ಶಿವಮೊಗ್ಗ: (ನ್ಯೂಸ್ ಮಲ್ನಾಡ್ ವರದಿ) ಬಜರಂಗದಳದ ಸಕ್ರಿಯ ಕಾರ್ಯಕರ್ತ ಹರ್ಷಹತ್ಯೆ ಪ್ರಕಾರಣಕ್ಕೆ ಸಂಬಂಧಿಸಿದಂತೆ NIA ತಂಡ ದೋಷಾರೋಪ ಪಟ್ಟಿಯನ್ನು ಸಲ್ಲಿಸಿದೆ. ಸುಮಾರು 750 ಪುಟಗಳ ಚಾರ್ಜ್‌ಶೀಟನ್ನು ಇಂದು ನ್ಯಾಯಾಲಯಕ್ಕೆ ಸಲ್ಲಿಸಿರುವ ಅಧಿಕಾರಿಗಳು ವಿಸ್ಕೃತವಾದ ವರದಿಯನ್ನು ನೀಡಿದ್ದಾರೆ.
ಹತ್ತು ಮಂದಿ ಆರೋಪಿಗಳ ವಿರುದ್ಧ ದೋಷಾರೋಪಣೆ ಪಟ್ಟಿ ಸಲ್ಲಿಕೆ ಮಾಡಲಾಗಿದ್ದು, ಆರೋಪಿಗಳಿಗೆ ಹಿಂದೂ ಸಂಘಟನೆಯ ಕಾರ್ಯಕರ್ತನ ಹತ್ಯೆ ಮಾಡುವ ಉದ್ದೇಶವಿತ್ತು ಎಂದು ಇದರಲ್ಲಿ ತಿಳಿಸಲಾಗಿದೆ. ಹರ್ಷನನ್ನು ಹತ್ಯೆ ಮಾಡುವ ಸಲುವಾಗಿ ಮೊದಲೇ ಹೊಂಚುಹಾಕಿ ಆರೋಪಿಗಳು ಕಾದು ಕುಳಿತು ಕೊಂದಿದ್ದಾರೆ ಎಂಬುದಾಗಿಯೂ ಸಲ್ಲಿಸಿದ ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ.
ಹಳೆಯ ದ್ವೇಷ, ವೈಮನಸ್ಸನ್ನು ಇಟ್ಟುಕೊಂಡು ಹರ್ಷನನ್ನೇ ಹತ್ಯೆ ಮಾಡಬೇಕು ಎಂದು ಪ್ಲಾನ್ ರೂಪಿಸಲಾಗಿತ್ತು ಎಂದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂಬುದಾಗಿ ಕೇಳಿಬಂದಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಹಿಂದೂ ಸಂಘಟನೆಗಳಲ್ಲಿ ಸಕ್ರಿಯವಾಗಿ ಕೆಲಸಮಾಡಿಕೊಂಡು ಬರುವ ಕಾರ್ಯಕರ್ತರಿಗೆ ಭಯ ಹುಟ್ಟಿಸಬೇಕು ಎಂಬ ಕಾರಣಕ್ಕಾಗಿಯೇ ಕೊಲೆ ಮಾಡಲಾಗಿದೆ ಎಂದೂ ತನಿಖೆಯಲ್ಲಿ ತಿಳಿದು ಬಂದಿದೆ.
ಕರ್ನಾಟಕದಲ್ಲಿ ಹರ್ಷ ಹತ್ಯೆ ಪ್ರಕರಣ ಅತೀ ದೊಡ್ಡ ಗಲಭೆಗೆ ಕಾರಣವಾಗಿತ್ತು. ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾದಳಕ್ಕೆ ಸರ್ಕಾರ ವರ್ಗಾವಣೆಮಾಡಿತ್ತು. ಘಟನಾ ಸಂಬಂಧ ಎಫ್.ಐ.ಆರ್ ದಾಖಲಿಸಿಕೊಂಡ ಎನ್‌ಐಎ ಅಧಿಕಾರಿಗಳು ತನಿಖೆಯನ್ನು ಆರಂಭಿಸಿ ಮಾಹಿತಿಯನ್ನು ಕಲೆಹಾಕುವ ಸಲುವಾಗಿ ತಂಡಗಳ ರಚನೆ ಮಾಡಿಕೊಂಡು ಕಾರ್ಯಪ್ರವೃತ್ತರಾಗಿದ್ದರು. ಕೋಮುಗಲಭೆಗೆ ಪ್ರಚೋದನೆ ಹಾಗೂ ಸಮಾಜದ ಸ್ವಾಸ್ಥ್ಯವನ್ನು ಹಾಳು ಗೆಡವುವುದೇ ಈ ಹತ್ಯೆಯ ಹಿಂದಿನ ಪ್ರಮುಖ ಅಂಶ ಎನ್ನಲಾಗಿದೆ.
ಹರ್ಷನ ಹತ್ಯೆಯ ಬಳಿಕ ಇಡೀ ಶಿವಮೊಗ್ಗ ಹೊತ್ತಿ ಉರಿದಿತ್ತು ಉದ್ರಿಕ್ತರು ಕಲ್ಲು ತೂರಾಟ ನಡೆಸಿ ಕೆಲವೆಡೆ ಬೆಂಕಿ ಹಚ್ಚಿ ಆಕ್ರೋಶವನ್ನು ಹೊರಹಾಕಿದ್ದರು. ಈ ಸಮಯದಲ್ಲಿ ಸಂಪೂರ್ಣ ಪರಿಸ್ಥಿತಿ ಕೈ ಮೀರಿದ್ದು ಪೊಲೀಸರು ಇಡೀ ಶಿವಮೊಗ್ಗದ ವಾತಾವರಣವನ್ನು ಮರಳಿ ಸುಸ್ಥಿತಿಗೆ ತರಲು ಅನೇಕ ದಿನಗಳ ಕಾಲ ಪ್ರಯತ್ನಿಸಿದ್ದರು.

%20-%20Copy.jpeg)



0 Comments