ತರೀಕೆರೆ: (ನ್ಯೂಸ್ ಮಲ್ನಾಡ್ ವರದಿ) ಜೂಜಾಟದಲ್ಲಿ ಭಾಗಿಯಾಗಿದ್ದ ಏಳು ಜನ ಆರೋಪಿಗಳನ್ನು ಕಾರ್ಯಾಚರಣೆಯ ಮೂಲಕ ಸೆರೆ ಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. 

ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಇಟ್ಟಿಗೆ ಗ್ರಾಮದಲ್ಲಿ ಜೂಜಾಟ ನಡೆಸುತ್ತಿರುವುದರ ಕುರಿತು ಮಾಹಿತಿಯನ್ನು ಪಡೆದು ಖಚಿತ ಪಡಿಸಿಕೊಂಡ ಪೊಲೀಸರು ಕೂಡಲೇ ದಾಳಿ ನಡೆಸಿ ಏಳು ಜನ ಆರೋಪಿಗಳನ್ನು ಹಾಗೂ 9,470 ರೂಪಾಯಿ ನಗದನ್ನು ಆರೋಪಿಗಳಿಂದ ವಶಕ್ಕೆ ಪಡೆದಿದ್ದಾರೆ.


ಈ ಕಾರ್ಯಾಚರಣೆಯನ್ನು ತರೀಕೆರೆ ಪೊಲೀಸ್ ಠಾಣೆಯ PSI ಮತ್ತು ಸಿಬ್ಬಂದಿಗಳು ನಡೆಸಿದ್ದು, ಆರೋಪಿಗಳನ್ನು ಕಿರಣ್, ರವಿನಾಯ್ಕ, ಸೋಮೇಶ ನಾಯ್ಕ ಶಿವ, ನಾಗರಾಜ ನಾಯ್ಕ, ಮಲ್ಲೇಶನಾಯ್ಕ, ಮತ್ತು ಅಶೋಕ ಎಂದು ಗುರುತಿಸಲಾಗಿದೆ. 

ಘಟನಾ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಜಿಲ್ಲೆಯಲ್ಲಿ ಅಕ್ರಮವಾಗಿ ನಡೆಯುತ್ತಿರುವ ಚಟುವಟಿಕೆಗಳನ್ನು ನಿಯಂತ್ರಿಸುವಲ್ಲಿ ನಿಟ್ಟಿನಲ್ಲಿ ಪೊಲೀಸರು ನಿರಂತರವಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.