ಕಳಸ: (ನ್ಯೂಸ್ ಮಲ್ನಾಡ್ ವರದಿ) ಚಾಲಕನ ನಿಯಂತ್ರಣ ತಪ್ಪಿ ಆಟೋ ರಿಕ್ಷಾ ಉರುಳಿದ ಪರಿಣಾಮ ಚಾಲಕ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕಳಸದಲ್ಲಿ ಸಂಭವಿಸಿತ್ತು.
ಇದನ್ನೂ ಓದಿ : ಶೃಂಗೇರಿ: ಸಮರ್ಪಕ ರಸ್ತೆಯಿಲ್ಲದೆ ಗ್ರಾಮಸ್ಥರ ಸಂಚಾರಕ್ಕೆ ಎದುರಾದ ಸಂಕಷ್ಟ
ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ತೋಟದೂರು ಗ್ರಾಮದ ಆಳಗೊಡು ಬಳಿ ಬಾಡಿಗೆದಾರರನ್ನು ಬಿಟ್ಟು ವಾಪಸ್ ಬರುವ ವೇಳೆಗೆ ಚಾಲಕ ವಿಠಲ ಅವರ ನಿಯಂತ್ರಣ ತಪ್ಪಿ ಆಟೋ ಪಲ್ಟಿಯಾಗಿದೆ ಎನ್ನಲಾಗಿದ್ದು, ಈ ಅವಘಡದಲ್ಲಿ ಆಟೋ ಕೆಳಗೆ ಸಿಲುಕಿದ ಚಾಲಕ ತೀವ್ರಗಾಯಕ್ಕೊಳಗಾಗಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ನಿನ್ನೆ ಈ ದುರಂತ ಸಂಭವಿಸಿದ್ದು ಗಣಪತಿ ಹಬ್ಬದ ದಿನ ಇಡೀ ಕುಟುಂಬಕ್ಕೆ ಸೂತಕದ ಛಾಯೆ ಆವರಿಸಿತ್ತು.
ಆಟೋ ರಿಕ್ಷಾ ಚಾಲಕ ವಿಠಲ ಅವರು ಮನೆಯವರನ್ನು ಹಾಗೂ ಸ್ನೇಹಿತರನ್ನು ಅಗಲಿದ್ದು ಅವರ ಸಾವಿನ ಕುರಿತು ಮನೆಯವರು ಅತೀವವಾದ ದುಃಖವನ್ನು ವ್ಯಕ್ತಪಡಿಸಿದ್ದಾರೆ. ರಿಕ್ಷಾ ಚಾಲಕರು ಹಾಗೂ ಸ್ನೇಹಿತರು ಕೂಡ ವಿಠಲ ಅವರ ಸಾವಿನ ಕುರಿತು ಸಂತಾಪ ಸೂಚಿಸಿದ್ದಾರೆ.
ಒತ್ತುವರಿ ಮಾಡಿದ್ದ 9.92 ಎಕರೆ ಜಾಗವನ್ನು ಮರಳಿ ಅರಣ್ಯ ಇಲಾಖೆಗೆ ಹಿಂದಿರುಗಿಸಿದ ರೆಸಾರ್ಟ್ ಮಾಲೀಕರು :
ರೆಸಾರ್ಟ್ ನ ಮಾಲೀಕರೇ ಒತ್ತುವರಿ ಮಾಡಿಕೊಂಡಿದ್ದ ಅರಣ್ಯ ಇಲಾಖೆಗೆ ಸಂಬಂಧಿಸಿದ ಜಾಗವನ್ನು ಇಲಾಖೆಗೆ ಮರಳಿಸಿರುವ ಘಟನೆ ನಡೆದಿದೆ.
ವಿರಾಜಪೇಟೆಯ ಪೆರುಂಬಾಡಿ ಬಳಿಯ ಆರ್ಜಿ ಗ್ರಾಮದ ಸರ್ವೇ ನಂಬರ್ 333/1 ಸೆಕ್ಷನ್ 4 ರ ಅರಣ್ಯ ಜಾಗವನ್ನು ಇಲ್ಲಿನ ರೆಸಾರ್ಟ್ ಮಾಲೀಕರು ಒತ್ತುವರಿ ಮಾಡಿರುವುದಾಗಿ ಇಲ್ಲಿನ ಸ್ಥಳೀಯರು ಕಂದಾಯ ಅದಾಲತ್ ನಲ್ಲಿ ದೂರು ದಾಖಲಿಸಿದ್ದರು. ಈ ಸಂಬಂಧ ಜಂಟಿ ಸರ್ವೇ ಕಾರ್ಯ ನಡೆಸಿದ ಅರಣ್ಯ ಹಾಗೂ ಭೂ ದಾಖಲೆಗಳ ಇಲಾಖೆ 9.92 ಎಕರೆ ಪ್ರದೇಶವು ಒತ್ತುವರಿಯಾಗಿದೆ ಎಂದು ಸಾಬೀತುಪಡಿಸಿತ್ತು.
ಈ ನಂತರದಲ್ಲಿ ಒತ್ತುವರಿ ಕುರಿತಾಗಿ ತೇಲಪಂಡ ಪ್ರಮೋದ್ ಸೋಮಯ್ಯ, ಅಜ್ಜಿನಂಡ ತಮ್ಮು ಪೂವಯ್ಯ, ಪಾಂಡಿರ ಮುತಣ್ಣ ಸೇರಿದಂತೆ ಮುಂತಾದವರು ದೂರು ನೀಡಿದ್ದರು. ಈ ಕುರಿತಾಗಿ ಇಲಾಖೆ ನೀಡಿದ ನೋಟೀಸ್ ಗೆ ರೆಸಾರ್ಟ್ ಮಾಲೀಕರು ಮರಳಿ ಒತ್ತುವರಿ ಮಾಡಿರುವ ಜಾಗವನ್ನು ಹಿಂದಿರುಗಿಸುವುದಾಗಿ ತಿಳಿಸಿ ಒತ್ತುವರಿ ಮಾಡಿದ್ದ ಜಾಗವನ್ನು ಮರಳಿ ನೀಡಿದ್ದಾರೆ.
ತೆರವು ಕಾರ್ಯಾಚರಣೆಯು ACF ನೆಹರು ಅವರ ನೇತೃತ್ವದಲ್ಲಿ ನಡೆದಿದ್ದು ಈ ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ಭಾಗವಹಿಸಿದ್ದರು.


.jpeg)

.jpeg)
%20-%20Copy.jpeg)



0 Comments