ಶಿವಮೊಗ್ಗ: (ನ್ಯೂಸ್ ಮಲ್ನಾಡ್ ವರದಿ) ಚಲಿಸುತ್ತಿದ್ದ ರೈಲನ್ನು ಹತ್ತಲು ಹೋಗಿ ತಂದೆ ಹಾಗೂ ಮಗ ಆಯತಪ್ಪಿ ಬಿದ್ದು ರೈಲಿಗೆ ಸಿಲುಕಿ ದಾರುಣವಾಗಿ ಸಾವನ್ನಪ್ಪಿರುವ ದುರ್ಘಟನೆ ಶಿವಮೊಗ್ಗದಲ್ಲಿ ಸಂಭವಿಸಿದೆ.

ಇದನ್ನೂ ಓದಿ: ಎಲೆಚುಕ್ಕಿ ರೋಗ ಮಾರಕವಲ್ಲ, ವೈಜ್ಞಾನಿಕ ಕ್ರಮ ಹಾಗೂ ಅನುಕರಣೆಯಿಂದ ಗುಣಪಡಿಸಬಹುದು: ಡಾ.ಪ್ರಕಾಶ್

ಶಿವಮೊಗ್ಗದ ಭದ್ರಾವತಿ ರೈಲು ನಿಲ್ದಾಣದಲ್ಲಿ ಈ ಘಟನೆ ಸಂಭವಿಸಿದ್ದು ತಾಳಗುಪ್ಪ, ಬೆಂಗಳೂರು, ಮೈಸೂರು ಎಕ್ಸ್ ಪ್ರೆಸ್ ರೈಲು ಚಲಿಸುತ್ತಿದ್ದ ವೇಳೆ ಓಡಿಬಂದು ರೈಲನ್ನು ಹತ್ತುವ ಸಲುವಾಗಿ ಓಡೋಡಿ ಬಂದ ತಂದೆ ಹಾಗೂ ಮಗ ಅಚಾನಕ್ಕಾಗಿ ರೈಲಿನ ಅಡಿಭಾಗಕ್ಕೆ ಸಿಲುಕಿ ಮೃತಪಟ್ಟಿದ್ದಾರೆ. 


ಮೊದಲಿಗೆ ಕಾಲುಜಾರಿ ಬಿದ್ದ ಮಗ ರೈಲಿನ ಅಡಿಭಾಗಕ್ಕೆ ಸಿಲುಕಿದ್ದಾನೆ. ಈ ವೇಳೆ ಆತನ ರಕ್ಷಣೆಗೆ ಮುಂದಾದ ತಂದೆಯೂ ಸಹ ಕಾಲುಜಾರಿ ಬಿದ್ದು ಸಾವನ್ನಪ್ಪಿದ್ದಾರೆ. ಈ ಅವಘಡದಲ್ಲಿ ಮೃತಪಟ್ಟ ತಂದೆಯನ್ನು ಮೋಹನ್ ದಾಸ್ (70) ಎಂದು ಗುರುತಿಸಲಾಗಿದೆ ಹಾಗೂ ಮೃತನಾದ ಮಗನನ್ನು ಅಮರನಾಥ್ ಎಂದು ಗುರುತಿಸಲಾಗಿದೆ.

ಗಂಭೀರವಾಗಿ ತಲೆಯ ಭಾಗಕ್ಕೆ ಪೆಟ್ಟಾದ ಪರಿಣಾಮ ತಂದೆ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಪುತ್ರ ಆಸ್ಪತ್ರೆಗೆ ಕೊಂಡೊಯ್ಯುವ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾನೆ. ಅವಸರವೇ ಈ ಘಟನೆಗೆ ಕಾರಣಗಳು ಎನ್ನಲಾಗಿದ್ದು ಇಬ್ಬರು ಈ ದುರಂತದಲ್ಲಿ ಅಂತ್ಯಕಂಡಿದ್ದಾರೆ.