ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಕೆಲ ದಿನಗಳ ಹಿಂದೆ ಮೂಡಿಗೆರೆ ಪಟ್ಟಣದಲ್ಲಿ ನಿಲ್ಲಿಸಿದ್ದ ಆಟೋರಿಕ್ಷಾವನ್ನು ಕಳ್ಳತನ ಮಾಡಿದ್ದ ಆರೋಪಿಯನ್ನು ಮೂಡಿಗೆರೆ ಪೊಲೀಸರು ಕಾರ್ಯಾಚರಣೆಯ ಮೂಲಕ ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ: ಶೃಂಗೇರಿ: ಅಕ್ರಮ ಗೋಮಾಂಸ ಸಾಗಾಟ ನಡೆಸುತ್ತಿದ್ದ ಇಬ್ಬರ ಬಂಧನ ; ಕಠಿಣ ಕ್ರಮಕ್ಕೆ ಹಿಂದೂ ಸಂಘಟನೆಗಳ ಆಗ್ರಹ

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಪಟ್ಟಣದ ರಸ್ತೆಪಕ್ಕದಲ್ಲಿ ನಿಲ್ಲಿಸಿದ್ದ 1.6 ಲಕ್ಷ ರೂಪಾಯಿ ಬೆಲೆಯ ಆಪೆ ಫಿಗೋ ಆಟೋರಿಕ್ಷಾವನ್ನುಕಳ್ಳತನ ಮಾಡಿರುವ ಕುರಿತು ಈ ಹಿಂದೆ ಪ್ರಕರಣ ದಾಖಲಾಗಿತ್ತು.


ದೂರಿನ ಅನ್ವಯ ಆರೋಪಿಯ ಜಾಡುಹಿಡಿದು ಕಾರ್ಯಾಚರಣೆ ನಡೆಸಿದ ಪೊಲೀಸರು ಆಟೋ ಕಳವು ಮಾಡಿದ್ದ ಓರ್ವ ಆರೋಪಿಯನ್ನು ಪತ್ತೆಮಾಡಿ ಆತನಿಂದ ಆಟೋವನ್ನು ವಶಕ್ಕೆ ಪಡೆದಿದ್ದಾರೆ. ಈ ಕಾರ್ಯಾಚರಣೆಯು PSI ಮೂಡಿಗೆರೆ ಪೊಲೀಸ್ ಠಾಣೆ ಮತ್ತು ತಂಡ ದಿನಾಂಕ 09.09.2022 ರಂದು ನಡೆಸಿ ಆಟೋರಿಕ್ಷಾ ವನ್ನು ಆರೋಪಿಯಿಂದ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದೆ. 

ಆರೋಪಿಯು ಮಂಡ್ಯ ಜಿಲ್ಲೆ, ಬೆಂಗಳೂರು ನಗರ, ರಾಮನಗರ ಮತ್ತು ತುಮಕೂರು ಜಿಲ್ಲೆಗಳಲ್ಲಿ ದ್ವಿಚಕ್ರ ವಾಹನ & ಆಟೋರಿಕ್ಷಾ ಕಳವು ಪ್ರಕರಣಗಳಲ್ಲಿ ಭಾಗಿಯಾಗಿರುತ್ತಾನೆ ಎಂಬ ಸುಳಿವುಗಳು ಸಹ ಲಭ್ಯವಾಗಿದ್ದು ಆರೋಪಿ ಪತ್ತೆ ಕಾರ್ಯದಲ್ಲಿ ಮೂಡಿಗೆರೆ PSI ಆದರ್ಶ ಎಂ.ಎಸ್, ಸಿಬ್ಬಂದಿಗಳಾದ ವಸಂತ ಎ, ಗುರುರಾಜ್ ಹಾಗೂ ವೈಭವ್ ಟಿ ಎಸ್ ರವರು ಭಾಗವಹಿಸಿದ್ದರು.