ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರಿನ ಕಡೂರು ಪಟ್ಟಣದಲ್ಲಿ ಕಾರಿನ ಮೇಲೆ ಜಿಹಾದ್, ಅಶ್ಲೀಲ ಮತ್ತು ಕೊಲೆಬೆದರಿಕೆ ಪದಗಳನ್ನು ಗೀಚಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು 48 ಗಂಟೆಗಳಲ್ಲಿ ವಶಕ್ಕೆ ಪಡೆದಿದ್ದಾರೆ.
24.09.2022 ರ ರಾತ್ರಿ ಚಿಕ್ಕಮಗಳೂರು ಜಿಲ್ಲೆಯ ಕಡೂರು ಪಟ್ಟಣದ ಲಕ್ಷ್ಮೀಶ್ ನಗರದ ವಾಸಿ, ರಾಷ್ಟೀಯ ಸ್ವಯಂ ಸೇವಕ ಸಂಘದ ಜವಾಬ್ದಾರಿಯನ್ನು ಹೊಂದಿದ್ದ ಡಾ.ಶಶಿಧರ್ ಎಂಬುವವರು ಮನೆಯ ಮುಂದೆ ನಿಲ್ಲಿಸಿದ್ದ ಕಾರಿನ ನಾಲ್ಕು ಚಕ್ರಗಳ ಗಾಳಿಯನ್ನು ತೆಗೆದು, ಕಾರಿನ ಮೇಲೆ ಜಿಹಾದ್, ಕಿಲ್ ಯೂ ಸೇರಿದಂತೆ ಅಶ್ಲೀಲ ಪದಗಳನ್ನು ಬರೆದು ಬಾನೆಟ್, ಗ್ಲಾಸ್ ಮತ್ತು ಎಡಗಡೆಯ ಡೋರ್ ಮೇಲೆ ಕಲ್ಲಿನಿಂದ ಗೀಚಿ ಅಶ್ಲೀಲ ಮತ್ತು ಕೊಲೆ ಬೆದರಿಕೆ ಪದಗಳನ್ನು ಬರೆದಿರುವ ಕುರಿತಾಗಿ ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ:ಶೃಂಗೇರಿ ವಿಧಾನಸಭಾ ಕ್ಷೇತ್ರದ ಶಾಸಕ ಟಿ.ಡಿ ರಾಜೇಗೌಡರಿಗೆ ಕೊಲೆ ಬೆದರಿಕೆ
ಆರೋಪಿಗಳನ್ನು ಪತ್ತೆ ಮಾಡುವ ಸಲುವಾಗಿ ಕಡೂರು PSI ರಮ್ಯ ಅವರ ನೇತೃತ್ವದಲ್ಲಿ ರಚಿಸಿದ ಪೊಲೀಸ್ ತಂಡ ಸಾಂಧರ್ಬಿಕ ಸಾಕ್ಷ್ಯಗಳ ಆಧಾರದ ಮೇರೆಗೆ 48 ಗಂಟೆಯೊಳಗಾಗಿ ಈ ಕೃತ್ಯವನ್ನು ಎಸಗಿದ ಇಬ್ಬರು ಅಪ್ರಾಪ್ತ ವಯಸ್ಸಿನ ಬಾಲಕರನ್ನು ಪತ್ತೆ ಮಾಡಿದ್ದಾರೆ.
ಪ್ರಕರಣದ ಹಿನ್ನೆಲೆ:
ಕೃತ್ಯ ಎಸಗಿರುವ ಇಬ್ಬರು ಬಾಲಕರು ದಿನಾಂಕ 24.09.2022 ರಂದು ರಾತ್ರಿ ಕಡೂರಿನಲ್ಲಿ ಆರ್ಕೆಸ್ಟ್ರಾ ಕಾರ್ಯಕ್ರಮ ನೋಡಿಕೊಂಡು ವಾಪಸ್ ತೆರಳುತ್ತಿದ್ದಾಗ ರಸ್ತೆಯ ಪಕ್ಕದಲ್ಲಿ ನಿಲ್ಲಿಸಿದ್ದ ಕಾರು ಚೆನ್ನಾಗಿದ್ದು, ನಾವು ಈ ರೀತಿಯ ಕಾರನ್ನುಕೊಳ್ಳಲು ಆಗುವುದಿಲ್ಲ, ಆಗದಿದ್ದರೂ ಪರವಾಗಿಲ್ಲ, ಇದನ್ನು ಹಾಳುಮಾಡೋಣವೆಂದು ಈ ಕೃತ್ಯವನ್ನು ಎಸಗಿರುವುದು ಕಂಡು ಬಂದಿದ್ದು ಈ ಸಂಬಂಧ ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.
ಚಿಕ್ಕಮಗಳೂರು: PFI ಕಾರ್ಯಕರ್ತನ ಮನೆ ಮೇಲೆ ಅಧಿಕಾರಿಗಳಿಂದ ದಾಳಿ; ಪರಿಶೀಲನೆ
ಚಿಕ್ಕಮಗಳೂರು: ದೇಶ ವಿರೋಧಿ ಕೃತ್ಯಗಳಲ್ಲಿ ಭಾಗಿಯಾಗಿರುವ ಹಿನ್ನೆಲೆ ಹಾಗೂ ಅನೇಕ ಹಿಂದೂಪರ ಸಂಘಟನೆಗಳ ಕಾರ್ಯಕರ್ತರ ಹಿಂದೆ ಕೈವಾಡ ಹೊಂದಿರುವ ಶಂಕೆಯ ಹಿನ್ನೆಲೆ ಹಾಗೂ ಸಾಕ್ಷಾಧಾರಗಳು ದೊರೆತಿರುವ ಹಿನ್ನೆಲೆ ಕೇಂದ್ರ ಸರ್ಕಾರ ಐದು ವರ್ಷಗಳ ಕಾಲ ದೇಶದ್ರೋಹಿ ಸಂಘಟನೆ ಪಿಎಫ್ಐ ನ್ನು ಬ್ಯಾನ್ ಮಾಡಿ ಆದೇಶ ಹೊರಡಿಸಿತ್ತು.
ಈ ಬೆನ್ನಲ್ಲೇ ಪಿಎಫ್ ಐ ಹಾಗೂ ಎಸ್ ಡಿ ಪಿ ಐ ಕಚೇರಿಗಳ ಮೇಲೆ ಹಾಗೂ ಪ್ರಮುಖರ ಮನೆಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿ ಪ್ರಮುಖ ದಾಖಲೆಗಳನ್ನು ಸಂಗ್ರಹಿಸಿದ್ದರು ಹಾಗೂ ಶಂಕೆ ಇರುವವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ವಿಚಾರಣೆಗೆ ಕರೆದರೂ ಠಾಣೆಗೆ ಹಾಜರಾಗದ ಹಿನ್ನೆಲೆ ಚಿಕ್ಕಮಗಳೂರು ಜಿಲ್ಲೆಯ ಆಲ್ದೂರು ಸಮೀಪದ ವಗಾರ್ ಮೂಲದ ಪಿಎಫ್ಐ ಸಂಘಟನೆಯ ಸಕ್ರಿಯ ಕಾರ್ಯಕರ್ತ ಆರೀಫ್ ಮನೆ ಮೇಲೆ ಪೊಲೀಸರು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಸರ್ಚ್ ವಾರೆಂಟ್ ಹೊಂದಿರುವ ಅಧಿಕಾರಿಗಳು ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಮನೆಯ ಮೇಲೆ ದಾಳಿ ನಡೆಸಿ ಅಗತ್ಯ ಮಾಹಿತಿಗಳನ್ನು ಕಲೆಹಾಕಿದ್ದಾರೆ. ಎರಡು ದಿನಗಳ ಹಿಂದೆ ಪೊಲೀಸರು ಠಾಣೆಗೆ ಹಾಜರಾಗುವಂತೆ ಆರೀಫ್ ಗೆ ಪೊಲೀಸರು ಸೂಚಿಸಿದ್ದರು. ಸೂಚನೆಯನ್ನು ಪಾಲಿಸದ ಹಿನ್ನೆಲೆ ಅಧಿಕಾರಿಗಳೇ ದಾಳಿ ನಡೆಸಿ ಮಾಹಿತಿ ಕಲೆ ಹಾಕಿದ್ದಾರೆ.
ಈ ದಾಳಿಯಲ್ಲಿ ದೂರು ಠಾಣೆಯ ಸಿಪಿಐ ಸತ್ಯನಾರಾಯಣ, ಪಿಎಸ್ಐ ಸಜಿತ್ ಕೀರ್ತಿ ಕುಮಾರ್ ಹಾಗೂ ಠಾಣೆಯ ಸಿಬ್ಬಂದಿಗಳು ಹಾಜರಿದ್ದರು. ಅಂತಯೇ ಕಂದಾಯ ಇಲಾಖೆಯ ಅಧಿಕಾರಿಗಳು ಕೂಡ ಈ ಕಾರ್ಯಾಚರಣೆಗೆ ಸಾತ್ ನೀಡಿದ್ದಾರೆ.
ಪಿ ಎಫ್ ಐ ಬ್ಯಾನ್ ಆದೇಶದ ನಂತರದಲ್ಲಿ ರಾಜ್ಯದಲ್ಲಿರುವ ಪಿ ಎಫ್ ಐ ಕಛೇರಿಗಳಿಗೆ ಪೊಲೀಸರು ಬೀಗ ಹಾಕಿ ಈ ಸಂಘಟನೆಗಳ ಪ್ರಮುಖರನ್ನು ಹಾಗೂ ಕಾರ್ಯಕರ್ತರನ್ನು ವಶಕ್ಕೆ ಪಡೆದು ಅವರ ಮನೆಗಳ ಮೇಲೂ ದಾಳಿ ನಡೆಸಿದ್ದಾರೆ.








0 Comments