ಶಿವಮೊಗ್ಗ: (ನ್ಯೂಸ್ ಮಲ್ನಾಡ್ ವರದಿ) ಯುವಕನೋರ್ವ ಮನನೊಂದು ನೇಣಿಗೆ ಶರಣಾಗಿದ್ದು ಸಾಯುವ ಮುನ್ನ ಅಂಗಾಂಗದಾನಕ್ಕೆ ಬರೆದಿಟ್ಟು ಸಾವಿಗೆ ಕಾರಣ ಅತ್ಯಾಚಾರದ ಆರೋಪ ಎಂಬುದಾಗಿ ಕೇಳಿಬಂದಿದೆ.
ಇದನ್ನೂ ಓದಿ: ಅಕ್ರಮ ಸಂಬಂಧ ಹೊಂದಿದ್ದ ಮಹಿಳೆಯನ್ನು ಚಾಕುವಿನಿಂದ ಕೊಲೆಗೈದ ಕ್ರೂರಿ
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನಲ್ಲಿ ಯುವಕ ಮದನ್ ಆತ್ಮಹತ್ಯೆ ಮಾಡಿಕೊಂಡಿದ್ದು, ಇದಕ್ಕೆ ಭಗ್ನ ಪ್ರೇಮ ಪ್ರಕರಣ ಹಾಗೂ ಅತ್ಯಾಚಾರದ ದೂರು ಕಾರಣವಾಗಿದೆ ಎಂದು ತಿಳಿದುಬಂದಿದೆ.
ಹಿತ್ತಲ ಗ್ರಾಮದ ಮದನ್ ಕುಮಾರ್ (24) ಮೃತ ಯುವಕ. ವೈರಿಂಗ್ ಕೆಲಸ ಮಾಡಿಕೊಂಡಿದ್ದ ಮದನ್ ಕುಮಾರ್ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪ್ರೇಮಪ್ರಕರಣ ಆತ್ಮಹತ್ಯೆಗೆ ಕಾರಣ ಎಂಬುದಾಗಿ ಕುಟುಂಬಸ್ಥರು ಆರೋಪಿಸಿದ್ದಾರೆ.
ಅದೇ ಗ್ರಾಮದ ಯುವತಿಯನ್ನು ಮದನ್ ಕುಮಾರ್ ಪ್ರೀತಿಸುತ್ತಿದ್ದ ಎನ್ನಲಾಗಿದ್ದು, ಹಲವು ವರ್ಷಗಳಿಂದ ಇಬ್ಬರ ನಡುವೆ ಪ್ರೀತಿಯಿತ್ತು. ಆದರೆ ಯುವತಿ ಮನೆಯವರಿಂದ ಈತನ ಮೇಲೆ ನಿರಂತರವಾಗಿ ಕಿರುಕುಳ ನಡೆಯುತ್ತಿತ್ತು ಎನ್ನಲಾಗಿದ್ದು ಅವರು ಮದನ್ ಕುಮಾರ್ ಮೇಲೆ ಅತ್ಯಾಚಾರ ದೂರು ದಾಖಲಿಸಿದ್ದರು. ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿತ್ತು. ಯುವತಿ ಮನೆಯವರು 25 ಲಕ್ಷ ರೂ. ನೀಡಲು ಒತ್ತಡ ಹಾಕಿದ್ದರು ಎಂದು ಯುವಕನ ಕುಟುಂಬದವರು ಆರೋಪಿಸಿದ್ದು, ಸಾವಿಗೆ ಕಾರಣರಾದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಈ ನಡುವೆ, ಡೆತ್ ನೋಟ್ ಬರೆದಿಟ್ಟಿರುವ ಯುವಕ, ತನ್ನ ಕಣ್ಣು ಮತ್ತಿತರ ಅಂಗಾಂಗಗಳನ್ನು ದಾನ ಮಾಡುವಂತೆಯೂ ಬರೆದಿಟ್ಟಿದ್ದಾನೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.





0 Comments