ಹಾಸನ: (ನ್ಯೂಸ್ ಮಲ್ನಾಡ್ ವರದಿ) ಹಾಸನ ಜಿಲ್ಲೆಯ ಸಕಲೇಶಪುರ ಪಟ್ಟಣದ ಸಮೀಪವಿರುವ ಮಳಲಿ ಗ್ರಾಮದಲ್ಲಿ ಕಳ್ಳರು ಎರಡು ಮನೆಗಳ ಬೀಗ ಮುರಿದು ಲಕ್ಷಂತಾರ ರೂ ಮೌಲ್ಯದ ಚಿನ್ನಾಭರಣ ಹಾಗೂ ನಗದು ಕಳ್ಳತನ ಮಾಡಿರುವ ಘಟನೆ ವರದಿಯಾಗಿದೆ.
ಮಳಲಿ ಗ್ರಾಮದ ಮಂಜುನಾಥ್ ಹಾಗೂ ಲೋಹಿತಾಕ್ಷಿ ಎಂಬುವವರ ಮನೆಯಲ್ಲಿ ಕಳ್ಳತನವಾಗಿದ್ದು, ಮಂಜುನಾಥ್ ರವರು ಕೆಲಸದ ನಿಮಿತ್ತ ಪಟ್ಟಣಕ್ಕೆ ತೆರಳಿದಾಗ ಇದೇವೇಳೆ ಅವರ ಹೆಂಡತಿ ಗ್ರಾಮದಲ್ಲಿರುವ ದೇವಸ್ಥಾನದಲ್ಲಿ ಪೂಜೆಗೆ ತೆರಳಿದ್ದರು.
ಲೋಹಿತಾಕ್ಷಿ ಮನೆಯವರು ಸಹ ಕಾಫಿತೋಟಕ್ಕೆ ತೆರಳಿದ ಸಮಯವನ್ನು ನೋಡಿಕೊಂಡ ಕಳ್ಳರು ತಮ್ಮ ಕೈಚಳಕ ತೋರಿಸಿದ್ದು ಮಂಜುನಾಥ್ ರವರ ಮನೆಯ ಹಿಂಬಾಗಿಲನ್ನು ಒಡೆದು ಒಳನುಗ್ಗಿ, ಬೀರು ಬಾಗಿಲನ್ನು ಮುರಿದು ಎರಡು ಜೊತೆ ಕಿವಿಓಲೆ, ಎರಡು ಉಂಗುರ ಹಾಗೂ 45 ಸಾವಿರ ನಗದನ್ನು ದೋಚಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಕಳಸ: ಸಂಪೂರ್ಣವಾಗಿ ಹದಗೆಟ್ಟ ರಸ್ತೆಗಳು, ದುರಸ್ತಿಗೆ ಆಗ್ರಹಿಸಿ ಗ್ರಾಮಸ್ಥರಿಂದ ಬೃಹತ್ ಪ್ರತಿಭಟನೆ
ಲೋಹಿತಾಕ್ಷಿ ರವರ ಮನೆಯ ಮುಂಬಾಗಿಲನ್ನು ಮುರಿದು ಮನೆಯೊಳಗಿದ್ದ 50 ಸಾವಿರ ನಗದು ಸೇರಿದಂತೆ 35 ಗ್ರಾಂ ತೂಕದ ಚಿನ್ನದ ಸರ, ಎರಡು ಉಂಗುರ, ಮೂರು ಜೊತೆ ಬೆಳ್ಳಿ ಚೈನ್ ಗಳನ್ನು ದೋಚಿಪರಾರಿಯಾಗಿದ್ದಾರೆ.
ಇದೆವೇಳೆ ಗ್ರಾಮದ ಮತ್ತೊಬ್ಬರ ಮನೆಯನ್ನು ದೋಚಲು ಯತ್ನಿಸುತ್ತಿರುವಾಗ ಮನೆಯವರು ಬಂದ ಹಿನ್ನೆಯಲ್ಲಿ ಕಳ್ಳರು ಪರಾರಿಯಾಗಿದ್ದಾರೆ. ಸ್ಥಳಕ್ಕೆ ಪಟ್ಟಣ ಠಾಣಾ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸರಣಿ ಮನೆ ಕಳ್ಳತನದಿಂದ ಗ್ರಾಮಸ್ಥರು ಆತಂಕಕ್ಕೆ ಸಿಲುಕಿದ್ದು, ಕೂಡಲೇ ಕಳ್ಳರನ್ನು ಪತ್ತೆಮಾಡಿ ಕಳೆದುಹೋದ ವಸ್ತುಗಳನ್ನು ಮರಳಿ ಒದಗಿಸುವಂತೆ ಕೋರಿದ್ದಾರೆ.






0 Comments