭಾರತೀತೀರ್ಥ ಸ್ವಾಮೀಜಿಗಳು ದಂಡ ಕಮಂಡಲ ನೀಡಿ ಅನುಗ್ರಹ ಮಾಡಿದರು.
ನಿನ್ನೆ ಶೃಂಗೇರಿಗೆ ಆಗಮಿಸಿದ ದ್ವಾರಕಾ ಹಾಗೂ ಬದರಿ ಮಠದ ಉತ್ತರಾಧಿಕಾರಿಗಳನ್ನು ಶೃಂಗೇರಿ ಶ್ರೀ ಮಠದ ಆಡಳಿತಾಧಿಕಾರಿ ಡಾ.ವಿ.ಆರ್ ಗೌರಿಶಂಕರ್ ಸಾಂಪ್ರದಾಯಿಕವಾಗಿ ಸ್ವಾಗತ ಕೋರಿದ್ದರು. ಇಂದು ಜಗದ್ಗುರುಗಳು ದಂಡ ಕಮಂಡಲ ನೀಡುವ ಮೊದಲು ಶ್ರೀ ಮಠದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿತು.
ಈ ವಿಶೇಷ ಸಂದರ್ಭದಲ್ಲಿ ಶ್ರೀ ಮಠದ ಆಡಳಿತಾಧಿಕಾರಿ ಡಾ.ವಿ.ಆರ್ ಗೌರೀಶಂಕರ್, ದಕ್ಷಿಣಾಮೂರ್ತಿಗಳು, ಶಿವಶಂಕರ್ ಭಟ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.








0 Comments