ನ್ಯೂಸ್ ಮಲ್ನಾಡ್ ಫ್ಯಾಕ್ಟ್ ಚೆಕ್: ನಟಿ, ಬಿಗ್ ಬಾಸ್ ಸ್ಪರ್ಧಿ ಅನುಪಮಾ ಗೌಡ ಅವರಿಗೆ ಮದುವೆಗೂ ಮುನ್ನ ಮಗುವಿದೆ ಎಂದು ಹಾಗೂ ತಮ್ಮ ಮಗುವಿನ ಬಗ್ಗೆ ಮೊದಲನೇ ಬಾರಿ ಮಾತನಾಡಿದ್ದಾರೆ ಎಂಬ ತಲೆಬರಹ ದೊಂದಿಗೆ ಶೃಂಗೇರಿ ಮೂಲದ ಬಾಲಕಿಯ ಫೋಟೋ ಒಂದನ್ನು ಸುದ್ದಿ ಮಾಡುವ ಮೂಲಕ ವೈರಲ್ ಮಾಡುತ್ತಿದ್ದು ಅದರ ಸತ್ಯಾಸತ್ಯತೆ ಇಲ್ಲಿದೆ.
ಈ ಮೇಲಿನ ಚಿತ್ರದಲ್ಲಿ ನಟಿ ಅನುಪಮಾ ಗೌಡ ಜೊತೆಗೆ ಇರುವ ಫೋಟೋ ಅವರ ಮಗಳದ್ದಲ್ಲ, ಬದಲಾಗಿ ಶೃಂಗೇರಿಯ ಶ್ರೀಮತಿ ದೀಪಾಶೆಟ್ಟಿ ಎಂಬುವವರ ಮಗಳಾದ ಕು.ಅವನಿ ಫೋಟೊ ಇದಾಗಿದೆ. ಇವರು ಸಧ್ಯ ಬೆಂಗಳೂರಿನಲ್ಲಿ ವಾಸವಿದ್ದು ಅವನಿ - ಅನುಪಮಾ ಜೊತೆಗಿರುವ ಫೋಟೋ ತುಂಬಾ ಹಳೆಯದ್ದಾಗಿದ್ದು 2015ರಲ್ಲಿ ಒಟ್ಟಿಗೆ ಶೂಟಿಂಗ್ ಒಂದರಲ್ಲಿ ಭಾಗವಹಿಸುವ ಸಮಯದಲ್ಲಿ ಹೊರಗಡೆ ಸುತ್ತಾಟದ ಸಂದರ್ಭದಲ್ಲಿ ತೆಗೆದುಕೊಂಡ ಫೋಟೋ ಇದಾಗಿದೆ.
ಇದನ್ನು ಸುಳ್ಳು ಮಾಹಿತಿಯೊಂದಿಗೆ ಹಲವು ವೆಬ್ಸೈಟ್ ಗಳು ಅನುಪಮಾ ಮಗಳು ಎಂದು ಹಂಚಿಕೊಂಡಿವೆ. ಇದು ಸತ್ಯಕ್ಕೆ ದೂರವಾದ ಮಾಹಿತಿ ಆಗಿದ್ದು ಕಪೋಲಕಲ್ಪಿತ ಮಾಹಿತಿಯನ್ನು ನೀಡದಂತೆ ದೀಪಾ ಶೆಟ್ಟಿ ಸ್ಪಷ್ಟನೆ ನೀಡಿದ್ದಾರೆ.
ಗಜಲಕ್ಷ್ಮಿ ಅಲಂಕಾರದಲ್ಲಿ ಭಕ್ತರನ್ನು ಅನುಗ್ರಹಿಸುತ್ತಿರುವ ಜಗನ್ಮಾತೆ ಶಾರದೆ
ಶೃಂಗೇರಿ: ದಕ್ಷಿಣಾಮ್ನಾಯ ಶೃಂಗೇರಿ ಶಾರದಾ ಪೀಠದಲ್ಲಿ ಶರನ್ನವರಾತ್ರಿ ಉತ್ಸವವು ಅತ್ಯಂತ ವಿಜೃಂಭಣೆ ಹಾಗೂ ಶ್ರದ್ಧಾಭಕ್ತಿಯಿಂದ ನಡೆಯುತ್ತಿದ್ದು, ಇಂದು ದೇವಿ ಗಜಲಕ್ಷ್ಮಿ ಅಲಂಕಾರದಲ್ಲಿ ಶೋಭಿಸುತ್ತಿದ್ದಾಳೆ.
ಇಂದು ವಿಜಯದಶಮಿಯ ಪ್ರಯುಕ್ತ ದೇವಿಗೆ ಗಜಲಕ್ಷ್ಮಿ ಅಲಂಕಾರ ಮಾಡಲಾಗಿದ್ದು, ದೇವಿಯು ಪದ್ಮದ ಮೇಲೆ ಕುಳಿತು ಅಕ್ಕಪಕ್ಕದಲ್ಲಿ ಎರಡು ಗಜಗಳಿಂದ ನಮಸ್ಕರಿಸಲ್ಪಡುತ್ತಾ, ಭಕ್ತಾದಿಗಳಿಗೆ ಮಂದಸ್ಮಿತ ವದನೆಯಾಗಿ ವರಗಳನ್ನು ಕರುಣಿಸುವ ಮಾತೆಯಾಗಿ ಕಂಗೊಳಿಸುತ್ತಿದ್ದಾಳೆ ಜಗನ್ಮಾತೆ ಶಾರದೆ.
ಇಂದು ಶೃಂಗೇರಿಯ ಕಾಳಿಕಾಂಬ ದೇವಸ್ಥಾನಕ್ಕೆ ಸಂಜೆಯ ಬೀದಿ ಉತ್ಸವ ತೆರಳಲಿದ್ದು, ಅಲ್ಲಿನ ಬನ್ನಿ ಮಂಟಪಕ್ಕೆ ಹಾಗೂ ಕಾಳಿಕಾಮಾತೆಯ ದೇಗುಲದಲ್ಲಿ ದೇವಿಗೆ ಪೂಜೆ ಸಲ್ಲಿಸಿ ಬನ್ನಿ ತರಲಾಗುವುದು.
ನಾಳೆ ಗಜಲಕ್ಷ್ಮಿ ಅಲಂಕಾರದಲ್ಲಿ ದೇವಿಯ ಮಹಾರಥೋತ್ಸವ ಶೃಂಗೇರಿಯ ಭಾರತೀ ಬೀದಿಯಲ್ಲಿ ಜರುಗಲಿದ್ದು, ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವ ಸಹ ನಡೆಯಲಿದೆ. ವಿವಿಧ ಕಲಾ ತಂಡಗಳು, ಭಜನಾ ತಂಡಗಳು ಸೇರಿದಂತೆ ಅನೇಕ ಸಂಖ್ಯೆಯಲ್ಲಿ ಭಕ್ತರು ರಥೋತ್ಸವದಲ್ಲಿ ಭಾಗಿಯಾಗಲಿದ್ದಾರೆ.










0 Comments