ಕಡೂರು: (ನ್ಯೂಸ್ ಮಲ್ನಾಡ್ ವರದಿ) ಬೈಕ್ ಚಾಲನೆ ನಡೆಸುತ್ತಿದ್ದ ವೇಳೆ ಆಕಸ್ಮಿಕವಾಗಿ ಬಿದ್ದು ಯುವಕನೋರ್ವ ಕೊನೆ ಯುಸಿರೆಳೆದಿರುವ ಘಟನೆ ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಮೂಡಿಗೆರೆ: ಗಣಪತಿ ವಿಸರ್ಜನೆ ಮಾಡಿ ಬರುವ ವೇಳೆಯಲ್ಲಿ ಟ್ರಾಕ್ಟರ್ ಗೆ ತಗುಲಿದ ವಿದ್ಯುತ್ ತಂತಿ;ಭೀಕರ ದುರಂತದಲ್ಲಿ ಮೂವರ ದುರ್ಮರಣ

ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ನೀರಗುಂಡಿ ಗ್ರಾಮದ ಲೋಕೇಶ್ (23) ಈ ಬೈಕ್ ಅಪಘಾತದಲ್ಲಿ ಮೃತಪಟ್ಟ ಯುವಕ. ಲೋಕೇಶ್ ತನ್ನ ಬೈಕ್ ನಲ್ಲಿ ದೇವನೂರಿನಿಂದ ನೀರಗುಂಡಿಗೆ ತೆರಳುತ್ತಿದ್ದಾಗ ಬೋಳೆನಾಹಳ್ಳಿ ತಾಂಡ್ಯಾ ಬಳಿ ಬೈಕ್ ಚಾಲಕನ ನಿಯಂತ್ರಣ ತಪ್ಪಿ ಬಿದ್ದಿದ್ದು, ಈ ವೇಳೆ ಯುವಕನ ತಲೆಗೆ, ಹಣೆಗೆ ತೀವ್ರತರಹದ ಪೆಟ್ಟಾಗಿತ್ತು. ಕೂಡಲೇ ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸದ ಕಾರಣ ಯುವಕ ಸಾವನ್ನಪ್ಪಿದ್ದಾನೆ.


ಬೈಕ್ ನಲ್ಲಿ ತೆರಳುತ್ತಿರುವ ಸಂದರ್ಭದಲ್ಲಿ ಮೊಬೈಲ್ ನಲ್ಲಿ ಮಾತನಾಡುತ್ತಾ ಬೈಕ್ ಚಾಲನೆ ನಡೆಸಿರುವುದು ಈ ದುರಂತಕ್ಕೆ ಕಾರಣ ಎನ್ನಲಾಗಿದೆ.  

ಘಟನಾ ಸಂಬಂಧ ಸಖರಾಯಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನಾ ಸಂಬಂಧ ಕುಟುಂಬಸ್ಥರು ಅತೀವ ದುಃಖವನ್ನು ವ್ಯಕ್ತಪಡಿಸಿದ್ದಾರೆ.