ಹಾಸನ: (ನ್ಯೂಸ್ ಮಲ್ನಾಡ್ ವರದಿ) ಮನೆಯಲ್ಲಿಯೇ ಅಕ್ರಮವಾಗಿ ಗೋಮಾಂಸ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿರುವ ಘಟನೆ ಹಾಸನದಲ್ಲಿ ನಡೆದಿದೆ.
ಹಾಸನದ ಪಟ್ಟಣದ ದಾವುದ್‌ಸಾಬ್ ಬೀದಿಯ ಸೈಯದ್‌ಜಿಶಾನ್ ಎಂಬುವರ ಮನೆಯಲ್ಲಿ ಗೋಮಾಂಸ ಮಾರಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿಯನ್ನು ಆಧರಿಸಿದ ಇನ್ಸ್ಪೆಕ್ಟರ್ ರವಿಕಿರಣ್ ಹಾಗೂ ತಂಡ ದಾಳಿ ನಡೆಸಿ ಆರೋಪಿಗಳಾದ ಸೈಯದ್‌ಜಿಶಾನ್ ಮತ್ತು ಫರ್ಹಾನ್ ಎಂಬುವವರನ್ನು ಸೆರೆ ಹಿಡಿದಿದ್ದಾರೆ.
ಇದನ್ನೂ ಓದಿ: ಊಟ ತಿಂಡಿ ನೀಡದೆ ಹಿಂಸೆ ಆರೋಪ ; ನೀರಿಗೆ ಹಾರಿ ಪ್ರಾಣ ಬಿಟ್ಟ ವಯೋವೃದ್ದೆ
ಅಕ್ರಮ ದಂಧೆಯಲ್ಲಿ ಮಾರಾಟಕ್ಕಿಟ್ಟಿದ್ದ 12,600 ರೂ. ಬೆಲೆಯ 70 ಕೆ.ಜಿ ಗೋಮಾಂಸ ವಶಪಡಿಸಿಕೊಂಡಿರುವ ಪೊಲೀಸರು, 4 ಕಪ್ಪುಬಣ್ಣದ ದನದ ಕಾಲಿನ ಗೊರಸು ಸಮೇತ ಮೊಣಕಾಲು, 4 ಕಂದುಬಣ್ಣದ ಮೊಣಕಾಲು ಹಾಗೂ 2 ದನದ ಚರ್ಮಸುಲಿದ ತಲೆಗಳು ಹಾಗು 2 ದನಗಳ ಚರ್ಮ ಅಮಾನತ್ತುಪಡಿಸಿಕೊಂಡು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.
ಎಗ್ಗಿಲ್ಲದೇ ಯಾರಿಗೂ ಗೊತ್ತಾಗದ ರೀತಿಯಲ್ಲಿ ಅಲ್ಲಲ್ಲಿ ಈ ರೀತಿಯ ಅಕ್ರಮ ದಂಧೆಗಳು ನಡೆಯುತ್ತಿದ್ದು ಅಕ್ರಮವಾಗಿ ಗೋಮಾಂಸ ಮಾರಾಟ ನಡೆಸುವವರನ್ನು ಬಂಧಿಸಿ ಕಾನೂನಿನ ಅಡಿಯಲ್ಲಿ ತೀವ್ರವಾಗಿ ಶಿಕ್ಷೆಗೆ ಗುರಿಪಡಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.


%20-%20Copy.jpeg)


0 Comments