ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಶ್ರೀರಾಮ ಸೇನೆ ವತಿಯಿಂದ ನಡೆಯುವ ದಾತ್ತಮಾಲಾ ಅಭಿಯಾನವು ನವೆಂಬರ್ 7 ರಿಂದ 13 ರ ವರೆಗೆ ನಡೆಯಲಿದೆ ಎಂಬುದಾಗಿ ಶ್ರೀ ರಾಮ ಸೇನೆ ಪದಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಶ್ರೀ ರಾಮಸೇನೆ ವತಿಯಿಂದ ನಡೆಯುವ ಈ ವರ್ಷದ ದತ್ತಮಾಲಾ ಅಭಿಯಾನವು ನ.7 ರಿಂದ 13 ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಸೇನೆಯ ರಾಜ್ಯ ಕಾರ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ತಿಳಿಸಿದರು.
7 ದಿನಗಳ ಕಾಲ ನಡೆಯಲಿರುವ ದತ್ತಮಾಲಾ ಅಭಿಯಾನದಲ್ಲಿ ಚಿಕ್ಕಮಗಳೂರು ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದ ಸಾವಿರಾರು ದತ್ತಭಕ್ತರು ಮಾಲಾಧಾರಣೆ ಧರಿಸಲಿದ್ದಾರೆ ಅಂತೆಯೇ ಪೀಠಕ್ಕೆ ಭೇಟಿ ನೀಡಲಿದ್ದಾರೆ ಎಂಬುದಾಗಿ ತಿಳಿಸಿದರು. 10ರಂದು ದತ್ತ ದೀಪೋತ್ಸವ, ನ. 12ರಂದು ಪಡಿ ಸಂಗ್ರಹ, ನ. 13ರಂದು ಚಿಕ್ಕಮಗಳೂರು ನಗರದಲ್ಲಿ ಬೃಹತ್ ಶೋಭಾಯಾತ್ರೆ, ದತ್ತಪೀಠದಲ್ಲಿ ಹೋಮ, ಹವನ, ಧರ್ಮಸಭೆ ನಡೆಯಲಿದೆ ಎಂಬುದಾಗಿ ಧಾರ್ಮಿಕ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದ ಅವರು ಭಕ್ತರ ಸಂಖ್ಯೆ ಹೆಚ್ಚಳದ ಕುರಿತು ತಿಳಿಸಿದರು.
ದತ್ತಮಾಲಾ ಅಭಿಯಾನದಲ್ಲಿ ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್, ಮಹಾರಾಷ್ಟ್ರ ಹಿಂದೂ ರಾಷ್ಟ್ರಸೇನೆಯ ಧನಂಜಯ್ ದೇಸಾಯಿ, ಸಂತರು ಭಾಗವಹಿಸಲಿದ್ದಾರೆ. ಸಾವರ್ಕರ್ ಮೊಮ್ಮಗ ಸಾತ್ಯಕಿ ಸಾವರ್ಕರ್ ಭಾಗವಹಿಸುವ ನಿರೀಕ್ಷೆ ಸಹ ಇದೆ ಎಂದು ಈ ವೇಳೆ ತಿಳಿಸಿದರು.
ದತ್ತಮಾಲಾ ಅಭಿಯಾನದಲ್ಲಿ 10 ಸಾವಿರಕ್ಕೂ ಅಧಿಕ ದತ್ತಭಕ್ತರು ಪಾಲ್ಗೊಳ್ಳಲಿದ್ದಾರೆ ಎಂದರು. ಅಭಿಯಾನದ ಕೊನೆಯ ದಿನ ಮಾಲಾಧಾರಿಗಳು ದತ್ತಾತ್ರೆಯಗಿರಿಗೆ ತೆರಳಲಿದ್ದು, ಗುರು ದತ್ತಾತ್ರೇಯರ ಪಾದುಕೆ ದರ್ಶನ ಪಡೆದ ಬಳಿಕ ಅಭಿಯಾನ ಸಂಪನ್ನಗೊಳಿಸಲಿದ್ದಾರೆ.








0 Comments