ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಸಣ್ಣ ಮಗುವನ್ನಿಟ್ಟುಕೊಂಡು ಭಿಕ್ಷಾಟನೆ ನಡೆಸುತ್ತಿದ್ದವರನ್ನು ಮಕ್ಕಳ ವಿಶೇಷ ಪೊಲೀಸ್ ಘಟಕ, ಮಕ್ಕಳ ರಕ್ಷಣಾ ಘಟಕ ಮತ್ತು ಮಕ್ಕಳ ಸಹಾಯವಾಣಿಯ ಸಿಬ್ಬಂದಿಗಳು ಚಿಕ್ಕಮಗಳೂರು ನಗರದಲ್ಲಿ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ.
ಇದನ್ನೂ ಓದಿ:ಅಕ್ರಮ ಮದ್ಯ ಮಾರಾಟ; ಆರೋಪಿ ಸಹಿತ ಮದ್ಯ ವಶಕ್ಕೆ ಪಡೆದ ಪೊಲೀಸರು
ಭಿಕ್ಷಾಟನೆಯಲ್ಲಿ ತೊಡಗಿದ್ದ ಓರ್ವ ಮಹಿಳೆ ಮತ್ತು 10 ತಿಂಗಳ ಮಗುವನ್ನು ರಕ್ಷಿಸಿ, ಪಾಲನೆ ಮತ್ತು ಪೋಷಣೆಗಾಗಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರುಪಡಿಸಿದ್ದು, ಇನ್ನು ಮುಂದೆ ಈ ರೀತಿ ಭಿಕ್ಷಾಟನೆಯಲ್ಲಿ ತೊಡಗದಂತೆ ಅಧಿಕಾರಿಗಳು ಜಾಗೃತಿ ಮೂಡಿಸಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಪೊಲೀಸ್ ಸಿಬ್ಬಂದಿಗಳಾದ ಅಭಿಷೇಕ್ ಸಿ.ಟಿ, ಪೂಜಾ, ಮಕ್ಕಳ ರಕ್ಷಣಾ ಘಟಕದ ಮಹೇಂದ್ರ ಮತ್ತು ಮಕ್ಕಳ ಸಹಾಯವಾಣಿಯಿಂದ ಪ್ರದೀಪ್ ರವರು ಭಾಗವಹಿಸಿದ್ದರು.
ಈ ರೀತಿಯ ಯಾವುದಾದರೂ ಪ್ರಕರಣಗಳು ಅಥವಾ ಘಟನೆಗಳು ಗೊತ್ತಾದಲ್ಲಿ ತಡಮಾಡದೇ ಅಧಿಕಾರಿಗಳಿಗೆ ತಿಳಿಸುವಂತೆ ಕೋರಿದ್ದು ಸಾರ್ವಜನಿಕರು ಈ ಕುರಿತಾಗಿ ಯಾವುದಾದರೂ ಮಾಹಿತಿಗಳು ಇದ್ದಲ್ಲಿ ಮುಕ್ತವಾಗಿ ಅಧಿಕಾರಿಗಳಿಗೆ ತಿಳಿಸಬಹುದು.





0 Comments