ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಡ್ರಿಂಕ್ ಅಂಡ್ ಡ್ರೈವ್ ಮಾಡಿದ್ದ ಆರೋಪಿಗೆ ಫೈನ್ ಹಾಕಿದ ಕಾರಣಕ್ಕಾಗಿ ಜಡ್ಜ್ ಮೇಲೆ ಚಪ್ಪಲಿ ಎಸೆದಿರುವ ಘಟನೆ ವರದಿಯಾಗಿದೆ.
ಚಿಕ್ಕಮಗಳೂರು ಜಿಲ್ಲಾ ನ್ಯಾಯಾಲಯದ 1ನೇ ಹೆಚ್ಚುವರಿ ಕಿರಿಯ ಶ್ರೇಣಿಯ ವಿಭಾಗದಲ್ಲಿ ಫೈನ್ ಹಾಕಿದ ಕಾರಣಕ್ಕಾಗಿ ಆರೋಪಿಯೋರ್ವ ಜಡ್ಜ್ ಮೇಲೆ ಚಪ್ಪಲಿ ತೂರಿರುವ ಘಟನೆ ನಡೆದಿದ್ದು, ನ್ಯಾಯಧೀಶರ ಮೇಲೆ ಚಪ್ಪಲಿ ತೂರಿದ ವ್ಯಕ್ತಿಯನ್ನು ಚಿಕ್ಕಮಗಳೂರು ನಗರದ ಅರವಿಂದ ನಗರ ನಿವಾಸಿ ಲೋಕೇಶ್ ಎಂದು ಗುರುತಿಸಲಾಗಿದೆ. ಈತನನ್ನು ನಗರ ಪೊಲೀಸರು ಬಂಧಿಸಿದ್ದಾರೆ.
ಕಳೆದ ಒಂದು ತಿಂಗಳ ಹಿಂದೆ ಡ್ರಿಂಕ್ ಅಂಡ್ ಡ್ರೈವ್ ಮಾಡುವಾಗ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದ ಆರೋಪಿ ಲೋಕೇಶ್ ನ್ನು ಪೊಲೀಸರು ಕೋರ್ಟ್ ಗೆ ತೆರಳಿ ದಂಡ ಕಟ್ಟುವಂತೆ ಸೂಚಿಸಿದ್ದರು. ಅದರಂತೆಯೇ ದಂಡ ಕಟ್ಟಿದ್ದ ಆರೋಪಿ ತಿಂಗಳುಗಳ ಬಳಿಕ ಇಂದು ಕುಡಿದು ಬಂದು ಜಡ್ಜ್ ಮೇಲೆ ಚಪ್ಪಲಿ ತೂರಿದ್ದಾನೆ.
ಏನು ತಪ್ಪು ಮಾಡಿದ್ದೇನೆ ಎಂದು ದಂಡ ಹಾಕಿದ್ದೀರಾ ಎಂದು ಕೋರ್ಟ್ ಆವರಣದಲ್ಲಿ ಲೋಕೇಶ್ ಕೂಗಾಡಿದ್ದಾನೆ, ಲೋಕೇಶನ ಈ ವರ್ತನೆ ನೋಡಿದ ಕೂಡಲೇ ಕೋರ್ಟಿನಲ್ಲಿದ್ದ ವಕೀಲರು ಸಹ ಆತನ ವಿರುದ್ಧ ಆಕ್ರೋಶ ಹೊರಹಾಕಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.








0 Comments