ತೀರ್ಥಹಳ್ಳಿ/ಕುಂದಾಪುರ: (ನ್ಯೂಸ್ ಮಲ್ನಾಡ್ ವರದಿ) ವ್ಯವಹಾರ ಕಾರ್ಯದ ನಿಮಿತ್ತ ಸಾಲ ಮಾಡಿದ್ದ ಯುವಕ ಸಾಲವನ್ನು ತೀರಿಸಲಾರದೆ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳಕಿಗೆ ಬಂದಿದೆ.
ಇದನ್ನೂ ಓದಿ: ಕಾಂಗ್ರೆಸ್ ವಕ್ತಾರೆಗೆ ಕೈಮುಗಿದು ದೇವಸ್ಥಾನ ಕಟ್ಟಿಕೊಡುವಂತೆ ಮನವಿ ಮಾಡಿದ ಮುಸ್ಲಿಂ ಯುವಕ
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಬಳಗೋಡು ಗ್ರಾಮದ ನಿವಾಸಿ ಮಧುಕರ ಕೆ.ಬಿ(31) ಮೃತ ದುರ್ದೈವಿ. ಕುಂದಾಪುರ ತಾಲೂಕಿನ ಹಾಲಾಡಿಯಲ್ಲಿ ವ್ಯವಹಾರಕ್ಕಾಗಿ ಮಾಡಿದ ಸಾಲ ತೀರಿಸಲಾಗದೇ ಹಾಗೂ ಅನಾರೋಗ್ಯ ಬಾಧಿಸುತ್ತಿದ್ದ ಹಿನ್ನೆಲೆ ಯುವಕ ಇಲಿಪಾಷಾಣ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಚಾಲಕ ವೃತ್ತಿಯನ್ನು ನಡೆಸುತ್ತಿದ್ದ ಮಧುಕರ ಸೈಬರ್ ಸೆಂಟರ್ ಸಹ ನಡೆಸುತ್ತಿದ್ದರು. ಇದಕ್ಕಾಗಿ ಇವರು ಸಾಲವನ್ನು ಮಾಡಿಕೊಂಡಿದ್ದರು ಎನ್ನಲಾಗಿದ್ದು ಸಾಲಬಾಧೆ ತಾಳಲಾರದೇ ಇಲಿಪಾಷಾಣ ಸೇವಿಸಿದ್ದಾರೆ. ತೀವ್ರವಾಗಿ ಅಸ್ವಸ್ಥಗೊಂಡಿದ್ದ ಅವರನ್ನು ಕುಂದಾಪುರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮಧುಕರ ಕೊನೆಯುಸಿರೆಳೆದಿದ್ದಾರೆ.
ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಈ ಸಂಬಂಧ ಹೆಚ್ಚಿನ ಮಾಹಿತಿಯನ್ನು ಕಲೆಹಾಕುತ್ತಿದ್ದಾರೆ.


%20-%20Copy.jpeg)


0 Comments