ಕಳಸ: (ನ್ಯೂಸ್ ಮಲ್ನಾಡ್ ವರದಿ) ಕರ್ತವ್ಯ ಲೋಪ ಎಸಗಿದ ಆರೋಪದ ಮೇರೆಗೆ ಕೊಪ್ಪ ವಿಭಾಗದ ಕಳಸ ವಲಯದ ಉಪ ವಲಯ ಅರಣ್ಯಾಧಿಕಾರಿ (ಡಿಆರ್‌ಎಫ್‌ಒ) ಮತ್ತು ಮೋಜಣಿದಾರ ಕೆ.ನಾಗರಾಜ ಅವರನ್ನು ಅಮಾನುತಗೊಳಿಸಿ ಆದೇಶಿಸಲಾಗಿದೆ.

ಇದನ್ನೂ ಓದಿ : N.R PURA: ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಯುವಕ

ಕಳಕೋಡು ಗ್ರಾಮದ ಸರ್ವೆ ನಂಬರ್‌ 80ರ ಅಧಿಸೂಚಿತ ಪ್ರದೇಶಕ್ಕೆ ಹೊಂದಿಕೊಂಡಿರುವ ಒತ್ತುವರಿ ಪ್ರದೇಶದಲ್ಲಿ ಕಾಡುಜಾತಿ ಮರಗಳ ಕಡಿಯುವಿಕೆ, ಯಡೂರು ಗ್ರಾಮದ ಸರ್ವೆ ನಂಬರ್‌ 50ರಲ್ಲಿ 2011-12ನೇ ಸಾಲಿನ ಅಕೇಶಿಯಾ ನೆಡುತೋಪಿನಲ್ಲಿ 116 ಅಕೇಶಿಯಾ ಮರಗಳ ಅಕ್ರಮ ಹನನ, ಮಾವಿನಕೆರೆಯ ಸರ್ವೆ ನಂಬರ್‌ 945ರಲ್ಲಿ ಸಾಮಾಜಿಕ ಅರಣ್ಯ ಇಲಾಖೆಯಿಂದ ಬೆಳೆಸಿರುವ ನೆಡುತೋಪಿನಲ್ಲಿ 29 ಗಾಳಿ ಮರಗಳ ಹನನ, ಸಂಸೆಯ ಸರ್ವೆನಂಬರ್‌ 265 ಪರಿಭಾವಿತ ಅರಣ್ಯ ಪ್ರದೇಶದಲ್ಲಿ ಜಿಸಿಬಿಯಿಂದ ಮಣ್ಣು ಸಾಗಾಣಿಕೆ, ಮಾವಿನಕೆರೆಯ ಸರ್ವೆ ನಂಬರ್‌ 641ರ ಸೆಕ್ಷನ್‌-4 ಅರಣ್ಯ ಪ್ರದೇಶದಲ್ಲಿ ಕಾಂಕ್ರಿಟ್‌ ರಸ್ತೆ ನಿರ್ಮಾಣ, ಕಳಸ ವಲಯ ಕಚೇರಿಯ ಗೋದಾಮಿನಲ್ಲಿದ್ದ 197 ಕೆ.ಜಿ. ಶ್ರೀಗಂಧದ ತುಂಡುಗಳ ಕಳವು, ಶ್ರೀಗಂಧ ದಾಸ್ತಾನಿನಲ್ಲಿದ್ದ336 ಕೆ.ಜಿ ಶ್ರೀಗಂಧ ಕಡಿಮೆ ಇರುವ ಬಗ್ಗೆ ವರದಿ ನೀಡಿರುವುದು, ಕಳಸ ವಲಯದ ಅರಣ್ಯ ತಕ್ಷೀರು ಅಪರಾಧಿಗೆ ಜಾಮೀನು ಸಿಗಲು ಎಫ್‌ಐಆರ್‌ ನಲ್ಲಿ ಬಿಳಿ ಶಾಹಿ ಹಾಕಿ ಆ ಜಾಗದಲ್ಲಿ 'ರಡಿಯಲ್ಲಿ' ಎಂದು ನಮೂದಿಸಿರುವ ಲೋಪಗಳು ಮೇಲ್ನೋಟಕ್ಕೆ ಕಂಡುಬಂದಿವೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.


ಈ ಹಿನ್ನೆಲೆ ಚಿಕ್ಕಮಗಳೂರು ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ಎಂ.ಸಿ. ಸಿದ್ರಾಮಪ್ಪ ಅವರು ಉಪವಲಯ ಅರಣ್ಯಾಧಿಕಾರಿ ಕೆ. ನಾಗರಾಜ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.m

ಮಂಗಳೂರಿಗೆ ಪ್ರಧಾನಿ ಭೇಟಿ ಹಿನ್ನೆಲೆ KSRTC ಬಸ್ ಸಂಚಾರ ಸ್ಥಗಿತ: ಬಸ್ಸಿಲ್ಲದೇ ಪ್ರಯಾಣಿಕರ ಪರದಾಟ : 


ಚಿಕ್ಕಮಗಳೂರು: ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮನದ ಹಿನ್ನೆಲೆ ವ್ಯಾಪಕವಾದ ಭದ್ರತೆ ಹಾಗೂ ವ್ಯವಸ್ಥೆಗಳನ್ನು ಸರ್ಕಾರ ಕಲ್ಪಿಸಿದ್ದು, ಕೆಲವು ಆದೇಶಗಳಿಂದಾಗಿ ಸಾರ್ವಜನಿಕರಿಗೆ ಸಮಸ್ಯೆ ತಲೆದೋರಿದೆ ಎಂಬ ಮಾತುಗಳು ಸಹ ಕೇಳಿ ಬಂದಿದೆ. 

ಕಡಲ ಕಿನಾರೆ ಮಂಗಳೂರಿಗೆ ಪ್ರಧಾನಿ ನರೇಂದ್ರಮೋದಿ ಭೇಟಿ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಮಾರ್ಗದಿಂದ ಮಂಗಳೂರು ಮಾರ್ಗ-ಮಂಗಳೂರು ಮಾರ್ಗದಿಂದ ಚಿಕ್ಕಮಗಳೂರು ಸಂಚರಿಸುವ KSRTC ಬಸ್ಸುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಇದರಿಂದಾಗಿ ಸರ್ಕಾರಿ ಬಸ್ಸುಗಳನ್ನು ಅವಲಂಬಿಸಿಕೊಂಡು ಸಂಚರಿಸುವ ಸಾರ್ವಜನಿಕರು, ರೋಗಿಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಬಸ್ ನಿಲ್ದಾಣದಲ್ಲಿ ಕಾಯುವ ಪರಿಸ್ಥಿತಿ ಉಂಟಾಗಿದೆ ಎಂದು ಸಾರ್ವಜನಿಕರು ಸಮಸ್ಯೆಯ ಕುರಿತು ವ್ಯಕ್ತಪಡಿಸಿದ್ದಾರೆ. 

ಚಿಕ್ಕಮಗಳೂರು ಕೆ.ಎಸ್.ಆರ್.ಟಿ.ಸಿ  ಹಿರಿಯ ಅಧಿಕಾರಿಗಳು ಯಾವುದೇ ಪ್ರಕಟಣೆಯಲ್ಲಿ ಈ ಕುರಿತಾಗಿ ತಿಳಿಸಿಲ್ಲ, ಬಸ್ ಸಂಚಾರ ಇಲ್ಲದ ಪರಿಣಾಮ ಓಡಾಡಲು ತೀವ್ರತರಹದ ಸಮಸ್ಯೆ ಎದುರಾಗಿದೆ - ಅಮೃತ, ಬಿಸಿಎ ವಿದ್ಯಾರ್ಥಿನಿ

ಚಿಕ್ಕಮಗಳೂರು, ಮೂಡಿಗೆರೆ, ಕೊಟ್ಟಿಗೆಹಾರ ಮಾರ್ಗದಿಂದ ಸಂಚರಿಸುವ KSRTC ಬಸ್ಸುಗಳ ಸಂಚಾರವನ್ನು ಬೆಳಿಗ್ಗೆ 06 ರಿಂದ ಸಂಜೆ 06 ರ ವರೆಗೆ ಸ್ಥಗಿತಗೊಳಿಸಲಾಗಿದ್ದು ಮುಂಚೆಯೇ ಪ್ರಕಟಣೆಯನ್ನು ಹೊರಡಿಸಿಲ್ಲ, ಜನರಲ್ಲಿ ಈ ಕುರಿತು ಮುಂಚಿನದಾಗಿ ತಿಳಿಸಿದ್ದರೆ ಅನುಕೂಲಕರವಾಗುತ್ತಿತ್ತು ಎಂದು ಸಾರ್ವಜನಿಕರು ಆಕ್ರೋಶವನ್ನು ಹೊರಹಾಕಿದ್ದಾರೆ. 

- ತನು ಕೊಟ್ಟಿಗೆಹಾರ, ವರದಿಗಾರರು