ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಜಿಲ್ಲೆಯಲ್ಲಿ ಮತ್ತೊಂದು ಲವ್ ಜಿಹಾದ್ ಪ್ರಕರಣ ನಡೆದಿದ್ದು, ಮದುವೆಯಾಗಲು ಹೊರಟಿದ್ದ ಭಿನ್ನ ಕೋಮಿನ ಜೋಡಿಯನ್ನು ಸಂಘಟನೆಗಳ ಮುಖಂಡರು ತಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದ್ದು ಚಿಕ್ಕಮಗಳೂರು ತಾಲೂಕಿನ ದಾಸರಹಳ್ಳಿ ಸಮೀದ ಲಕ್ಷ್ಮೀಪುರದ ಹಿಂದೂ ಹುಡುಗಿ ಹಾಗೂ ಮುಸ್ಲಿಂ ಹುಡುಗ ರಿಜಿಸ್ಟರ್ ಮ್ಯಾರೇಜ್ ಆಗಲೆಂದು ಸಬ್ ರಿಜಿಸ್ಟ್ರಾರ್ ಕಚೇರಿಗೆ ಹೋಗಿದ್ದಾಗ ಅವರನ್ನು ತಡೆದ ಹಿಂದೂಪರ ಸಂಘಟನೆಗಳ ಪ್ರಮುಖರು ಪೊಲೀಸರಿಗೆ ಮಾಹಿತಿ ನೀಡಿ ಒಪ್ಪಿಸಿದ್ದಾರೆ ಎನ್ನಲಾಗಿದೆ.
ಈ ಪ್ರಕರಣದ ಕುರಿತಾಗಿ ಚಿಕ್ಕಮಗಳೂರು ಠಾಣೆಯಲ್ಲಿ ಪೊಲೀಸರಿಂದ ವಿಚಾರಣೆ ನಡೆಯುತ್ತಿದ್ದು, ಎಸ್ಪಿ ಉಮಾ ಪ್ರಶಾಂತ್ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ. ಲವ್ ಜಿಹಾದ್ ಆರೋಪ ಪ್ರಕರಣದಲ್ಲಿ ನೈತಿಕ ಪೊಲೀಸ್ಗಿರಿ ದೂರಿನ ಅನ್ವಯ ಹಿಂದೂಪರ ಸಂಘಟನೆಯ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದ್ದು ಪೊಲೀಸರು ಈ ಸಂಬಂಧ ವಿಚಾರಣೆ ನಡೆಸುತ್ತಿದ್ದಾರೆ.
ಮಗಳನ್ನು ಒಮ್ಮೆ ನೋಡಲು, ಆಕೆಯೊಂದಿಗೆ ಮಾತನಾಡಲು ಬಿಡಿ: ಗೋಗರೆದ ತಾಯಿ :
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಯುವತಿಯನ್ನು ವಿಚಾರಣೆಗೆಂದು ಪೊಲೀಸ್ ವಾಹನದಲ್ಲಿ ಕರೆದೊಯ್ಯುತ್ತಿದ್ದ ವೇಳೆ ಯುವತಿಯ ತಾಯಿ ಸ್ಥಳಕ್ಕೆ ಬಂದಿದ್ದು ಮಗಳನ್ನು ಒಮ್ಮೆ ತೋರಿಸುವಂತೆ ಕೋರಿ ಗೋಗರೆದು ಬಿಕ್ಕಿ ಬಿಕ್ಕಿ ಅಳುತ್ತಿದ್ದರು.
ಪೊಲೀಸರನ್ನು ತೀವ್ರವಾಗಿ ಮನವಿ ಮಾಡಿದ ತಾಯಿಯು ನನ್ನ ಮಗಳನ್ನು ನೋಡಲು ಆಕೆಯೊಂದಿಗೆ ಮಾತನಾಡಲು ಬಿಡಿ ಎಂದು ಅಳುತ್ತಿದ್ದ ದೃಶ್ಯ ಠಾಣೆಯ ಎದುರು ಕಂಡು ಬಂತು.





0 Comments