ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಮುಸಲ್ಮಾನರು ಆಚರಿಸಿದ ಈದ್ ಮಿಲಾದ್ ಹಬ್ಬದಲ್ಲಿ ಸಮಾಜಕ್ಕೆ ಸಮಸ್ಯೆ ಮಾಡಲಾಗಿದೆ, ಈ ಸಮಸ್ಯೆಗಳನ್ನು ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುಬೇಕೆಂದು ಬಜರಂಗದಳದ ಪ್ರಾಂತ ಸಹ ಸಂಯೋಜಕ ರಘು ಸಕಲೇಶಪುರ ಆಗ್ರಹಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಚಿಕ್ಕಮಗಳೂರು ನಗರದಲ್ಲಿ ಈದ್ ಮಿಲಾದ್ ಹೆಸರಿನಲ್ಲಿ ಭಯದ ವಾತಾವರಣ ಸೃಷ್ಟಿಸಿ, ಪೊಲೀಸರ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ವಿಶ್ವ ಹಿಂದೂ ಪರಿಷತ್ ಭಜರಂಗದಳ ಆಗ್ರಹಿಸಿದೆ. 

ಈದ್ ಮಿಲಾದ್ ಹಬ್ಬದ ದಿನದಂದು ಮೆರವಣಿಗೆಯ ಸಲುವಾಗಿ ಚಿಕ್ಕಮಗಳೂರಿನ M.G ರಸ್ತೆ I.G ರಸ್ತೆ ಸಂಪೂರ್ಣವಾಗಿ ಬಂದ್ ಮಾಡಿ ಯಾವುದೇ ಹೋಟೆಲ್ ಗಳು ಇಲ್ಲದಂತೆ ಮಾಡಿರುವುದು ಅನೇಕರಿಗೆ ಸಮಸ್ಯೆಯನ್ನು ಉಂಟುಮಾಡಿತ್ತು. KSRTC ಬಸ್ ನಿಲ್ದಾಣವನ್ನು ಮೈದಾನಕ್ಕೆ ಸ್ಥಳಾಂತರ ಮಾಡಿರುವುದು ಅಧಿಕಾರಿಗಳಿಗೆ ಭಯವಿದೆಯೋ ಅಥವಾ ಸಮಾಜವನ್ನು ಭಯದ ವಾತಾವರಣಕ್ಕೆ ಇವರೇ ದೂಡುತ್ತಿದ್ದಾರೋ ಎಂಬ ಪ್ರಶ್ನೆಯನ್ನು ಎದುರು ಮಾಡಿದೆ. ಪಿಎಫ್ಐ ಬ್ಯಾನ್ ನ ನಂತರ ಮತ್ತೇ ಅವರಿಗೆ ಮಣೆ ಹಾಕಿರುವುದನ್ನು ಭಜರಂಗದಳ ಖಂಡಿಸುತ್ತದೆ - ರಘು ಸಕಲೇಶಪುರ, ಬಜರಂಗದಳ ಪ್ರಾಂತ ಸಹ ಸಂಯೋಜಕ


ರಸ್ತೆಗಳನ್ನು ಸಂಪೂರ್ಣ ಬಂದ್ ಮಾಡಿದ ಪರಿಣಾಮ ಪ್ರವಾಸಿಗರಿಗೆ ಇದರಿಂದ ಸಮಸ್ಯೆ ಉಂಟಾಗಿತ್ತು, ಶೃಂಗೇರಿ, ಹೊರನಾಡು, ಕಳಸ, ದೇವೀರಮ್ಮ ದೇವಸ್ಥಾನಗಳಿಗೆ ತೆರಳುವವರಿಗೆ ದೇವಸ್ಥಾನಕ್ಕೆ ತೆರಳಲು ಸಾಧ್ಯವಾಗಿರಲಿಲ್ಲ, ಅನೇಕರು ಊಟ ತಿಂಡಿ ಸಿಗದೇ ಪರದಾಡಿದ್ದಾರೆ, ಸಮಸ್ಯೆ ಉಂಟುಮಾಡಿರುವವವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. 

ಇದಲ್ಲದೇ ಚಿಕ್ಕಮಗಳೂರಿನ ಬಸ್ ನಿಲ್ದಾಣವನ್ನು ಜಿಲ್ಲಾ ಕ್ರೀಡಾಂಗಣಕ್ಕೆ ಬದಲಿಸಿ ಪ್ರವಾಸಿಗರಿಗೆ ಹಾಗೂ ಸಾರ್ವಜನಿಕರಿಗೆ ಸಮಸ್ಯೆ ಸೃಷ್ಟಿಮಾಡಲಾಗಿದೆ ಎಂದು ಆರೋಪಿಸಿರುವ ಅವರು ಇದರಲ್ಲಿ ಪೊಲೀಸ್ ಇಲಾಖೆ ಹಾಗೂ ಆಡಳಿತ ಕೂಡ ಬೇಜವಾಬ್ದಾರಿಯಿಂದ ಕಾರ್ಯನಿರ್ವಹಿಸಿದೆ ಇದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ ಈ ಘಟನೆಯನ್ನು ತೀವ್ರವಾಗಿ ಖಂಡಿಸಿದೆ.