ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಕೇಂದ್ರ ಸರ್ಕಾರವು ದೇಶದ ಆಂತರಿಕ ಭದ್ರತೆ ಹಾಗೂ ಭಯೋತ್ಪಾದಕ ಸಂಘಟನೆಗಳ ಜೊತೆಗೆ ಕೈ ಜೋಡಿಸಿರುವ ಆರೋಪದ ಮೇಲೆ ಹಾಗೂ ಸಾಕ್ಷ್ಯಾಧಾರಗಳನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಹೊಂದಿರುವುದರಿಂದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯನ್ನು ಐದು ವರ್ಷಗಳ ಕಾಲ ಬ್ಯಾನ್ ಮಾಡಿದ್ದು, ಈ ಕುರಿತಾಗಿ ಶೃಂಗೇರಿ ಭಾಜಪಾ ಪದಾಧಿಕಾರಿಗಳು ಶೃಂಗೇರಿ ಪಟ್ಟಣದಲ್ಲಿರುವ ಭಾರತೀಯ ಜನತಾ ಪಾರ್ಟಿಯ ಕಛೇರಿಯಲ್ಲಿ ಸುದ್ದಿ ಘೋಷ್ಠಿಯನ್ನು ನಡೆಸಿದರು.
ಇದನ್ನೂ ಓದಿ: ಕಾಂಗ್ರೆಸ್ ಮತಬ್ಯಾಂಕ್ ಓಲೈಕೆಯ ರಾಜಕಾರಣಕ್ಕಾಗಿ ದೇಶವನ್ನು ಬಲಿಕೊಟ್ಟಿತು - ನಾಗೇಶ್ ಅಂಗೀರಸ
ಬಿಜೆಪಿ ಮತ್ತು ಹಿಂದೂ ಸಂಘಟನೆಗಳು ಈ ಹಿಂದಿನಿಂದಲೂ ವ್ಯಕ್ತಪಡಿಸಿದ ಆಗ್ರಹದಂತೆ ಹಿಂದೂ ಕಾರ್ಯಕರ್ತರ ಕಗ್ಗೊಲೆಗೆ ಕಾರಣವಾಗಿರುವ ದೇಶದ್ರೋಹಿ ಮತಾಂಧ ಸಂಘಟನೆ ಪಿಎಫ್ಐ ನ್ನು ನಿಷೇಧಿಸಿರುವುದು ಅತ್ಯಂತ ಸ್ವಾಗತಾರ್ಹ ಕೇಂದ್ರದ ಈ ಆದೇಶವು ಅತ್ಯಂತ ಶ್ಲಾಘನೀಯ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಂಬಳೂರು ರಾಮಕೃಷ್ಣ ಕೇಂದ್ರದ ನಡೆಗೆ ಸಂತಸ ವ್ಯಕ್ತಪಡಿಸಿದರು.
ದೇಶದ ಮುಸ್ಲಿಮರಿಗಿಂತ ಸಿದ್ಧರಾಮಯ್ಯ ಅಪಾಯಕಾರಿ:
ಭಾರತದಲ್ಲಿರುವ ಮುಸಲ್ಮಾನರಿಗಿಂತ ಅವರನ್ನು ಓಲೈಕೆ ಮಾಡುತ್ತಾ ಬಂದಿರುವ ಮಾಜಿ ಮುಖ್ಯಮಂತ್ರಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅತ್ಯಂತ ಅಪಾಯಕಾರಿ. ಭಯೋತ್ಪಾದಕ ಸಂಘಟನೆ ಪಿಎಫ್ಐ ಗೆ ನಿಷೇಧ ಹೇರಿರುವುದನ್ನು ಸಹಿಸದ ಅವರು ರಾಷ್ಟ್ರ ಭಕ್ತಿಯನ್ನು ಇಮ್ಮಡಿಗೊಳಿಸುವ ರಾಷ್ಟ್ರಭಕ್ತ ಸಂಘಟನೆ RSS ನ್ನು ನಿಷೇಧ ಮಾಡಬೇಕೆಂದು ಆಗ್ರಹಿಸುತ್ತಾರೆ. ಈ ರೀತಿಯ ಹೇಳಿಕೆಗಳು ಅವರ ಮನಸ್ಥಿತಿಯನ್ನು ತೋರಿಸುತ್ತದೆ. ಈ ರೀತಿಯ ಮಾನಸಿಕತೆಯಲ್ಲಿ ಅವರಿರುವುದು ಅತ್ಯಂತ ದುರಾದೃಷ್ಟಕರ ಹಾಗೂ ಅಪಾಯಕಾರಿ ಇದಲ್ಲದೇ ಅಕ್ರಮವಾಗಿ ಉಗ್ರ ಕೃತ್ಯಗಳಿಗೆ ಪಿಎಫ್ಐ ನಿಂದ ಹಣ ವರ್ಗಾವಣೆ ಆಗಿದ್ದು ಈ ರೀತಿಯ ಫಂಡಿಂಗ್ ನ್ನು ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯ ಕೂಡ ಪಡೆದಿರಬಹುದು ಈ ಕುರಿತೂ ತನಿಖೆಯಾಗಬೇಕು ಎಂದು ಅಂಬಳೂರು ರಾಮಕೃಷ್ಣ ಅವರು ಸಿದ್ದರಾಮಯ್ಯ ನೀಡಿರುವ ಹೇಳಿಕೆ ಕುರಿತು ಮಾತನಾಡಿದರು.
ದೇಶದ ಆಂತರಿಕ ಅಭದ್ರತೆಗೆ ಮದರಸಗಳೇ ಕಾರಣ:
ದೇಶದಲ್ಲಿರುವ ಮದರಸಗಳಿಂದ ದೇಶಕ್ಕೆ ಸಲ್ಲುತ್ತಿರುವ ಕೊಡುಗೆಯ ಕುರಿತು ತನಿಖೆಯಾಗಬೇಕು, ಅಪಾಯಕಾರಿ ಬೆಳವಣಿಗೆಗಳಿಗೆ ಆಂತರಿಕ ಅಭದ್ರತೆಗೆ ಮದರಸಗಳು ಕೂಡ ಕಾರಣ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಮಾತನಾಡಿದರು. ಶೃಂಗೇರಿ ದೇವಸ್ಥಾನಕ್ಕೆ ಉಗ್ರರು ದುಷ್ಕೃತ್ಯ ನಡೆಸುವ ಸಂಚು ನಡೆದಿತ್ತು ಎಂದು ಪತ್ರಿಕೆಗಳಲ್ಲಿ ಪ್ರಕಟಗೊಂಡಿತ್ತು, ಹೀಗಿರುವಾಗ ಶೃಂಗೇರಿ ದೇವಸ್ಥಾನಕ್ಕೆ ಬುರ್ಖಾ ಧರಿಸಿಕೊಂಡು ಅನೇಕರು ಬರುತ್ತಿದ್ದು, ಮಾಲ್ ಗಳಲ್ಲಿ ಬುರ್ಖಾಧರಿಸಿ ಮಾಡಿರುವ ಕುತಂತ್ರಗಳು ಷಡ್ಯಂತ್ರಗಳು ಹೆಚ್ಚು. ಆದ್ದರಿಂದ ದೇವಸ್ಥಾನದಲ್ಲಿ ಯಾವುದೇ ರೀತಿಯ ಗೊಂದಲದ ವಾತಾವರಣಗಳು ಸಮಸ್ಯೆಗಳು ಉಂಟಾಗದ ರೀತಿಯಲ್ಲಿ ಈ ಕುರಿತಾಗಿ ಸ್ಥಳೀಯ ಪೊಲೀಸರು ಹೆಚ್ಚಿನ ನಿಗಾವಹಿಸಬೇಕು ಎಂದರು.
ಈ ಸಮಯದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಂಬಳೂರು ರಾಮಕೃಷ್ಣ, ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಹರೀಶ್ ವಿ ಶೆಟ್ಟಿ, ಭಾಜಪದ ವೇಣುಗೋಪಾಲ್, ರಾಷ್ಟ್ರೀಯ ಸ್ವಯಂಸೇವಕ ಸಂಘದ ನೂತನ್ ಸೂರ್ಯ, ಶ್ರೀರಾಮ ಸೇನೆಯ ಜಿಲ್ಲಾ ಪದಾಧಿಕಾರಿ ಅರ್ಜುನ್, ಬಜರಂಗದಳದ ತಾಲೂಕು ಸಂಯೋಜಕ ರವಿ ಸಂಜಯ್, ಬಿಜೆಪಿ ಯುವ ಮೋರ್ಚಾದ ತಾಲೂಕು ಅಧ್ಯಕ್ಷ ಸುನಿಲ್ ಸಂಪೇಕೊಳಲು ಉಪಸ್ಥಿತರಿದ್ದರು.








0 Comments