ಕೊಡಗು: (ನ್ಯೂಸ್ ಮಲ್ನಾಡ್ ವರದಿ) ವಸತಿ ಗೃಹದಲ್ಲಿ ಶಿಕ್ಷಣ ಇಲಾಖೆಯ ಸೂಪರಿಂಟೆಂಡೆಂಟ್ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ವರದಿಯಾಗಿದೆ.
ಇದನ್ನೂ ಓದಿ: ಸ್ಮಶಾನಕ್ಕೆ ತೆರಳಲು ದಾರಿಯಿಲ್ಲದೆ ಜನರ ಪರದಾಟ: ಮೊಣಕಾಲುದ್ದ ನೀರಲ್ಲೇ ಎರಡು ದಿನಗಳ ನಂತರ ಶವವನ್ನು ಹೊತ್ತೊಯ್ದ ಸಂಬಂಧಿಕರು
ಮಡಿಕೇರಿಯ ಹಳೇ ಬಸ್ ನಿಲ್ದಾಣದ ವಸತಿಗೃಹದಲ್ಲಿ ಮಂಗಳೂರಿನ ಬಜ್ಪೆ ಮೂಲದ ಶಿವಾನಂದ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಂಗಳೂರು ದಕ್ಷಿಣ ವಿಭಾಗದ ಬಿಇಓ ಕಚೇರಿಯಲ್ಲಿ ಸೂಪರಿಂಟೆಂಡೆಂಟ್ ಆಗಿ ಸೇವೆ ಸಲ್ಲಿಸುತ್ತಿದ್ದ ಶಿವಾನಂದ್ ಅವರು ಮಡಿಕೇರಿಯ ವಸತಿ ಗೃಹದಲ್ಲಿ ತಂಗಿದ್ದರು. ಈ ಮಧ್ಯೆಯೇ ಆತ್ಮಹತ್ಯೆಗೆ ಶರಣಾಗಿರುವುದು ಬೆಳಕಿಗೆ ಬಂದಿದೆ.
ಘಟನಾ ಸ್ಥಳಕ್ಕೆ ಮಡಿಕೇರಿ ನಗರಠಾಣಾ ಪೊಲೀಸರು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ, ಈ ಸಂಬಂಧ ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದು ಶಿವಾನಂದ್ ಸಾವಿನ ಕುರಿತು ಕುಟುಂಬಸ್ಥರು ನೋವನ್ನು ವ್ಯಕ್ತಪಡಿಸಿದ್ದಾರೆ.





0 Comments