ಕೊಡಗು: (ನ್ಯೂಸ್ ಮಲ್ನಾಡ್ ವರದಿ) ರೆಸಾರ್ಟ್ ನ ಮಾಲೀಕರೇ ಒತ್ತುವರಿ ಮಾಡಿಕೊಂಡಿದ್ದ ಅರಣ್ಯ ಇಲಾಖೆಗೆ ಸಂಬಂಧಿಸಿದ ಜಾಗವನ್ನು ಇಲಾಖೆಗೆ ಮರಳಿಸಿರುವ ಘಟನೆ ನಡೆದಿದೆ.
ಇದನ್ನೂ ಓದಿ : ಶಿವಮೊಗ್ಗದ ಕಡೆಗೆ ಅಕ್ರಮವಾಗಿ ಸಾಗಾಟ ನಡೆಸುತ್ತಿದ್ದ 85 ಲಕ್ಷ ನಗದು ಜಪ್ತಿ: ನಾಲ್ವರು ಸೆರೆ
ವಿರಾಜಪೇಟೆಯ ಪೆರುಂಬಾಡಿ ಬಳಿಯ ಆರ್ಜಿ ಗ್ರಾಮದ ಸರ್ವೇ ನಂಬರ್ 333/1 ಸೆಕ್ಷನ್ 4 ರ ಅರಣ್ಯ ಜಾಗವನ್ನು ಇಲ್ಲಿನ ರೆಸಾರ್ಟ್ ಮಾಲೀಕರು ಒತ್ತುವರಿ ಮಾಡಿರುವುದಾಗಿ ಇಲ್ಲಿನ ಸ್ಥಳೀಯರು ಕಂದಾಯ ಅದಾಲತ್ ನಲ್ಲಿ ದೂರು ದಾಖಲಿಸಿದ್ದರು. ಈ ಸಂಬಂಧ ಜಂಟಿ ಸರ್ವೇ ಕಾರ್ಯ ನಡೆಸಿದ ಅರಣ್ಯ ಹಾಗೂ ಭೂ ದಾಖಲೆಗಳ ಇಲಾಖೆ 9.92 ಎಕರೆ ಪ್ರದೇಶವು ಒತ್ತುವರಿಯಾಗಿದೆ ಎಂದು ಸಾಬೀತುಪಡಿಸಿತ್ತು.
ಈ ನಂತರದಲ್ಲಿ ಒತ್ತುವರಿ ಕುರಿತಾಗಿ ತೇಲಪಂಡ ಪ್ರಮೋದ್ ಸೋಮಯ್ಯ, ಅಜ್ಜಿನಂಡ ತಮ್ಮು ಪೂವಯ್ಯ, ಪಾಂಡಿರ ಮುತಣ್ಣ ಸೇರಿದಂತೆ ಮುಂತಾದವರು ದೂರು ನೀಡಿದ್ದರು. ಈ ಕುರಿತಾಗಿ ಇಲಾಖೆ ನೀಡಿದ ನೋಟೀಸ್ ಗೆ ರೆಸಾರ್ಟ್ ಮಾಲೀಕರು ಮರಳಿ ಒತ್ತುವರಿ ಮಾಡಿರುವ ಜಾಗವನ್ನು ಹಿಂದಿರುಗಿಸುವುದಾಗಿ ತಿಳಿಸಿ ಒತ್ತುವರಿ ಮಾಡಿದ್ದ ಜಾಗವನ್ನು ಮರಳಿ ನೀಡಿದ್ದಾರೆ.
ತೆರವು ಕಾರ್ಯಾಚರಣೆಯು ACF ನೆಹರು ಅವರ ನೇತೃತ್ವದಲ್ಲಿ ನಡೆದಿದ್ದು ಈ ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ಭಾಗವಹಿಸಿದ್ದರು.
ಚಿಕ್ಕಮಗಳೂರು: ಚಾಲಕನ ನಿಯಂತ್ರಣ ತಪ್ಪಿ ಉರುಳಿದ ಬೊಲೆರೋ ವಾಹನ
ಚಿಕ್ಕಮಗಳೂರು: ಚಾಲಕನ ನಿಯಂತ್ರಣ ತಪ್ಪಿ ಪ್ರವಾಸಿ ಜೀಪೊಂದು ಗುಡ್ಡದ ಮೇಲಿನ ಒಂದು ರಸ್ತೆಯಿಂದ ಮತ್ತೊಂದು ರಸ್ತೆಗೆ ಉರುಳಿ ಬಿದ್ದ ಘಟನೆ ಸಂಭವಿಸಿದೆ.
ಚಿಕ್ಕಮಗಳೂರು ಜಿಲ್ಲೆಯ ಹಲವು ಭಾಗಗಳಲ್ಲಿ ಮಳೆ ಹಾಗೂ ಮಂಜು ಕವಿದ ವಾತಾವರಣವಿದ್ದು ಚಿಕ್ಕಮಗಳೂರು ತಾಲೂಕಿನ ಮುಳ್ಳಯ್ಯನಗಿರಿಯಲ್ಲಿ ಪ್ರವಾಸಕ್ಕೆಂದು ಬಂದಿದ್ದ ಬೊಲೆರೋ ವಾಹನವು ಮುಳ್ಳಯ್ಯನಗಿರಿಯಿಂದ ಚಿಕ್ಕಮಗಳೂರು ನಗರಕ್ಕೆ ಹಿಂದಿರುಗುವಾಗ ಚಾಲಕನ ನಿಯಂತ್ರಣ ತಪ್ಪಿ ವಾಹನವು ಪಲ್ಟಿಯಾಗಿದೆ.
ಸುಮಾರು 100-150 ಅಡಿ ಎತ್ತರದಿಂದ ಗುಡ್ಡದ ಮೇಲಿನ ರಸ್ತೆಯಿಂದ ಕೆಳಗೆ ಉರುಳಿ ಬಿದ್ದು ಅದೇ ಗುಡ್ಡ ಕೆಳಭಾಗದ ಮತ್ತೊಂದು ರಸ್ತೆ ಮೇಲೆ ವಾಹನ ಬಿದ್ದಿದ್ದು ಚಿಕ್ಕಮಗಳೂರಿನ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ಸಂಭವಿಸಿದೆ.
ನಿನ್ನೆ ಸಂಜೆಯ ವೇಳೆ ಮುಳ್ಳಯ್ಯನಗಿರಿ ಭಾಗದಲ್ಲಿ ಭಾರೀ ಮಳೆ ಸುರಿದಿದ್ದು, ಜೊತೆಗೆ ತೀವ್ರವಾದ ಮಂಜು ಕೂಡ ಇದ್ದು, ಚಾಲಕನ ನಿಯಂತ್ರಣ ತಪ್ಪಿ ಈ ಅವಘಡ ನಡೆದಿದೆ.
ವಾಹನದಲ್ಲಿ ನಾಲ್ಕು ಜನ ಪ್ರವಾಸಿಗರಿದ್ದು ಅದೃಷ್ಟವಶಾತ್ ಯಾರಿಗೂ ದೊಡ್ಡ ಪ್ರಮಾಣದ ನೋವು ಸಂಭವಿಸಿಲ್ಲ. ಎಲ್ಲರಿಗೂ ಸಣ್ಣ-ಪುಟ್ಟ ಗಾಯಗಳಾಗಿದ್ದು ದೊಡ್ಡ ಪ್ರಮಾಣದ ಅಪಾಯದಿಂದ ಎಲ್ಲರೂ ಪಾರಾಗಿದ್ದಾರೆ. ಮುಳ್ಳಯ್ಯನಗಿರಿಯ ಕಿರಿದಾದ ರಸ್ತೆಯಲ್ಲಿ ಯೂ ಟರ್ನ್ ಆಕಾರದ ರಸ್ತೆಯಲ್ಲಿ ಗಾಡಿಯನ್ನ ಟರ್ನ್ ಮಾಡುವಾಗ ಸ್ಟೇರಿಂಗ್ ರಾಡ್ ಕಟ್ ಆಗಿ ಗಾಡಿ ಪಲ್ಟಿಯಾಗಿದೆ ಎನ್ನಲಾಗಿದೆ.

.jpeg)
.jpeg)


%20-%20Copy.jpeg)



0 Comments