ಕ್ಷೇತ್ರದಲ್ಲಿ ಅಧಿಕಾರದಾಹಕ್ಕೆ ಕಾರ್ಯಕರ್ತರು ಬಲಿಯಾಗುತ್ತಿದ್ದಾರೆ, ಕೇವಲ ಹಿಂಬಾಲಕರಿಗೆ ಮಾತ್ರ ಸ್ಥಾನಮಾನ ಉಳಿದವರಿಗೆ ಕೇವಲ ಭಾವನಾತ್ಮಕ ಬ್ಲಾಕ್ ಮೇಲ್ ಎಂದು ಹಿಂದೂ ಬ್ರಿಗೇಡ್ ಪದಾಧಿಕಾರಿಗಳು ಕಿಡಿಕಾರಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ರಾಜ್ಯಸರ್ಕಾರ ಕಾಫಿಮಂಡಳಿಯ ಸದಸ್ಯರನ್ನು ಆಯ್ಕೆಮಾಡಿದೆ. ಈ ಕ್ಷೇತ್ರದಲ್ಲಿ ಮಂಡಳಿಗೆ ಆಯ್ಕೆಯಾದ ವ್ಯಕ್ತಿಗಳಲ್ಲಿ ಕೆಲವರ ಆಯ್ಕೆ ಬೇಸರವುಂಟು ಮಾಡುತ್ತದೆ, ಕ್ಷೇತ್ರದ ಏಕಚಕ್ರಾಧಿಪತಿಯಂತೆ ವರ್ತಿಸುವ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ತನ್ನ ಹಿಂಬಾಲಕರಿಗೆ ಮಾತ್ರ ಪಕ್ಷ, ಸರಕಾರದ ಬೋರ್ಡ್ ಪದವಿಕೊಡಿಸುತ್ತಿರುವುದು ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸುವ ಸ್ವಭಾವ, ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಭ್ರಮನಿರಸನ ಆಗುವಂತೆ ಮಾಡಿದೆ ಎಂದರು.
ಮಾಜಿ ಶಾಸಕರ ಬೆಂಬಲಿಗರಿಗೆ ಮಾತ್ರ ಸ್ಥಾನ, ಹಿಂದೂ ಬ್ರಿಗೇಡ್ ನಿಂದ ಸಾಲು ಸಾಲು ಆರೋಪ:
ಕೊಪ್ಪದ ಮೂರುಜನ ಪಕ್ಷದ ನಾಯಕರಿಗೆ ಕನಿಷ್ಠ ನಾಲ್ಕು ನಾಲ್ಕು ಹುದ್ದೆಗಳು, ಬಾಳೆಹೊನ್ನೂರಿನ ನಾಯಕರೊಬ್ಬರಿಗೆ ಮೂರು ಹುದ್ದೆಗಳು, ಶೃಂಗೇರಿಯ ಇಬ್ಬರಿಗೆ ಎರೆಡೆರಡು ಹುದ್ದೆಗಳು ಹೀಗೆ ತನ್ನ ಹಿಂಬಾಲಕರಿಗೆ ಮಾತ್ರ ಸ್ಥಾನಮಾನಗಳು ಕಾರ್ಯಕರ್ತರಿಗೆ ಭಾವನಾತ್ಮಕ ಬ್ಲಾಕ್ಮೇಲ್ ಅಷ್ಟೇ ಎಂದು ಆರೋಪಿಸಿರುವ ಗೌರಿ ಗಂಡಿ ಚಂದ್ರಶೇಖರ್, ಕಾಫಿ ಮಂಡಳಿಗೆ ಆಯ್ಕೆಯಾದ ಬಾಳೆಹೊನ್ನೂರಿನ ಹಿಂಬಾಲಕರೊಬ್ಬರಿಗೆ ಕಾಫಿತೊಟಕ್ಕೆ ಯಾವುದೇ ಸಂಬಂಧವಿಲ್ಲ, ಆತ ಬೆಳೆಗಾರನೂ ಅಲ್ಲ, ಕಾರ್ಮಿಕನು ಅಲ್ಲ ಆದರು ತನ್ನ ಹಿಂಬಾಲಕರೆಂಬ ಏಕಮೇವ ಕಾರಣಕ್ಕೆ ಮತ್ತೆ ಮತ್ತೆ ಅಧಿಕಾರ ನೀಡಲಾಗಿದೆ ಎಂದರು.
ಸೊಸೈಟಿ ಒಂದರಲ್ಲಿ ಹಗರಣ ಮಾಡಿ ಠೇವಣಿ ಗುಳುಂ ಮಾಡಿದವರು ರಾಜ್ಯಮಟ್ಟದ ಸಹಕಾರ ಸಂಘಗಳ ಒಕ್ಕೂಟದ ಸದಸ್ಯರಾಗುತ್ತಾರೆ, ಆತ್ಮೀಯರೂ ಎನ್ನುವ ಒಂದೇ ಕಾರಣಕ್ಕೆ ಕೊಪ್ಪದವರೊಬ್ಬರು ಕಳೆದ ಇಪ್ಪತ್ತು ವರುಷದಿಂದ ಅಧಿಕಾರ ಅನುಭವಿಸುತ್ತಾರೆ ಚುನಾವಣಾ ದೃಷ್ಟಿಯಿಂದ ಮಾತ್ರ ತನ್ನ ಹಿತಾಸಕ್ತಿ ಒಂದೇ ಉದ್ದೇಶದಿಂದ ಪಕ್ಷವನ್ನು ಅಧೋಗತಿಗೆ ತಳ್ಳುತ್ತಿರುವ ಈ ಸಂದರ್ಭದಲ್ಲಿ ಕ್ಷೇತ್ರಕ್ಕೆ ಆಗುತ್ತಿರುವ ಅನ್ಯಾಯಗಳನ್ನು ಖಂಡಿಸುವ ಮತ್ತು ಈ ಎರಡು ರಾಷ್ಟ್ರೀಯ ಪಕ್ಷದ ಸ್ಥಾನೀಯ ನಾಯಕರ ಜವಾಬ್ದಾರಿ ರಹಿತ ವರ್ತನೆಯನ್ನು ಖಂಡಿಸುತ್ತೇವೆ ಎಂಬುದಾಗಿ ತಿಳಿಸಿದರು.
ಪ್ರಚಾರದ ತೆವಲಿಗೆ ಮಲೆನಾಡಿಗರನ್ನು ಕೊಲೆಗಡುಕ, ನಕ್ಸಲ್ ರಂತೆ ಬಿಂಬಿಸಬೇಡಿ :
ಶಾಸಕರಾದ ಟಿ.ಡಿ ರಾಜೇಗೌಡ ನನಗೆ ಜೀವ ಬೆದರಿಕೆ ಇದೆ ಎಂಬುದಾಗಿ ಚಿಕ್ಕಮಗಳೂರಿನಲ್ಲಿ ಪತ್ರಿಕಾ ಹೇಳಿಕೆ ನೀಡಿದ್ದಾರೆ, ಶೃಂಗೇರಿ ಕ್ಷೇತ್ರದ ಜನರು ಫೋನ್ ಮಾಡಿ ಕೊಲೆಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದೆಲ್ಲಾಗೋಳಿಡುವ ನಿಮ್ಮವರ್ತನೆ ಕ್ಷೇತ್ರದ ಜನರಿಗೆ ಅವಮಾನ ಉಂಟುಮಾಡುತ್ತಿದೆ.
ನಿಮ್ಮ ಪ್ರಚಾರದ ತೆವಲಿಗೆ ಕ್ಷೇತ್ರದ ಜನರನ್ನು ಭಯೋತ್ಪಾದಕ, ನಕ್ಸಲ್, ಕೊಲೆಗೆಡುಕರು ಅಂತೆಲ್ಲಾ ಬಿಂಬಿಸುವುದು ನಿಮ್ಮ ಯೋಗ್ಯತೆಗೆ ತಕ್ಕುದಾಗಿದೆ. ಶೃಂಗೇರಿಯ ಜನರು ಶಾಂತಿಪ್ರಿಯರು ನಿಮಗೆ ಭಯ ಬೇಡ ನಾವೇ ನಿಮ್ಮ ಜೀವದ ರಕ್ಷಣೆಯ ಜವಾಬ್ದಾರಿ ಹೊರುತ್ತೇವೆ ಎಂಬುದಾಗಿ ತಿಳಿಸಿದರು.
ಶಾಸಕರು ಮತ್ತು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳ ಅಧಿಕಾರದ ದಾಹಕ್ಕೆ ಕ್ಷೇತ್ರ ಬಡವಾಗಿದ್ದೇ ಸಾಕಾಗಿದೆ, ಜನರ ಮೇಲೆ ಕೊಲೆಗೆಡುಕ ಪಟ್ಟಕಟ್ಟಬೇಡಿ ಎಂದು ಹೇಳಿಕೆ ಮುಖಾಂತರ ಹಿಂದೂ ಬ್ರಿಗೇಡ್ ಪದಾಧಿಕಾರಿಗಳು ತಿಳಿಸಿದರು.
ಈ ಸಮಯದಲ್ಲಿ ಹಿಂದೂ ಬ್ರಿಗೇಡ್ ಕಾರ್ಯದರ್ಶಿ ಚಂದ್ರಶೇಖರ್ ಗೌರಿಗಂಡಿ, ಹಿಂದೂ ಬ್ರಿಗೇಡ್ ಶೃಂಗೇರಿ ಕ್ಷೇತ್ರದ ಅಧ್ಯಕ್ಷರಾದ ನಾರಾಯಣ್ ಬೆಂಡೇಹಕ್ಲು ಇದ್ದರು.









0 Comments