ಚಿಕ್ಕಮಗಳೂರು: (ಫ್ಯಾಕ್ಟ್ ಚೆಕ್) ಚಿಕ್ಕಮಗಳೂರು ಜಿಲ್ಲೆಯ ಅನೇಕ ಕಡೆಗಳಲ್ಲಿ ಮಕ್ಕಳ ಕಳ್ಳರಿದ್ದಾರೆ, ನಿಮ್ಮ ಮಕ್ಕಳು ಹುಷಾರ್, ಮಕ್ಕಳೆಡೆಗೆ ಹೆಚ್ಚಿನ ಜಾಗ್ರತೆ ನೀಡಿ ಇವನೇ ಮಕ್ಕಳ ಕಳ್ಳ ತಪ್ಪಿಸಿಕೊಂಡು ಓಡಿದ್ದಾನೆ ಎಂಬೆಲ್ಲಾ ರೀತಿಯ ಸ್ಟೇಟಸ್ ಗಳನ್ನು ಹಾಕಿಕೊಂಡು, ವಿವಿಧ ಗ್ರೂಪ್ ಗಳಿಗೆ ಒಂದು ಫೋಟೋ ಶೇರ್ ಮಾಡಿಕೊಂಡು ಜನರು ಆತಂಕಮಯ ವಾತಾವರಣದಲ್ಲಿದ್ದಾರೆ.
ನಿಜಕ್ಕೂ ಮಕ್ಕಳ ಕಳ್ಳ ಇದ್ದಾನೆಯೇ ? ಈತನಿಂದ ಯಾರದ್ದಾದರೂ ಮಕ್ಕಳ ಅಪಹರಣ ಆಗಿದೆಯೇ ? ಈ ಕುರಿತಾಗಿ ನ್ಯೂಸ್ ಮಲ್ನಾಡ್ ನಡೆಸಿರುವ ಫ್ಯಾಕ್ಟ್ ಚೆಕ್ ವರದಿ ಇಲ್ಲಿದೆ ನೋಡಿ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಕ್ಕಳ ಕಳ್ಳರ ಕುರಿತಾಗಿ ಅಪಹರಣಗಳ ಕುರಿತಾಗಿ ಕೇವಲ ವದಂತಿಗಳನ್ನು ಹಬ್ಬಿಸಲಾಗುತ್ತಿದೆಯೇ ಹೊರತು ನಿಜಕ್ಕೂ ಮಕ್ಕಳ ಕಳ್ಳರು ಇಲ್ಲ. ಈವರೆಗೆ ಮಕ್ಕಳ ಅಪಹರಣ ಅಥವಾ ಕಳ್ಳತನದಂತಹ ಕೃತ್ಯಗಳು ವರದಿಯಾಗಿಲ್ಲ ಎಂಬುದು ಸ್ಪಷ್ಟ ಮಾಹಿತಿ.
ಕೆಲ ಕಿಡಿಗೇಡಿಗಳು ಮಕ್ಕಳ ಅಪಹರಣದ ಬಗ್ಗೆ ಹಾಗೂ ಮಕ್ಕಳ ಕಳ್ಳರು ಇರುವ ಕುರಿತಾಗಿ ಸಾಮಾಜಿಕ ಜಾಲತಾಣಗಳಲ್ಲಿ ವದಂತಿಗಳನ್ನು ಹಬ್ಬಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಎಲ್ಲಿಯೂ ಮಕ್ಕಳ ಅಪಹರಣ / ಕಳ್ಳತನದಂತಹ ಕೃತ್ಯಗಳು ವರದಿಯಾಗಿರುವುದಿಲ್ಲ. ಸಾರ್ವಜನಿಕರು ಯಾವುದೇ ಸಹಾಯಕ್ಕಾಗಿ ದಯವಿಟ್ಟು 112 ಗೆ ಕರೆ ಮಾಡಿ - ಉಮಾ ಪ್ರಶಾಂತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಚಿಕ್ಕಮಗಳೂರು
ಕೆಲ ಕಿಡಿಗೇಡಿಗಳು ಸಮಾಜದಲ್ಲಿ ಆತಂಕಕರ ವಾತಾವರಣವನ್ನು ನಿರ್ಮಿಸುವ ಸಲುವಾಗಿ ಈ ರೀತಿಯ ವದಂತಿಯನ್ನು, ಊಹಾಪೋಹಗಳನ್ನು ಜನರ ನಡುವೆ ಬಿಂಬಿಸುತ್ತಿದ್ದು ಇಂತಹ ಕೃತ್ಯಗಳಿಗೆ, ಸಾಮಾಜಿಕ ಜಾಲತಾಣಗಳಲ್ಲಿ ಬರುವ ಸಂದೇಶಗಳಿಗೆ ಕಡಿವಾಣ ಹಾಕುವ ಸಲುವಾಗಿ ನಿರ್ಧಾರ ಕೈಗೊಂಡಿರುವ ಪೊಲೀಸರು ಸುಳ್ಳು ಸುದ್ದಿಗಳನ್ನು ಹಬ್ಬಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ.
ಸಂದೇಶಗಳನ್ನು ಫಾರ್ವರ್ಡ್ ಮಾಡುವ ಮುನ್ನ ಇರಲಿ ಎಚ್ಚರ:
ಸಾಮಾಜಿಕ ಜಾಲತಾಣಗಳಲ್ಲಿ ಬರುವ ಕೆಲ ಸಂದೇಶಗಳನ್ನು ನಿಜ ಅಥವಾ ಸುಳ್ಳೇ, ಹಳೆಯದಿಬಹುದಾ ಎಂದು ತಿಳಿದುಕೊಳ್ಳದೇ ಇತರರಿಗೆ, ಬೇರೆ ಬೇರೆ ಗ್ರೂಪ್ ಗಳಿಗೆ ಫಾರ್ವರ್ಡ್ ಮಾಡಿ ನಂತರ ಸಮಸ್ಯೆ ಎದುರಿಸುವ ಬದಲು ಇಂತಹ ಸೂಕ್ಷ್ಮ ವಿಚಾರಗಳನ್ನು ಗಮನಿಸಿಕೊಂಡು ನಂತರದಲ್ಲಿ ಶೇರ್ ಮಾಡುವುದು, ಫಾರ್ವರ್ಡ್ ಮಾಡುವುದು ಸೂಕ್ತವಾಗಿದೆ. ವಯಸ್ಸಾದವರು ಹಾಗೂ ಮಕ್ಕಳು ಮತ್ತು ಮೊಬೈಲ್ ಕುರಿತಾದ ಹೆಚ್ಚಿನ ಜ್ಞಾನ ಇಲ್ಲದೇ ಇರುವವರು ಈ ಅಂಶಗಳನ್ನು ಸೂಕ್ಷ್ಮವಾಗಿ ಗಮನಿಸಿ ಮುಂದುವರೆಯಿರಿ.
ಜಗನ್ಮೋಹಿನಿ ಅಲಂಕಾರದಲ್ಲಿ ಕಂಗೊಳಿಸುತ್ತಿರುವ ಜಗನ್ಮಾತೆ ಶಾರದೆ:
ಶೃಂಗೇರಿ: ಆದಿಗುರು ಶಂಕರಾಚಾರ್ಯರಿಂದ ಸ್ಥಾಪಿತಗೊಂಡಿರುವ ದಕ್ಷಿಣಾಮ್ನಾಯ ಶೃಂಗೇರಿ ಶಾರದಾ ಪೀಠದಲ್ಲಿ ಶರನ್ನವರಾತ್ರಿ ಉತ್ಸವ ಹಾಗೂ ಧಾರ್ಮಿಕ ಕಾರ್ಯಗಳು ನಡೆಯುತ್ತಿದ್ದು, ದೇವಿಯ ದರ್ಶನವನ್ನು ಪಡೆಯಲು ಭಕ್ತರು ವಿವಿಧೆಡೆಗಳಿಂದ ಗಿರಿಶಿಖರಗಳ ತಪ್ಪಲಿನಲ್ಲಿರುವ ಶೃಂಗೇರಿಗೆ ಆಗಮಿಸುತ್ತಿದ್ದಾರೆ.
ಇಂದು ದೇವಿ ಶಾರದೆಯು ಜಗನ್ಮೋಹಿನಿ ಅಲಂಕಾರದಲ್ಲಿ ಅಲಂಕೃತಗೊಂಡು ಭಕ್ತರಿಗೆ ದರ್ಶನವನ್ನು ನೀಡುತ್ತಿದ್ದಾಳೆ. ರತ್ನಖಚಿತ ಆಭರಣಗಳನ್ನು ದೇವಿಗೆ ಧರಿಸಲಾಗಿದ್ದು, ಕೈಯಲ್ಲಿ ಸ್ವರ್ಣದ ಕಳಶಹಿಡಿದು ದೇವಿಯು ನಾಟ್ಯ ಭಂಗಿಯಲ್ಲಿ ನಿಂತು ಭಕ್ತರನ್ನು ಅನುಗ್ರಹಿಸುತ್ತಿದ್ದಾಳೆ.
ಆಭರಣಗಳಿಂದ ಕಂಗೊಳಿಸುತ್ತಿರುವ ದೇವಿಯನ್ನು ಕಂಡು ಭಕ್ತಿ ಪರವಶರಾಗಿ, ಮೈಮರೆತು ಭಕ್ತರು ಪ್ರಾರ್ಥನೆಯಲ್ಲಿ ತೊಡಗಿದ್ದಾರೆ. ಶ್ರೀ ಮಠದ ಆವರಣದಲ್ಲಿ ಪ್ರತಿದಿನ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದು ಈ ಎಲ್ಲಾ ಕಾರ್ಯಗಳಲ್ಲಿ ಭಕ್ತರು ಭಾಗಿಯಾಗುತ್ತಿದ್ದಾರೆ.
ಮಳೆಯ ಮಧ್ಯೆಯೂ ನಡೆದ ಸಂಜೆಯ ಬೀದಿ ಉತ್ಸವ:
ನಿನ್ನೆ ಸಂಜೆ ಬೀದಿ ಉತ್ಸವ ನಡೆಯುವ ವೇಳೆ, ಮಳೆಬಂದರೂ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ಭಕ್ತಾದಿಗಳು ಮಳೆಯನ್ನೂ ಲೆಕ್ಕಿಸದೇ ಭಜನೆ ಮಾಡುತ್ತಾ, ಉತ್ಸವದಲ್ಲಿ ಪಾಲ್ಗೊಂಡರು. ವಿದ್ಯಾರಣ್ಯಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಭಕ್ತಾದಿಗಳು ಉತ್ಸವದಲ್ಲಿ ಪಾಲ್ಗೊಂಡಿದ್ದು ವಿವಿಧ ಟ್ಯಾಬ್ಲೋ ಗಳನ್ನು ಸಿದ್ಧಪಡಿಸಿಕೊಂಡು ಈ ಉತ್ಸವದಲ್ಲಿ ಭಾಗಿಯಾಗಿದ್ದರು. ದೇವತೆಗಳ ವೇಷದಲ್ಲಿದ್ದ ಮಕ್ಕಳು ಮಳೆಬಂದರೂ ಅದನ್ನು ಲೆಕ್ಕಿಸದೇ ಅದೇ ಭಂಗಿಯಲ್ಲಿ, ವೇಷದಲ್ಲಿ ತಾವಿದ್ದ ವಾಹನದಿಂದ ಕೆಳಗಿಳಿಯದೇ ಇದ್ದದ್ದು ಅತ್ಯಂತ ವಿಶೇಷವಾಗಿತ್ತು.
ಇಂದೂ ಕೂಡ ದೇವಿಯ ರಾಜಬೀದಿ ಉತ್ಸವ ನಡೆಯಲಿದ್ದು, ಪಟ್ಟಣದ ಭಾರತೀ ಬೀದಿ ಹಾಗೂ ಹರಿಹರಬೀದಿ ವಿದ್ಯುತ್ ದೀಪಾಲಂಕಾರಗಳಿಂದ ಕಂಗೊಳಿಸುತ್ತಿದ್ದು ಶೃಂಗೇರಿಯ ಗಾಂಧಿ ಮೈದಾನದಲ್ಲಿರುವ EXHIBITION ಕೂಡ ಜನರನ್ನು ಆಕರ್ಷಿಸುತ್ತಿದೆ.









0 Comments