N.R.PURA : (ನ್ಯೂಸ್ ಮಲ್ನಾಡ್ ವರದಿ) ಬುದ್ದಿಮಾಂದ್ಯ ಮಹಿಳೆಯ ಮೇಲೆ ವೃದ್ದನೋರ್ವ ಅತ್ಯಾಚಾರಕ್ಕೆ ಯತ್ನಿಸಿರುವ ಗಂಭೀರ ಆರೋಪ ಕೇಳಿ ಬಂದಿದೆ.

ಇದನ್ನೂ ಓದಿ: ಶೃಂಗೇರಿ: ಒಂದೇ ಗ್ರಾಮದ ಮನೆಗಳಿಗೆ ನಾಲ್ಕನೇ ಬಾರಿ ಬೆಂಕಿ ಹಚ್ಚಿದ ಕಿಡಿಗೇಡಿಗಳು; ಸ್ಥಳೀಯರಲ್ಲಿ ಹೆಚ್ಚಿದ ಆತಂಕ 

ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ಪಟ್ಟಣದಲ್ಲಿ ಬುದ್ದಿಮಾಂದ್ಯ ಮಹಿಳೆಯ ಮೇಲೆ ಸದಾಶಿವ ಶೆಟ್ಟಿ ಎಂಬ 66 ವರ್ಷದ ವೃದ್ಧ ಮಾನಭಂಗಕ್ಕೆ ಪ್ರಯತ್ನಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬುದಾಗಿ ಬುದ್ದಿಮಾಂದ್ಯ ಮಹಿಳೆಯ ಸಹೋದರಿ ನಿನ್ನೆ ನರಸಿಂಹರಾಜಪುರದ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಈ ಸಂಬಂಧ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ಆರೋಪಿ ಸದಾಶಿವಶೆಟ್ಟಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೊಳಪಡಿಸಿದ್ದಾರೆ. ಸಂಪೂರ್ಣ ತನಿಖೆಯ ನಂತರವಷ್ಟೇ ಈ ಕುರಿತಾದ ಹೆಚ್ಚಿನ ಮಾಹಿತಿಗಳು ಹೊರಬೀಳಲಿದೆ.