ಶಿವಮೊಗ್ಗ: (ನ್ಯೂಸ್ ಮಲ್ನಾಡ್ ವರದಿ) ಬೆಂಕಿಪೊಟ್ಟಣ ಕೇಳುವ ನೆಪದಲ್ಲಿ ಲಾರಿಯ ಡ್ರೈವರ್ ಹಾಗೂ ಕ್ಲೀನರ್ ನಿಂದ ಹಣ ದೋಚಿರುವ ಘಟನೆ ನಡೆದಿದೆ.

ಭದ್ರಾವತಿಯ ತರೀಕೆರೆ ರಸ್ತೆಯಲ್ಲಿ ಭಾನುವಾರ ಬೆಳಗಿನ ಜಾವ ಈ ಘಟನೆ ನಡೆದಿದ್ದು, ಭತ್ತದ ಲೋಡ್ ಮಾಡಿಕೊಂಡು ಕೇರಳಕ್ಕೆ ಹೊರಟಿದ್ದ ಲಾರಿ ಚಾಲಕ ಮತ್ತು ಕ್ಲೀನರ್‌ಗೆ ಬೆಂಕಿಪೊಟ್ಟಣ ಕೇಳುವ ನೆಪದಲ್ಲಿ ಲಾರಿಯ ಕ್ಯಾಬಿನ್ ಹತ್ತಿದ ಅಪರಿಚಿತರು ಚಾಕುವಿನಿಂದ ಹಲ್ಲೆ ನಡೆಸಿ ಜೇಬಿನಲ್ಲಿದ್ದ 8 ಸಾವಿರ ರೂ. ದರೋಡೆ ಮಾಡಿದ್ದಾರೆ. 

ಇದನ್ನೂ ಓದಿ: ಭೀಕರ ರಸ್ತೆ ಅವಘಡ; ಸ್ಥಳದಲ್ಲೇ ಮೇಗೂರಿನ ಯುವಕ ದುರ್ಮರಣ | ಕಿಗ್ಗಾ ಮೂಲದ ಸಹ ಸವಾರನ ಸ್ಥಿತಿ ಗಂಭೀರ

ಕೇರಳದ ಕಣ್ಣೂರಿನ ಲಾರಿ ಚಾಲಕ ರಶೀದ್ ಮತ್ತು ಪೊನ್ನೂರು ಗ್ರಾಮದ ಕ್ಲೀನರ್‌ ಕಮೃದ್ದೀನ್ ದರೋಡೆಗೆ ಒಳಗಾದ ಚಾಲಕ ಮತ್ತು ನಿರ್ವಾಹಕರು. ಇಂತಹ ಘಟನೆಗಳಿಂದಾಗಿ ಈ ಮಾರ್ಗದ ಮೂಲಕ ವಾಹನ ಚಾಲನೆ ನಡೆಸುವವರು ಇತರೆ ಪ್ರಯಾಣಿಕರು ಆತಂಕಕ್ಕೊಳಗಾಗಿದ್ದು ಸಂಬಂಧಿಸಿದ ಅಧಿಕಾರಿಗಳು ಈ ಕುರಿತು ನಿಗಾವಹಿಸಿ ಕ್ರಮಕೈಗೊಳ್ಳಬೇಕು ಎಂದು ಸಾರ್ವಜನಿಕರು ಕೋರಿದ್ದಾರೆ.