ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯ ವಿವಿಧ ಠಾಣೆಗಳ ಪೊಲೀಸ್ ಪಿಎಸ್‌ಐ ಗಳನ್ನು ಆಡಳಿತಾತ್ಮಕ ಹಿತದೃಷ್ಟಿಯಿಂದಾಗಿ ವರ್ಗಾವಣೆಗೊಳಿಸಿ ಆದೇಶಿಸಿದೆ.

ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ಠಾಣೆಯ ಪಿಎಸ್‌ಐ ಆಗಿ ಕಾರ್ಯನಿರ್ವಹಿಸುತ್ತಿದ್ದ ದಿಲೀಪ್ ಕುಮಾರ್ ವಿ.ಟಿ ಅವರನ್ನು ಬಾಳೇಹೊನ್ನೂರು ಠಾಣೆಗೆ ವರ್ಗಾವಣೆಗೊಳಿಸಿದ್ದು, ಚಿಕ್ಕಮಗಳೂರು ಮಹಿಳಾ ಪೋಲೀಸ್ ಠಾಣೆಯ ಪಿಎಸೈ ಆಗಿ ಕಾರ್ಯನಿರ್ವಹಿಸುತ್ತಿದ್ದ ಕಿರಣ್ ಕುಮಾರ್ ಅವರನ್ನು ಜಯಪುರ ಠಾಣೆಗೆ ವರ್ಗಾವಣೆಗೊಳಿಸಿ ಆದೇಶಿಸಲಾಗಿದೆ. ಅಂತೆಯೇ ನರಸಿಂಹರಾಜಪುರ ಠಾಣೆಯ ತನಿಖಾ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪಿಎಸೈ ಗುರುಸಜ್ಜನ್ ಅವರನ್ನು ಕಾಮತ್ತುಸು ಹಾಗೂ ಸಂಚಾರ ವಿಭಾಗಕ್ಕೆ ವರ್ಗಾವಣೆಗೊಳಿಸಿ ಆದೇಶಿಸಲಾಗಿದೆ. 

ಇದನ್ನೂ ಓದಿ: ಚಿಕ್ಕಮಗಳೂರು: ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಭ್ರಷ್ಟ ಅಧಿಕಾರಿ


ಶೃಂಗೇರಿ: ವ್ಯಕ್ತಿ ಸಾವನ್ನಪ್ಪಿದ ನಂತರ ಆತನ ಚೆಕ್ ಬಳಸಿ ಸಾಲದ ಮೊತ್ತ ಹಿಂಪಡೆಯಲಾಗಿದೆ ಕುಟುಂಬಸ್ಥರ ಆರೋಪ.

ಶೃಂಗೇರಿ: ಶೃಂಗೇರಿ ವಿವಿಧೋದ್ದೇಶ ಸೌಹಾರ್ದ ಸಹಕಾರ ಸಂಘದಲ್ಲಿ ಶೃಂಗೇರಿ ತಾಲೂಕು ಕಛೇರಿ ಡ್ರೈವರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ವಿಜೇತ್ ಎಂಬುವವರು ಈ ಹಿಂದೆ ಸಾಲ ಪಡೆದಿದ್ದರು, ಆದರೆ ವಿಜೇತ್ ಕಳೆದ ಜನವರಿ ತಿಂಗಳಲ್ಲಿ ಕಾರಣಾಂತರಗಳಿಂದ ಆತ್ಮಹತ್ಯೆ ಮಾಡಿಕೊಂಡಿದ್ದರು, ಆ ನಂತರ ಏಪ್ರಿಲ್ ತಿಂಗಳಲ್ಲಿ ಅವರಿಗೆ ಬರಬೇಕಿದ್ದ 8 ತಿಂಗಳ ಸಂಬಳ ಅವರ ಖಾತೆಗೆ ಜಮಾ ಆಗಿದೆ, ಆ ಸಂದರ್ಭದಲ್ಲಿ ಸಾಲ ನೀಡಿದ್ದ ಸೊಸೈಟಿ ಅವರು ಜಾಮೀನುದಾರರಾಗಿದ್ದ ಅವರ ತಂದೆಯವರಿಗೆ ಅಥವಾ ಕುಟುಂಬಸ್ಥರಿಗೆ ಮಾಹಿತಿ ನೀಡದೆ ಸಾವನ್ನಪ್ಪಿದ್ದ ವಿಜೇತ್ ಚೆಕ್ ಬಳಸಿ ತಮಗೆ ಮರುಪಾವತಿ ಆಗಬೇಕಿದ್ದ 76,500ರೂ ಹಣವನ್ನು ಪಡೆದುಕೊಂಡಿರುತ್ತಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ

ಸಾಲ ವಸೂಲಾತಿಗೆ ಅದರದೇ ಆದ ನೀತಿ ನಿಯಮಗಳಿವೆ, ಆದರೆ ಕನಿಷ್ಠ ಮಾಹಿತಿ ನೀಡದೆ ಅವನ ಅಕೌಂಟ್ ನಿಂದ ಚೆಕ್ ಬಳಸಿ ಹಣ ಪಡೆದಿರುವುದು ಎಷ್ಟು ಸರಿ, ಅದನ್ನು ಕೇಳಲು ಹೋಗಿದ್ದ ಕುಟುಂಬಸ್ಥರಿಗೆ ಸರಿಯಾದ ಉತ್ತರ ನೀಡುತ್ತಿಲ್ಲ.


ತಹಸೀಲ್ದಾರರ ಮೂಲಕ ಮನವಿ ಸಲ್ಲಿಸುತ್ತಿದ್ದು ಕುಟುಂಬಕ್ಕೆ ನ್ಯಾಯ ದೊರಕಿಸಿ ಕೊಡುವಂತೆ ಒತ್ತಾಯಿಸಿದ್ದಾರೆ. ನ್ಯಾಯ ದೊರಕದೇ ಹೋದಲ್ಲಿ ಮುಂಬರುವ ದಿನದಲ್ಲಿ ಪ್ರತಿಭಟನೆ ಮಾಡುವುದಾಗಿ ವಿಜೇತ್ ಸಂಬಂಧಿಕರಾದ ಕೊಚ್ಚವಳ್ಳಿ ಚೆನ್ನಕೇಶವ ಸುದ್ದಿಗೋಷ್ಠಿಯಲ್ಲಿ ಹೇಳಿಕೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ವಿಜೇತ್ ತಂದೆ ನಾಗರಾಜ್, ಬೆಟ್ಟಗೆರೆ ಸೊಸೈಟಿ ಅಧ್ಯಕ್ಷರಾದ ರಮೇಶ್ ಭಟ್, ಕುಟುಂಬಸ್ಥರಾದ ನಾಗೇಶ್ ಹೆಗ್ಡೆ, ಜಗದೀಶ್, ಪುರುಷೋತ್ತಮ ಇದ್ದರು.

ಎಲ್ಲವೂ ಪಾರದರ್ಶಕ, ಕಾನೂನು ಬದ್ಧವಾಗಿ ನಡೆದಿದೆ ಸಂಸ್ಥೆಯಿಂದ ಸ್ಪಷ್ಟನೆ:

ಆದರೆ ಇದಕ್ಕೆ ಪ್ರತಿಕ್ರಿಯಿಸಿದ ಶೃಂಗೇರಿ ವಿವಿಧೋದ್ದೇಶ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷರಾದ ಪ್ರದೀಪ್ ಗಂಡಘಟ್ಟ ಅವರು ಎಲ್ಲವೂ ಪಾರದರ್ಶಕ, ಕಾನೂನು ಬದ್ಧವಾಗಿಯೇ ನಡೆದಿದೆ. ಸಂಸ್ಥೆಯಿಂದ ಸಾಲ ನೀಡಲಾಗಿತ್ತು, ಅದರ ಮರುಪಾವತಿಗೆ ಬಾಕಿ ಮೊತ್ತದ ಚೆಕ್ ಅನ್ನು ವಿಜೇತ್ ಜನವರಿ ತಿಂಗಳಲ್ಲಿ ನೀಡಿದ್ದರು, ಚೆಕ್ ನಾ ಕಾಲಾವಧಿಯಾದ ಮೂರು ತಿಂಗಳಿನ ಒಳಗೆ ಅದನ್ನು ವಿಜೇತ್ ಅವರ ಖಾತೆ ಇರುವ ಕರ್ಣಾಟಕ ಬ್ಯಾಂಕ್ ಗೆ ಸಲ್ಲಿಕೆ ಮಾಡಿದ್ದು ಅವರ ಖಾತೆಯಿಂದ ನಮ್ಮ ಬ್ಯಾಂಕಿನ ಸಾಲದ ಖಾತೆಗೆ ಜಮಾ ಆಗಿದೆ, ಸಂಘದ ಹಣವು ಎಲ್ಲಾ ಸಾರ್ವಜನಿಕರ ಹಣವಾಗಿದ್ದು ಅದನ್ನು ಹಿಂಪಡೆಯಲಾಗಿದೆ, ನಮ್ಮ ಸಂಸ್ಥೆಯ ಸಿಇಓ ಅದನ್ನು ನಿಯಮಾನುಸಾರವೇ ಮಾಡಿದ್ದಾರೆ ಎಂದು ಸ್ಪಷ್ಟೀಕರಣ ನೀಡಿದ್ದಾರೆ.