ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಶಾರದಾ ಧನ್ವಂತರಿ ಚಾರಿಟೇಬಲ್ ಆಸ್ಪತ್ರೆ ಶೃಂಗೇರಿ ಇವರ ಆಶ್ರಯದಲ್ಲಿ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ, ತಾಲೂಕು ಪತ್ರಕರ್ತರ ಸಂಘ ಶೃಂಗೇರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಅಂಧತ್ವ ನಿವಾರಣಾ ಘಟಕ ಚಿಕ್ಕಮಗಳೂರು ಇವರ ಸಹಭಾಗಿತ್ವದಲ್ಲಿ ಇಂದು ಶೃಂಗೇರಿಯ ಶಾರದಾ ಧನ್ವಂತರಿ ಆಸ್ಪತ್ರೆಯಲ್ಲಿ ಉಚಿತ ನೇತ್ರ ತಪಾಸಣಾ ಮತ್ತು ಶಸ್ತ್ರಚಿಕಿತ್ಸಾ ಶಿಬಿರ ನಡೆಯಿತು.
ಈ ಶಿಬಿರದಲ್ಲಿ ನೇತ್ರ ಸಮಸ್ಯೆಯುಳ್ಳ ಶೃಂಗೇರಿಯ ಅನೇಕ ಸಾರ್ವಜನಿಕರು ಭಾಗವಹಿಸಿ ತಮಗಿರುವ ಸಮಸ್ಯೆಗಳ ಕುರಿತು ವೈದ್ಯರಲ್ಲಿ ಪರೀಕ್ಷೆ ನಡೆಸಿ ಸಲಹೆ ಹಾಗೂ ಚಿಕಿತ್ಸೆ ಕುರಿತು ಮಾಹಿತಿ ಪಡೆದರು. ಕೆ.ಎಂ.ಸಿ ಮಣಿಪಾಲ ಆಸ್ಪತ್ರೆಯ ಡಾಕ್ಟರ್ ಶೃತಿ ವಿಜೇಂದ್ರನ್ ಸೇರಿದಂತೆ ಮೂವರು ವೈದ್ಯಾಧಿಕಾರಿಗಳು ಈ ಶಿಬಿರದಲ್ಲಿ ಪಾಲ್ಗೊಂಡು ರೋಗಿಗಳ ಸಮಸ್ಯೆಯನ್ನು ಆಲಿಸಿ ಚಿಕಿತ್ಸೆಯ ಕುರಿತಾದ ಹೆಚ್ಚಿನ ಮಾಹಿತಿಯನ್ನು ಪಡೆದರು.
![]() |
ಕಾರ್ಯಕ್ರಮದ ಕುರಿತು ಮಾತನಾಡಿದ ಆಸ್ಪತ್ರೆಯ ಕಾರ್ಯದರ್ಶಿ ಶೈಲಜಾ ರತ್ನಾಕರ ಹೆಗ್ಡೆ ಅತೀ ಉತ್ತಮವಾದ ವೈದ್ಯರ ತಂಡ ರೋಗಿಗಳ ಕಣ್ಣಿನ ಪರೀಕ್ಷೆಯನ್ನು ನಡೆಸುತ್ತಾ ಬಂದಿದೆ. ರೋಗಿಗಳ ಸೇವೆ ಮಾಡುವಲ್ಲಿ ಕಣ್ಣಿನ ಸಮಸ್ಯೆಗಳನ್ನು ಪರಿಹರಿಸುವಲ್ಲಿ ವೈದ್ಯರೂ ಶ್ರಮಿಸುತ್ತಿದ್ದು ಅಗತ್ಯವಿದ್ದವರು ಈ ಶಿಬಿರದ ಸದುಪಯೋಗವನ್ನು ಪಡಿಸಿಕೊಳ್ಳಬೇಕು ಎಂದರು.
ಈ ಕುರಿತು ಮಾತನಾಡಿದ ಡಾ. ಶೃತಿ ಕಣ್ಣಿನ ಆರೈಕೆಯನ್ನು ಸರ್ವರೂ ಮಾಡುವುದು ಮುಖ್ಯ, ಹಾಗೂ ಯಾವುದೇ ರೀತಿಯ ಕಣ್ಣಿನ ಸಮಸ್ಯೆಗಳಿದ್ದಲ್ಲಿ ಮುಕ್ತವಾಗಿ ವೈದ್ಯರೊಂದಿಗೆ ತಿಳಿಸುವಂತೆ ಸೂಚಿಸಿದರು. ಅನೇಕ ಸಂಖ್ಯೆಯಲ್ಲಿ ಕಣ್ಣಿನ ಸಮಸ್ಯೆ ಹೊಂದಿದ್ದ ರೋಗಿಗಳು ಕಣ್ಣಿನ ಪರೀಕ್ಷೆಗೆ ಒಳಪಟ್ಟು ವೈದ್ಯರಿಂದ ಸಲಹೆ ಪಡೆದರು.
ಈ ಶಿಬಿರದಲ್ಲಿ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಅನಂತ ನಾರಾಯಣ, ಕಾರ್ಯದರ್ಶಿ ಶೈಲಜಾ ರತ್ನಾಕರ್ ಹೆಗ್ಡೆ, ಆಸ್ಪತ್ರೆ ಸಂಪರ್ಕಾಧಿಕಾರಿ ಬಿ.ಎನ್ ಕೃಷ್ಣ, ಕೆ.ಎಂ.ಸಿ ಮಣಿಪಾಲ ಆಸ್ಪತ್ರೆಯ ಡಾಕ್ಟರ್ ಶೃತಿ ವಿಜೇಂದ್ರನ್, ತಾಲೂಕು ಪತ್ರಕರ್ತರ ಸಂಘದ ಉಪಾಧ್ಯಕ್ಷರಾದ ಗೋಪಾಲಕೃಷ್ಣ, ಪತ್ರಕರ್ತರ ಸಂಘದ ರಮೇಶ್ ಕರುವಾನೆ, ಸುಬ್ರಮಣ್ಯ ಆಚಾರ್ ಇದ್ದರು.






0 Comments