ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಮೂಡಿಗೆರೆ ಭಾಗದಲ್ಲಿ ಹಿಂಡು ಹಿಂಡಾಗಿ ಓಡಾಡುತ್ತಿರುವ ಕಾಡಾನೆಗಳು ಕೃಷಿಕರಲ್ಲಿ ಹಾಗೂ ಸ್ಥಳೀಯರಲ್ಲಿ ತೀವ್ರತರಹದ ಆತಂಕವನ್ನು ಎದುರುಮಾಡಿದೆ. 

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಿದರಹಳ್ಳಿ, ಬಂಕೇನಹಳ್ಳಿ, ಜೇನುಬೈಲು, ಲೋಕೊವಳ್ಳಿ ಬೀಡು ಮುಂತಾದ ಸ್ಥಳಗಳಲ್ಲಿ ನಿರ್ಭಯವಾಗಿ ಗುಂಪು ಗುಂಪಾಗಿ ಆನೆಗಳು ಓಡಾಡುತ್ತಿವೆ. ಇದರಿಂದಾಗಿ ಗ್ರಾಮಸ್ಥರು ಆತಂಕಕ್ಕೆ ಸಿಲುಕಿದ್ದರೆ, ಬೆಳೆ ಕಳೆದುಕೊಳ್ಳುವ ಭೀತಿಯಲ್ಲಿ ಕೃಷಿಕರು ತಮ್ಮ ಆತಂಕವನ್ನು ವ್ಯಕ್ತಪಡಿಸಿದ್ದಾರೆ. 

ಇದನ್ನೂ ಓದಿ: ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ಹರಿಬಿಟ್ಟಿದ್ದ ಆರೋಪಿಯ ಬಂಧನ


ಐದು ಕಾಡಾನೆಗಳು ಸುತ್ತಾಟ ನಡೆಸುತ್ತಿರುವುದು ಕಂಡು ಬಂದಿದ್ದು, ರಾತ್ರಿಯ ವೇಳೆಯಲ್ಲಿ ವಾಹನಗಳನ್ನು ಚಾಲನೆ ಮಾಡುವ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. 

ಹಾಸನದಿಂದ ಕಾಡಾನೆಗಳು ಮೂಡಿಗೆರೆ ಭಾಗಕ್ಕೆ ಬಂದಿವೆ ಎನ್ನಲಾಗಿದ್ದು, ಇಲ್ಲಿನ ಗುತ್ತಿ, ಕುಂದೂರು ಗ್ರಾಮಗಳ ಸುತ್ತಮುತ್ತಲೂ ಕೂಡ ಒಂಟಿ ಸಲಗನ ಕಾಟ ಹೆಚ್ಚಾಗಿದೆ ಎಂದು ಕೃಷಿಕರು ಆತಂಕವನ್ನು ಹೊರಹಾಕಿದ್ದಾರೆ.