ಕೊಪ್ಪ: (ನ್ಯೂಸ್ ಮಲ್ನಾಡ್ ವರದಿ) ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಯ ಬೀಗ ಒಡೆದು ಲಕ್ಷಾಂತರ ರೂಪಾಯಿ ಬೆಲೆ ಬಾಳುವ ವಸ್ತುಗಳನ್ನು ಕದ್ದೊಯ್ದಿರುವ ಕುರಿತು ಪ್ರಕರಣ ದಾಖಲಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಕಸಬಾ ಹೋಬಳಿ ವ್ಯಾಪ್ತಿಯ ಮಸಿಗೆ ಗ್ರಾಮದ ಹಂಚಿನ ಮನೆ ಎಂಬಲ್ಲಿ ರಾಜೀವ ಲೋಚನ ಎಂಬುವವರ ಮನೆಯಿದ್ದು ಮನೆಯ ಮುಂಭಾಗದ ಕೊಠಡಿಯನ್ನು ಗಿರೀಶ್ ಎಂಬುವವರಿಗೆ ಕರಾರಿನ ಮೇಲೆ ಬಾಡಿಗೆಗೆ ಕೊಟ್ಟು ಬೆಂಗಳೂರಿಗೆ ತೆರಳಿದ್ದರು.
2019 ರಲ್ಲಿ ರಾಜೀವಲೋಚನ ರವರ ಮಗಳು ನಾನು ಕೆಲಸ ಮಾಡುತ್ತಿದ್ದ ಖಾಸಗಿ ಕಂಪನಿಯಲ್ಲಿ ನನ್ನ ಸುಪರ್ಧಿನಲ್ಲಿ ಕೆಲಸಕ್ಕೆ ಸೇರುತ್ತಾರೆ. 2022 ರ ಏಪ್ರಿಲ್/ಮೇ ನಲ್ಲಿ ಕೆಲಸ ಬಿಡುತ್ತಾರೆ, ಕೆಲಸ ಬಿಡಲು ನಾನೇ ಕಾರಣ ಎಂದು ದ್ವೇಷ ಸಾಧಿಸುವ ಸಲುವಾಗಿ ಈ ರೀತಿಯ ಸುಳ್ಳು ಆರೋಪ ಮಾಡಲಾಗಿದೆ - ಗಿರೀಶ್ ಕೆ.ಜಿ
ಹೀಗಿರುವಾಗ ಮನೆಯಲ್ಲಿದ್ದ ತಾಮ್ರದ ಹಂಡೆ, ಮನೆಯ ಬಾಗಿಲು, ಕಿಟಕಿ, ಹೆಂಚುಗಳು, ತಾಮ್ರದ ಬಾಯ್ಲರ್ ಹಂಡೆ, ಅಲ್ಯುಮಿನಿಯಂ ಸ್ಟೀಲ್, ಕಲ್ಲುನಾರು ಶೀಟ್ ಗಳು, ಕಬ್ಬಿಣದ ಕಂಬ, ಕಬ್ಬಿಣದ ಶೀಟ್ ಗಳು, ವಸ್ತುಗಳನ್ನು ಅಲ್ಯುಮಿನಿಯಂ ಶೀಟ್ ಮೊದಲಾದವನ್ನು ಕಳ್ಳತನ ನಡೆಸಿರುವುದು ಗಮನಕ್ಕೆ ಬಂದಿದ್ದು ಕಳ್ಳತನ ನಡೆಸಿರುವ ಆರೋಪಿಗಳ ಮೇಲೆ ಕ್ರಮ ಕೈಗೊಳ್ಳಬೇಕೆಂದು ಶೃಂಗೇರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಮನೆಯಲ್ಲಿದ್ದ ಅಂದಾಜು ಎರಡು ಲಕ್ಷ ರೂಪಾಯಿ ಮೌಲ್ಯದ ವಸ್ತುಗಳು ಕಳ್ಳತನವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದ್ದು ಬಾಡಿಗೆ ಮನೆಯಲ್ಲಿದ್ದ ಹಾಸನ ಮೂಲದ ವಾಸಿ ಗಿರೀಶ್, ವನಿತಾ ಹಾಗೂ ಶೃಂಗೇರಿಯ ಮೆಣಸೆ ಸೈಟ್ ವಾಸಿಯೋರ್ವರ ಮೇಲೆ ಕಳ್ಳತನ ನಡೆಸಿದ್ದಾರೆ ಎಂದು ಪ್ರಕರಣ ದಾಖಲಿಸಿದ್ದು, ಈ ಸಂಬಂಧ ಪೊಲೀಸರು ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ. ಆದರೆ ಈ ಆರೋಪವನ್ನು ತಳ್ಳಿಹಾಕಿರುವ ಗಿರೀಶ್ ಕೆ.ಜಿ ದುರುದ್ದೇಶದಿಂದ ಆರೋಪ ಮಾಡಲಾಗಿದೆ ಎಂದಿದ್ದಾರೆ. ಸತ್ಯಾಸತ್ಯತೆ ಪೊಲೀಸರ ತನಿಖೆ ಮೂಲಕ ತಿಳಿಯಬೇಕಿದೆ.





0 Comments