ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ)ಮಲೆನಾಡು ಪ್ರದೇಶವಾದ ಚಿಕ್ಕಮಗಳೂರು ಜಿಲ್ಲೆಯ ವಿವಿಧ ಭಾಗಗಳಲ್ಲಿ ಮಳೆಯ ಆರ್ಭಟ ಮತ್ತೆ ಮುಂದುವರಿದಿದ್ದು, ಎಡಬಿಡದೆ ಸುರಿಯುತ್ತಿರುವ ವರುಣ ಅನೇಕ ಅವಾಂತರಗಳನ್ನು ಸೃಷ್ಟಿಸಿದ್ದಾನೆ. 

ಇದನ್ನೂ ಓದಿ: ಎಲೆಚುಕ್ಕಿ ರೋಗ ಮಾರಕವಲ್ಲ, ವೈಜ್ಞಾನಿಕ ಕ್ರಮ ಹಾಗೂ ಅನುಕರಣೆಯಿಂದ ಗುಣಪಡಿಸಬಹುದು: ಡಾ.ಪ್ರಕಾಶ್

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಹೆಗ್ಗರವಳ್ಳಿಯಲ್ಲಿ ಹರಿಯುವ ಜಪಾವತಿ ನದಿಯು ಮಳೆಯ ಅಬ್ಬರದಿಂದಾಗಿ ಮೈದುಂಬಿ ಹರಿಯುತ್ತಿದ್ದು ನೀರು ವ್ಯಾಪಿಸಿ ಹರಿಯುವ ವೇಗ ಹಾಗೂ ಅಬ್ಬರಕ್ಕೆ ಸುಮಾರು ಒಂದು ಎಕರೆ ಕಾಫಿ, ಅಡಕೆ ತೋಟ ಕೊಚ್ಚಿಹೋಗಿದೆ. 


ಹೆಗ್ಗರವಳ್ಳಿಯ ಕೃಷಿಕ ಸುಪ್ರೀಮ್ ತಮ್ಮ ಜೀವನಕ್ಕೆ ಆಧಾರವಾಗಿ ಪೋಷಿಸಿಕೊಂಡು ಬರುತ್ತಿದ್ದ ಅಡಿಕೆ, ಕಾಫಿ ತೋಟವು ನೀರಿನ ರಭಸಕ್ಕೆ, ಅಬ್ಬರಕ್ಕೆ ನಲುಗಿದ್ದು ಲಕ್ಷಾಂತರ ರೂಪಾಯಿ ಈ ಅನಾಹುತದಿಂದ ನಷ್ಟವಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ. 

ಒಂದೆಡೆ ವಿವಿಧ ಕಾಯಿಲೆಗಳು ತೋಟವನ್ನು ಬಾಧಿಸುತ್ತಿದ್ದರೆ ಇತ್ತ ಅತಿಯಾಗಿ ಸುರಿಯುತ್ತಿರುವ ಮಳೆ ಜೀವನಾಧಾರವಾದ ತೋಟ ಕೊಚ್ಚಿ ಹೋಗುವಂತೆ ಮಾಡಿದೆ. ತೋಟದ ಸ್ಥಿತಿ ಕಂಡು ಸುಪ್ರೀಮ್ ಅವರ ಕುಟುಂಬ ಕಂಗಾಲಾಗಿದ್ದು, ಸರ್ಕಾರದಿಂದ ಸೂಕ್ತವಾದ ಪರಿಹಾರ ದೊರಕಿಸುವಂತೆ ಅಧಿಕಾರಿಗಳನ್ನು ಹಾಗೂ ಸ್ಥಳೀಯ ಜನಪ್ರತಿನಿಧಿಗಳನ್ನು ಮನವಿ ಮಾಡಿದ್ದಾರೆ.