ಹಾಸನ: (ನ್ಯೂಸ್ ಮಲ್ನಾಡ್ ವರದಿ) ದೇಶದಾದ್ಯಂತ ಪಿ ಎಫ್ ಐ ಬ್ಯಾನ್ ಆದ ನಂತರ ಈ ಕುರಿತಾದ ಚರ್ಚೆಗಳು ರಾಜಕೀಯ ವಲಯದಲ್ಲಿ ಜೋರಾಗಿದ್ದು, ದಿನ ಕಳೆದಂತೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ನಡುವೆ ವಾಗ್ವಾದ ಹೆಚ್ಚುತ್ತಾ ಹೋಗಿದೆ.
ಎಫ್ ಐ ಬ್ಯಾನ್ ನ ನಂತರ ಆರ್ ಎಸ್ ಎಸ್ ಅನ್ನು ಬ್ಯಾನ್ ಮಾಡಬೇಕೆಂದು ಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ ನೀಡಿದ್ದರು ಈ ಕುರಿತಾಗಿ ಪ್ರತಿಕ್ರಿಯೆ ನೀಡಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಸಿದ್ದರಾಮಯ್ಯ ಮತಗಳನ್ನು ಪಡೆಯುವುದಕ್ಕಾಗಿ ಸುನ್ನತ್ ಮಾಡಿಸಿಕೊಳ್ಳಲು ಸಿದ್ದರಾಗಿರುತ್ತಾರೆ ಎಂಬ ಹೇಳಿಕೆಯನ್ನು ನೀಡಿದ್ದಾರೆ.
ಇದನ್ನೂ ಓದಿ: ಶೃಂಗೇರಿ ಠಾಣೆಯ ಪೊಲೀಸ್ ಕಾನ್ಸ್ಟೇಬಲ್ ಜಗನ್ನಾಥ್ ಪೂಜಾರಿ ವಿಧಿವಶ
ಹಾಸನದ ಬೇಲೂರಿನಲ್ಲಿ ರಂಭಾಪುರಿಶ್ರೀ ನೇತೃತ್ವದ ಶರನ್ನವರಾತ್ರಿ ದಸರಾ ಧರ್ಮಸಮ್ಮೇಳನ ಕಾರ್ಯಕ್ರಮದಲ್ಲಿ ಭಾಗಹಿಸಿದ ಬಳಿಕ ಸಿ.ಟಿ ರವಿ ಈ ಹೇಳಿಕೆ ನೀಡಿದ್ದಾರೆ. ಹತ್ತು ಸೆಕೆಂಡ್ ಸಿಕ್ಕಿದರೆ ಸಾಕು ಆರ್ಎಸ್ಎಸ್ನವರನ್ನು ಮುಗಿಸಿ ಬಿಡುತ್ತೇವೆ ಎಂದು ಹೇಳುತ್ತಾರೆ. ಭಾರತವನ್ನು ಮತ್ತೊಂದು ವಿಭಜನೆ ಮಾಡಲು ತಯಾರಾಗುತ್ತಿರುವ ಇಂತಹವರಿಗೆ ತಡೆಗೋಡೆಯಾಗಿ ನಿಂತಿರುವುದು ಆರ್ಎಸ್ಎಸ್. ಇಂತಹ ಸಂಘಟನೆಯನ್ನು ನಿಷೇಧಿಸಿದರೆ ಮತ್ತೊಂದು ಮೊಘಲ್ ಸಾಮ್ರಾಜ್ಯ ಸ್ಥಾಪಿಸುವುದು ತುಂಬಾ ಸುಲಭವಾಗಲಿದೆ ಎಂದರು.
ಕೇವಲ ಮತಗಳನ್ನು ಸೆಳೆಯುವ ಸಲುವಾಗಿ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದು ಇದೇ ಅವರಿಗೆ ಮಾರಕವಾಗಿ ಪರಿಣಮಿಸಲಿದೆ, ಮತಕ್ಕಾಗಿ ಸಿದ್ದರಾಮಯ್ಯ ಸುನ್ನತ್ ಮಾಡಿಸಿಕೊಳ್ಳಲು ತಯಾರಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಇದು ನವರಾತ್ರಿಯ ಸಮಯ, ದೇವಿಯಲ್ಲಿ ದುಷ್ಟ ಸಂಹಾರಕ್ಕಾಗಿಯೇ ಹೆಚ್ಚಿನ ಶಕ್ತಿಯಿರುತ್ತದೆ. ದೇವಿಯ ಶಾಸ್ತ್ರವು ಇದೆ ಶಸ್ತ್ರವು ಇದೆ. ಹೇಗೆ ದುಷ್ಟರು ಎದುರಾಗುತ್ತಾರೋ, ಅದೇ ರೀತಿಯಲ್ಲೇ ಅವರನ್ನು ಸಮರ್ಥವಾಗಿ ಎದುರಿಸಲಿದ್ದೇವೆ ಎಂದರು.








0 Comments