ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಅಕ್ರಮವಾಗಿ ಮದ್ಯ ಮಾರಾಟದಲ್ಲಿ ಭಾಗಿಯಾಗಿದ್ದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ಆತನಿಂದ ಮದ್ಯವನ್ನು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: ಸೊಸೈಟಿಗೊಬ್ಬರ ಗುಣಮಟ್ಟ ಸಂಪೂರ್ಣ ಕಳಪೆ ರೈತರ ಆರೋಪ | ಸೂಕ್ತ ಪರಿಹಾರ ಹಾಗೂ ಕಳಪೆಗೊಬ್ಬರ ಸರಬರಾಜು ಕಂಪನಿ ಮೇಲೆ ಕ್ರಮಕ್ಕೆ ಆಗ್ರಹ
ಚಿಕ್ಕಮಗಳೂರು ಜಿಲ್ಲೆಯ ಆಲ್ದೂರು ಪೊಲೀಸ್ ಠಾಣಾ ಸರಹದ್ದಿನ ಬಸರವಳ್ಳಿ ಗ್ರಾಮದಲ್ಲಿ ಪಿ.ಎಸ್.ಐ. ಆಲ್ದೂರು ಪೊಲೀಸ್ ಠಾಣೆ ಮತ್ತು ಸಿಬ್ಬಂದಿಗಳು ಮಾಹಿತಿ ಮೇರೆಗೆ ದಾಳಿ ನಡೆಸಿದ್ದು, ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಆಲ್ದೂರು ವಾಸಿ ನವೀನ ಬಿ.ಜಿ ಎಂಬ 38 ವರ್ಷ ಪ್ರಾಯದ ವ್ಯಕ್ತಿಯನ್ನು ವಶಕ್ಕೆ ಪಡೆದುಕೊಂಡು ಆತನ ಬಳಿಯಿದ್ದ 7,412 ರೂಪಾಯಿ ಮೌಲ್ಯದ, ಸುಮಾರು 23 ಲೀಟರ್ ರಷ್ಟು ಮದ್ಯವನ್ನು ವಶಪಡಿಸಿಕೊಂಡಿದ್ದಾರೆ.
ಈ ಕುರಿತು ಆಲ್ದೂರು ಪೊಲೀಸ್ ಠಾಣಾ ಮೊ.ನಂ. 101/2022 ಕಲಂ, 32, 34 ಕೆ.ಇ. ಆಕ್ಟ್ ರೀತ್ಯಾ ಪ್ರಕರಣ ದಾಖಲಾಗಿದ್ದು ಈ ಜಾಲದ ಕುರಿತು ಪೊಲೀಸರು ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ.
ಜಾಮೀನು ರಹಿತ ವಾರೆಂಟ್ ಗಳ ಪರಿಣಾಮಕಾರಿ ಜಾರಿ: ಪೊಲೀಸರಿಗೆ ಉನ್ನತ ಅಧಿಕಾರಿಗಳಿಂದ ನಗದು ಬಹುಮಾನ :
ಆಲ್ದೂರು ಪೊಲೀಸ್ ಠಾಣೆಯಲ್ಲಿ 2017 ರಿಂದ 2020 ನೇ ಸಾಲಿನಲ್ಲಿ ದಾಖಲಾದ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿರುವ ವಿವಿಧ ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೇ ಇರುವ ಆರೋಪಿಗಳ ವಿರುದ್ಧ ವಿವಿಧ ನ್ಯಾಯಾಲಯಗಳಲ್ಲಿ 5 ರಿಂದ 11 ಬಾರಿ ಜಾಮೀನು ರಹಿತ ವಾರೆಂಟ್ ಗಳನ್ನು ನ್ಯಾಯಾಲಯ ಜಾರಿ ಮಾಡಿತ್ತು. ಈ ರೀತಿಯ ಒಟ್ಟು 9 ಪ್ರಕರಣಗಳ ಆರೋಪಿಗಳನ್ನು ಪತ್ತೆ ಮಾಡಿದ ಪೊಲೀಸರು, ವಾರೆಂಟ್ ಜಾರಿ ಮಾಡಿ, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಈ ಕಾರ್ಯವನ್ನು ಆಲ್ದೂರು ಪೊಲೀಸ್ ಠಾಣೆಯ ಎ.ಎಸ್.ಐ. ಪ್ರಕಾಶ್, H.C ಅಬ್ದುಲ್ ಕರೀಂ ಮತ್ತು P.C ಜಯಕುಮಾರ್ ಬಿ. ರವರು ನಿರ್ವಹಿಸಿದ್ದು ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿವರ್ಗಕ್ಕೆ ಪೊಲೀಸ್ ಅಧೀಕ್ಷಕರವರು ನಗದು ಬಹುಮಾನ ನೀಡಿದ್ದಾರೆ.





0 Comments