ಕೊಡಗು: (ನ್ಯೂಸ್ ಮಲ್ನಾಡ್ ವರದಿ) ಮೆದುಳು ನಿಷ್ಕ್ರಿಯಗೊಂಡು ಸಾವನ್ನಪ್ಪಿದ ಶಿಕ್ಷಕಿಯೊಬ್ಬರು ಬಹು ಅಂಗಾಂಗದಾನ ಮಾಡುವ ಮೂಲಕ ಎಂಟು ಮಂದಿಯ ಬಾಳಿಗೆ ಆಸರೆಯಾಗಿರುವ ಘಟನೆ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಸುದರ್ಶನ ಬಡಾವಣೆಯಲ್ಲಿ ನಡೆದಿದೆ.
ಶಿಕ್ಷಕಿ ಅಕಾಲಿಕ ಮರಣ ಹೊಂದಿದ್ದು, ಮರಣಕ್ಕೂ ಮೊದಲು ಅಂಗಾಂಗದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.
ಇದನ್ನೂ ಓದಿ: ಚಿಕ್ಕಮಗಳೂರು ನಗರದ ವಿವಿಧ ಅಂಗಡಿ ಹಾಗೂ ಹೋಟೆಲ್ ಗಳ ಮೇಲೆ ನಗರಸಭೆ ಅಧಿಕಾರಿಗಳ ದಾಳಿ; 100 ಕೆ.ಜಿ ಗೂ ಅಧಿಕ ಪ್ಲಾಸ್ಟಿಕ್ ವಶಕ್ಕೆ
ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಸುದರ್ಶನ ಬಡಾವಣೆ ನಿವಾಸಿ ಆಶಾ ಎಂಬ ಶಿಕ್ಷಕಿ ಅಂಗಾಂಗ ದಾನ ಮಾಡಿದ್ದಾರೆ. ಈ ಮೂಲಕ 8 ಮಂದಿಯ ಬಾಳಿಗೆ ಆಸರೆಯಾಗಿದ್ದಾರೆ.
ಸುದರ್ಶನ ಬಡಾವಣೆಯಲ್ಲಿ ಕಳೆದ 18 ವರ್ಷಗಳಿಂದ ಮಕ್ಕಳ ಆರೈಕಾಕೇಂದ್ರ ನಡೆಸಿಕೊಂಡು ಬಂದಿದ್ದ ಶಿಕ್ಷಕಿ ಆಶಾ ಮಕ್ಕಳ ಭವಿಷ್ಯ ಉಜ್ವಲಗೊಳಿಸಲು ಸಾಕಷ್ಟು ಶ್ರಮಪಟ್ಟಿದ್ದರು. ಹಲವು ವರ್ಷಗಳಿಂದ ಮಕ್ಕಳ ಆರೈಕೆಯಲ್ಲಿ ತೊಡಗಿದ್ದರು. ಆದರೆ, ಕಳೆದ ಕೆಲವು ದಿನಗಳ ಹಿಂದೆ ಬೆಂಗಳೂರಿನ ಮಗಳ ಮನೆಗೆ ತೆರಳಿದ್ದ ವೇಳೆ ಆಶಾರವರ ಮೆದುಳು ಪಾರ್ಶ್ವವಾಯುವಿಗೆ ಒಳಗಾಗಿತ್ತು.
ತಕ್ಷಣವೇ ನಾರಾಯಣ ಹೃದಯಾಲಯ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಹೀಗಾಗಿ ನಿನ್ನೆ ಶಿಕ್ಷಕಿ ಆಶಾ ಅವರ ಅಂಗಾಂಗ ದಾನ ಮಾಡಲಾಗಿದೆ. ಆಶಾ ಅವರ ಕಣ್ಣು, ಕಿಡ್ನಿ, ಹೃದಯ, ಯಕೃತ್ತು ದಾನ ಮಾಡುವುದರೊಂದಿಗೆ ಎಂಟು ಮಂದಿಯ ಬಾಳಿಗೆ ಬೆಳಕಾಗಿದ್ದಾರೆ. ಮನೆಯವರ ಒಪ್ಪಿಗೆಯ ಮೇರೆಗೆ ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ಬಹುಅಂಗಾಂಗ ದಾನಮಾಡಲಾಗಿದೆ. ಈ ಮೂಲಕ ಶಿಕ್ಷಕಿ ಸಾವಿನಲ್ಲೂ ಸಾರ್ಥಕತೆ ಮೆರೆದು ಅನೇಕರ ಬಾಳಿಗೆ ಬೆಳಕಾಗಿದ್ದಾರೆ.








0 Comments