ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಕೊಲೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಚಿಕ್ಕಮಗಳೂರಿನ ಪೊಲೀಸರು ಪತ್ತೆ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಇದನ್ನೂ ಓದಿ: ಕಾಫಿ ಮಂಡಳಿ ರದ್ದುಪಡಿಸುವಂತೆ ಸದನದಲ್ಲಿ ಶಾಸಕ ಎಂ.ಪಿ ಕುಮಾರಸ್ವಾಮಿ ಒತ್ತಾಯ
ಚಿಕ್ಕಮಗಳೂರಿನ ಮಲ್ಲಂದೂರು ಪೊಲೀಸ್ ಠಾಣಾ ಮೊ.ನಂ. 98/2013 ಕಲಂ 302 ಐಪಿಸಿ ಕೊಲೆ ಪ್ರಕರಣವು ನ್ಯಾಯಾಲಯದಲ್ಲಿ 2016 ರಲ್ಲಿ ಖುಲಾಸೆಗೊಂಡ ನಂತರ, 3 ವರ್ಷ 9 ತಿಂಗಳ ಕಾಲ ನ್ಯಾಯಾಂಗ ಬಂಧನದಲ್ಲಿದ್ದ ಉತ್ತರ ಪ್ರದೇಶದ ಆರೋಪಿ ಸುಧೀರ್ ಅಲಿಯಾಸ್ ಸುದೀರ್ ಕುಮಾರ್ ಎಂಬಾತನನ್ನು 2016 ರಲ್ಲಿ ಬಿಡುಗಡೆ ಮಾಡಲಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಪಿರ್ಯಾದುದಾರರು ಉಚ್ಛ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದ ಮೇರೆಗೆ, ಘನ ನ್ಯಾಯಾಲಯವು ಆರೋಪಿ ಸುಧೀರ್ ಕುಮಾರ್ ನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲು ನೋಟಿಸ್, ನಂತರ ವಾರೆಂಟ್ ಜಾರಿ ಮಾಡಿತ್ತು.
ಆದರೆ ಈತನು ತಲೆಮರೆಸಿಕೊಂಡಿದ್ದರಿಂದ ವಾರೆಂಟ್ ಜಾರಿ ಆಗಿರುವುದಿಲ್ಲ. ಈ ಕುರಿತಾಗಿ ಮಲ್ಲಂದೂರು ಪೊಲೀಸ್ ಠಾಣೆಯ ಪಿ.ಎಸ್.ಐ. ಶ್ರೀ. ರವೀಶ್, ಎ.ಎಸ್.ಐ. ಶ್ರೀ. ವಿಶ್ವನಾಥ್ ಮತ್ತು ಸಿಬ್ಬಂದಿ ಶ್ರೀ. ಅಲಾನ್ ರವರು ಆರೋಪಿಯ ಬಗ್ಗೆ ಮಾಹಿತಿ ಸಂಗ್ರಹಿಸಲು ನವದೆಹಲಿ ಮತ್ತು ಉತ್ತರ ಪ್ರದೇಶಕ್ಕೆ ಹೋಗಿದ್ದು. ನಂತರ ಈತನು ಬೆಂಗಳೂರಿಗೆ ಬರುತ್ತಿರುವ ಬಗ್ಗೆ ಮಾಹಿತಿ ಸಂಗ್ರಹಿಸಿ ದಿನಾಂಕ 21/09/2022 ರಂದು ಆರೋಪಿಯನ್ನು ಬೆಂಗಳೂರಿನಲ್ಲಿ ವಶಕ್ಕೆ ಪಡೆದಿದ್ದಾರೆ.
ಈತನನ್ನು ಉಚ್ಛ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂಬ ಮಾಹಿತಿ ಲಭ್ಯವಾಗಿದ್ದು ಕಾರ್ಯಾಚರಣೆಯಲ್ಲಿ ಭಾಗಿಯಾದ ಪೊಲೀಸರನ್ನು ಅಧಿಕಾರಿಗಳು ಶ್ಲಾಘಿಸಿದ್ದಾರೆ.





0 Comments