ನರಸಿಂಹರಾಜಪುರ: (ನ್ಯೂಸ್ ಮಲ್ನಾಡ್ ವರದಿ) ಮಗಳ ನಿಶ್ಚಿತಾರ್ಥಕ್ಕಾಗಿ ಸಾಕಿದ ಹಸುವನ್ನೇ ಮಾಂಸಕ್ಕಾಗಿ ಕಡಿದು ಹಾಕಿರುವ ದಾರುಣ ಘಟನೆ ವರದಿಯಾಗಿದೆ. 

ಇದನ್ನೂ ಓದಿ: ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಅಧಿಕಾರಿಗಳಿಗೆ ಸೆರೆಸಿಕ್ಕ ಭ್ರಷ್ಟ ಅಧಿಕಾರಿ

ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ಈಚಿಕೆರೆ ಗ್ರಾಮದ ರೋಷನ್ ಎಂಬುವವರ ಮನೆಯಲ್ಲಿ ಮಗಳ ನಿಶ್ಚಿತಾರ್ಥದ ಹಿನ್ನೆಲೆ ಸಾಕಿದ ಹಸುವನ್ನು ಕಡಿದು ಮಾಂಸಮಾಡಲಾಗಿದೆ. ನಿಶ್ಚಿತಾರ್ಥಕ್ಕೆ ಬಂದವರ ಊಟಕ್ಕಾಗಿ ಗೋಮಾಂಸವನ್ನು ಮಾಡಲಾಗಿದ್ದು ವಿಷಯ ತಿಳಿಯುತ್ತಿದ್ದಂತೆಯೇ ದಾಳಿ ನಡೆಸಿದ ಪೊಲೀಸರು ಇಬ್ಬರನ್ನು ಬಂಧಿಸಿ ತಲೆ ಮರೆಸಿಕೊಂಡಿರುವ ಆರೋಪಿಗಳಿಗಾಗಿ ಶೋಧ ಮುಂದುವರೆಸಿದ್ದಾರೆ. 


ಇನ್ನೂ ಮೂವರು ಆರೋಪಿಗಳಾದ ರೋಷನ್, ದೀಕ್ಷಿತ್, ದೇವಸಿ ಎಂಬುವವರು ಸ್ಥಳದಿಂದ ಕಾಲ್ಕಿತ್ತಿದ್ದಾರೆ ಎನ್ನಲಾಗಿದ್ದು ಮೂವರಿಗಾಗಿ ಪೊಲೀಸರು ಈ ಕುರಿತಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ. 

ಮಾನವೀಯತೆ ಇಲ್ಲದೆ ಈ ರೀತಿಯ ಘಟನೆಗಳು ನಡೆಯುತ್ತಿದೆ, ಪ್ರತಿದಿನ ಹಾಲನ್ನು ಕುಡಿಯುವ ಹಸುವನ್ನು ಎಗ್ಗಿಲ್ಲದೇ ಗೋಹಂತಕರು ಕಡಿದು ಹಾಕುತ್ತಿದ್ದಾರೆ, ಕಟುಕರ ನೀಚ ಕೃತ್ಯಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಇಲಾಖೆ ಇಂತಹ ಇನ್ನಷ್ಟು ಕಾರ್ಯಾಚರಣೆಗಳನ್ನು ನಡೆಸಿ ಆರೋಪಿಗಳಿಗೆ ಗೋಹತ್ಯಾ ನಿಷೇಧ ಕಾಯ್ದೆಅಡಿಯಲ್ಲಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಈ ಕಾರ್ಯಾಚರಣೆಯು ನರಸಿಂಹರಾಜಪುರ ಠಾಣಾ PSI ದಿಲೀಪ್ ವಿ.ಟಿ ಅವರ ನೇತೃತ್ವದ ತಂಡ ನಡೆಸಿದ್ದು ದಾಳಿಯಲ್ಲಿ ಹಸುವಿನ ಚರ್ಮ, 20 ಕೆ.ಜಿ ತೂಕದ ನಾಲ್ಕು ಕಾಲುಗಳು, ಹಸುವಿನ ಶ್ವಾಸಕೋಶ, ಕರುಳಿನ ಭಾಗ, ಹೊಟ್ಟೆಯ ಭಾಗ, ಮಾಂಸದ ತುಂಡುಗಳು, ಹಸುವನ್ನು ಕಡಿಯಲು ಬಳಸಿದ ಕತ್ತಿಗಳು, ಟಾರ್ಪಲ್ ಮುಂತಾದವನ್ನು ಪೊಲೀಸರು ಅಮಾನತ್ತುಪಡಿಸಿಕೊಂಡು ಮಹಜರು ಮಾಡಿ ಆರೋಪಿಗಳ ಸಹಿತ ವಶಕ್ಕೆ ಪಡೆದಿದ್ದಾರೆ.