ಶಿವಮೊಗ್ಗ: (ನ್ಯೂಸ್ ಮಲ್ನಾಡ್ ವರದಿ) ಕೋಳಿ ಫಾರಂ ಗೆ ನುಗ್ಗಿದ ಭಾರೀ ಗಾತ್ರದ ಹೆಬ್ಬಾವನ್ನು ಸ್ನೇಕ್ ಕಿರಣ್ ಹಿಡಿದು ಸುರಕ್ಷಿತವಾಗಿ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.

ಇದನ್ನೂ ಓದಿ: ಚಿಕ್ಕಮಗಳೂರು: ನಡು ರಸ್ತೆಯಲ್ಲಿ ಬೈಕ್ ವೀಲಿಂಗ್ ನಡೆಸುತ್ತಿದ್ದ ವ್ಯಕ್ತಿಯನ್ನು ಬೈಕ್ ಸಮೇತ ವಶಕ್ಕೆ ಪಡೆದ ಪೊಲೀಸರು

ಶಿವಮೊಗ್ಗ ತಾಲೂಕಿನ ಗಾಜನೂರು ತುಂಗಾ ಅಣೆಕಟ್ಟೆ ಬಳಿಯ ಲಕ್ಷ್ಮೀ ಕೋಳಿ ಫಾರಂನಲ್ಲಿ ಸುಮಾರು ಏಳೂವರೆ ಅಡಿ ಉದ್ದದ ಹೆಬ್ಬಾವು ಕೋಳಿ‌ ಫಾರಂ ಪಕ್ಕದ ಅಡಿಕೆ ತೋಟದಲ್ಲಿ ಕಂಡಿತ್ತು. ಈ ಹಾವನ್ನು ಕಂಡಿದ್ದ ತೋಟದ ಕೆಲಸಕ್ಕೆ ಬಂದವರು ಗಾಬರಿಗೊಳಗಾಗಿದ್ದರು. 


ಈ ಕುರಿತಾಗಿ ವಿಷಯ ತಿಳಿದ ಕೂಡಲೇ ತೋಟದ ಮಾಲೀಕ ರಾಕೇಶ್, ಸ್ನೇಕ್ ಕಿರಣ್​ಗೆ ಕರೆ ಮಾಡಿ ವಿಚಾರ ತಿಳಿಸಿ ಹೆಬ್ಬಾವನ್ನು ಸೆರೆ ಹಿಡಿಸಿದ್ದಾರೆ. 

ಹೆಬ್ಬಾವು ಹಿಡಿಯುತ್ತಿದ್ದಂತೆಯೇ ಸ್ನೇಕ್ ಕಿರಣ್ ಕೈಗೆ ಸುತ್ತಿಕೊಂಡಿತ್ತು. ಈ ವೇಳೆ ನೆರೆದವರು ಮತ್ತಷ್ಟು ಗಾಬರಿಯ ಜೊತೆಗೆ ಆಶ್ಚರ್ಯಚಕಿತರಾದರು. ಕೆಲ ಸಮಯದ ನಂತರ ಹಾವನ್ನು ನಿಧಾನವಾಗಿ ಕೈಯಿಂದ ಬಿಡಿಸಿಕೊಂಡು ನಿಧಾನಗತಿಯಲ್ಲಿ ಸ್ನೇಕ್ ಕಿರಣ್ ಹೆಬ್ಬಾವು ನ್ನು ಚೀಲಕ್ಕೆ ಹಾಕಿ ಅರಣ್ಯಾಧಿಕಾರಿಗಳ ಸಮ್ಮುಖದಲ್ಲಿ ಕಾಡಿಗೆ ಬಿಟ್ಟರು.

ಜೊತೆಗೆ ತೋಟದ ಮಾಲೀಕರು, ಸ್ಥಳಿಯರು ಹಾಗೂ ಕೆಲಸಗಾರರಿಗೆ ಹೆಬ್ಬಾವಿನ ಬಗ್ಗೆ ಮಾಹಿತಿ ನೀಡಿದ್ದಾರೆ. ಭಾರೀ ಗಾತ್ರದ ಹೆಬ್ಬಾವನ್ನು ಹಿಡಿದ ಸ್ನೇಕ್ ಕಿರಣ್ ಅವರನ್ನು ಜನರು ಪ್ರಶಂಸಿಸಿ ಅವರೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡರು.