ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಜಮೀನಿನ ವಿವಾದಕ್ಕೆ ಸಂಬಂಧಿಸಿದಂತೆ ವಿಚಾರ ಮಾಡಲು ತೆರಳಿದ ವ್ಯಕ್ತಿಯ ಮೇಲೆ ಜಮೀನಿನ ಮಾಲೀಕ ಗುಂಡು ಹಾರಿಸಿರುವ ಘಟನೆ ವರದಿಯಾಗಿದೆ.
ಇಂದು ಬೆಳಿಗ್ಗೆ ಸುಮಾರು 9.30 ರ ಸಮಯದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಪಟ್ಟಣದ ಬೇಲೂರು ರಸ್ತೆಯಲ್ಲಿರುವ ದುಗ್ಗಪ್ಪಗೌಡ ಎಂಬುವವರ ಮನೆಯ ಬಳಿಗೆ ನಾರಾಯಣ ಮತ್ತು ಮಣಿ ಎಂಬ ಇಬ್ಬರು ತೆರಳಿದ್ದು, ಆ ಸಮಯದಲ್ಲಿ ಮನೋಜ್ ರವರು ಮಂಚೇಗೌಡ ಇವರಿಂದ ಖರೀದಿಸಿದ್ದ ಜಾಗಕ್ಕೆ ಬೇಲಿ ನಿರ್ಮಾಣ ಮಾಡುತ್ತಿದ್ದರು ಎನ್ನಲಾಗಿದೆ. ಈ ವೇಳೆ ದುಗ್ಗಪ್ಪಗೌಡ ಎಂಬುವವರು ಅವರ ಪತ್ನಿ ಅಳಿಯ ಮತ್ತು ಮಗಳ ಜೊತೆಗೆ ಬಂದು ಯಾಕೆ ಬೇಲಿ ನಮ್ಮ ಜಾಗದಲ್ಲಿ ಹಾಕುತ್ತೀರಾ ಎಂದು ಹೇಳಿ ಬೈದಿದ್ದು, ದುಗ್ಗಪ್ಪ ಗೌಡರವರು ಮನೆ ಒಳಗಿನಿಂದ ಬಂದೂಕನ್ನು ತಂದು ಮನೋಜ್ ಹಳೆಕೋಟೆ ರವರಿಗೆ ಗುರಿ ಮಾಡಿ ಗುಂಡು ಹಾರಿಸಿದ್ದು ಆ ಗುಂಡು ನಾರಾಯಣ ಎಂಬುವವರ ಬಲ ಕಾಲಿನ ಮಂಡಿಗೆ ತಗುಲಿದೆ, ಕೂಡಲೇ ಮಣಿ ಅವರು ನಾರಾಯಣ ಅವರನ್ನು ಆಸ್ಪತ್ರೆಗೆ ಸೇರಿಸಿದ್ದಾರೆ ಎನ್ನಲಾಗಿದೆ.
ಬಂದೂಕಿನಿಂದ ಗುಂಡು ಹಾರಿಸಿದ ದುಗ್ಗಪ್ಪ ಗೌಡ ಮತ್ತು ದುಗ್ಗಪ್ಪ ಗೌಡ ರವರಿಗೆ ಕುಮ್ಮಕ್ಕು ನೀಡಿದ ಅವರ ಪತ್ನಿ, ಮಗಳು, ಅಳಿಯ ರವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು ಎಂಬುದಾಗಿ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ದೂರಿನ ಅನ್ವಯ ದುಗ್ಗಪ್ಪಗೌಡ ಅವರನ್ನು ಮೂಡಿಗೆರೆ ಠಾಣೆಯ ಪೊಲೀಸರು ಬಂಧಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಪೊಲೀಸರು ಈ ಕುರಿತಾಗಿ ಸಂಪೂರ್ಣ ವಿಚಾರಣೆ ನಡೆಸಿದ ಬಳಿಕವಷ್ಟೇ ಹೆಚ್ಚಿನ ಮಾಹಿತಿಗಳು ಹೊರಬೀಳಲಿದೆ.






0 Comments