ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಗ್ರಾಮ ಭಾರತ್ ತಂಡದ ವತಿಯಿಂದ ಶೃಂಗೇರಿಯ ಭಾರತೀಬೀದಿ ರಸ್ತೆಯಲ್ಲಿನ ವಿದ್ಯಾವಿಹಾರ ಲಾಡ್ಜ್ ಮುಂಬಾಗ ಹಲವು ಸೇವೆಗಳ ಉಚಿತ ನೋಂದಣಿ ಶಿಬಿರವನ್ನು ಆಯೋಜಿಸಲಾಗಿದೆ.

ಇಲ್ಲಿ ಸಾರ್ವಜನಿಕರು ಉಚಿತವಾಗಿ ಆಭಾ ಕಾರ್ಡ್, ಈ ಶ್ರಮ್ ಕಾರ್ಡ್, ಪಿಎಂ ಕಿಸಾನ್ - ಇ ಕೆವೈಸಿ, ಆಧಾರ್ - ಚುನಾವಣಾ ಗುರುತಿನ ಚೀಟಿ ಜೋಡಣೆ, ಹಿರಿಯ ನಾಗರಿಕರ ಕಾರ್ಡ್ ಹಾಗೂ ರಕ್ತದಾನಿಗಳ ನೋಂದಣಿಯ ಸೌಲಭ್ಯ ಪಡೆಯಬಹುದು.


ದಿನಾಂಕ 03 ಅಕ್ಟೋಬರ್ 2022ರಿಂದ 06 ಅಕ್ಟೋಬರ್ 2022ರವರೆಗೆ ಈ ಸೇವೆಗಳು ಲಭ್ಯವಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಗ್ರಾಮ ಭಾರತ್ ತಾಲೂಕು ಸಂಯೋಜಕ ಆದರ್ಶ ಕಾಂಚಿನಗರ ತಿಳಿಸಿದ್ದಾರೆ .

ಈ ಸಂದರ್ಭದಲ್ಲಿ ಸಂತೋಷ್ ಮೇಗೂರು, ನಿರಂಜನ್ ಶೃಂಗೇರಿ, ಅನಿರುದ್ಧ ಮಾನಗಾರು, ಅನಿರುದ್ಧ ಕೊರಡಕಲ್ಲು, ಅಭಿಲಾಷ್ ಮೆಣಸೆ, ರಂಜಿತ್ ಶೃಂಗೇರಿ ಇದ್ದರು.


ಶಕಟಪುರ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದ ಭಾರತ ಸರ್ಕಾರದ ಅಟಾರ್ನಿ ಜನರಲ್ ಆರ್. ವೆಂಕಟರಮಣಿ: 

ಕೊಪ್ಪ: ಚಿಕ್ಕಮಗಳೂರು ಜಿಲ್ಲೆಯ ವಿವಿಧ ಧಾರ್ಮಿಕ ಕ್ಷೇತ್ರಗಳಲ್ಲಿ ನವರಾತ್ರಿ ಉತ್ಸವವು ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದು, ಜಿಲ್ಲೆಯ ಧಾರ್ಮಿಕ ಕ್ಷೇತ್ರಗಳಿಗೆ ಅಪಾರ ಸಂಖ್ಯೆಯ ಭಕ್ತರು ಆಗಮಿಸುತ್ತಿದ್ದಾರೆ.

ಕೊಪ್ಪ ತಾಲೂಕಿನ ಶ್ರೀ ಕ್ಷೇತ್ರ ಶಕಟಪುರ ಸಂಸ್ಥಾನಕ್ಕೆ ಭಾರತ ಸರ್ಕಾರದ ಅಟಾರ್ನಿ ಜನರಲ್ ವೆಂಕಟ ರಮಣಿಯವರು ಭೇಟಿ ನೀಡಿ ಶ್ರೀಗಳ ಹಾಗೂ ದೇವರ ಕೃಪೆಗೆ ಪಾತ್ರರಾದರು. 



ಶ್ರೀ ಜಗದ್ಗುರು ಬದರೀ ಶಂಕರಾಚಾರ್ಯ ಸಂಸ್ಥಾನಮ್, ಶ್ರೀ ಕ್ಷೇತ್ರ ಶಕಟಪುರ ಶ್ರೀ ವಿದ್ಯಾಪೀಠದ ಪ್ರಧಾನ ಶಿಷ್ಯರಾದ, ಭಾರತ ಸರ್ಕಾರದ ಅಟಾರ್ನಿ ಜನರಲ್ ಆದ ಶ್ರೀ ಆರ್ ವೆಂಕಟರಮಣಿ ರವರು ತಮ್ಮ ಕುಟುಂಬದ ಸಮೇತ ಭೇಟಿ ನೀಡಿ ದೇವರ ಹಾಗೂ ಶ್ರೀಗಳ ದರ್ಶನ ಪಡೆದು, ಅನುಗ್ರಹ ಪಡೆದರು. 

ಪೂಜ್ಯ ಶ್ರೀಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದ ಅವರು ಶ್ರೀಗಳ ಚರಣಗಳಿಗೆ ಅನಂತಕೋಟಿ ಸಾಷ್ಟಾಂಗ ಪ್ರಣಾಮಗಳನ್ನು ಸಲ್ಲಿಸಿ, ಗುರುಗಳ ಆಶೀರ್ವಾದ ಪಡೆದರು.