ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಕ್ಯಾನ್ಸರ್ ಖಾಯಿಲೆಗೆ ತುತ್ತಾಗಿ ಶೃಂಗೇರಿಯ ಯುವಕನೋರ್ವ, ತನ್ನ ಜೀವನದ ಪ್ರಯಾಣವನ್ನು ಮಧ್ಯದಲ್ಲೇ ಬಿಟ್ಟು ಬಾರದ ಲೋಕಕ್ಕೆ ತೆರಳಿರುವ ಬೇಸರದ ಘಟನೆಯೊಂದು ನಡೆದಿದೆ.
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ನೆಮ್ಮಾರು ಪ್ರತಾಪ್ N.M (24) ಮೃತ ಯುವಕ. ಶೃಂಗೇರಿಯ ಜೇಸಿಬಿಎಂ ಕಾಲೇಜಿನಲ್ಲಿ ಪಿಯುಸಿ ವಿದ್ಯಾಭ್ಯಾಸ ನಡೆಸಿದ ಈತ, ಪದವಿಯನ್ನು ಎಂಜಿಎಂ ಉಡುಪಿಯಲ್ಲಿ ಅಭ್ಯಸಿಸಿದ್ದ. ಪ್ರಸ್ತುತ BPhEd ಅಂತಿಮ ಸೆಮಿಸ್ಟರ್ ಅಭ್ಯಾಸ ನಡೆಸುತ್ತಿದ್ದ, ಅಂತೆಯೇ ಓರ್ವ ಅತ್ಯುತ್ತಮ ಕಬಡ್ಡಿ ಕ್ರೀಡಾಪಟು ಆಗಿದ್ದ. ಅನೇಕ ಪ್ರಶಸ್ತಿಗಳನ್ನು ಕ್ರೀಡೆಯಲ್ಲಿ ಈತ ಪಡೆದುಕೊಂಡು ಯಶಸ್ಸನ್ನು ಸಾಧಿಸಿದ್ದ. KAS ಮಾಡುವ ಸಲುವಾಗಿ ಅನೇಕ ತಯಾರಿಗಳನ್ನು ನಡೆಸುತ್ತಿದ್ದ ಯುವಕ ಪ್ರತಾಪ್, ಬಾರದ ಲೋಕಕ್ಕೆ ತೆರಳಿರುವುದು ಅತ್ಯಂತ ಬೇಸರದ ಸಂಗತಿಯಾಗಿದೆ.
ಕಳೆದ ಕೆಲ ತಿಂಗಳುಗಳ ಹಿಂದೆ ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಪ್ರತಾಪ್ ಗೆ ಕ್ಯಾನ್ಸರ್ ಖಾಯಿಲೆ ಇರುವುದು ಧೃಢಪಟ್ಟಿತ್ತು. ಈ ನಂತರದಲ್ಲಿ ಚಿಕಿತ್ಸೆಗೆ ಸಹ ಒಳಪಡಿಸಲಾಗಿತ್ತು. ಆದರೆ ಇಂದು ಶೃಂಗೇರಿಯ ಕ್ರೀಡಾಪಟು ಪ್ರತಾಪ್ ಕೊನೆಯುಸಿರೆಳೆದಿದ್ದಾನೆ.
ಯುವಕನ ಸಾವಿನ ಕುರಿತು ಕುಟುಂಬಸ್ಥರು ಹಾಗೂ ಅಪಾರ ಸಂಖ್ಯೆಯ ಸ್ನೇಹಿತವರ್ಗ ಬೇಸರವನ್ನು ವ್ಯಕ್ತಪಡಿಸಿದ್ದು ಸ್ನೇಹಿತನ ಅಗಲುವಿಕೆಗೆ ಕಂಬನಿ ಮಿಡಿದಿದ್ದಾರೆ.
ಜೀವನದಲ್ಲಿ ಇನ್ನೂ ಅನೇಕ ಸಾಧನೆಗಳನ್ನು ಮಾಡಬೇಕೆಂಬ ಧೃಢ ಸಂಕಲ್ಪದ ಜೊತೆಗೆ, ಕುಟುಂಬದ ಜವಾಬ್ದಾರಿಯನ್ನು ಹೊರಬೇಕೆಂದಿದ್ದ ಯುವಕ ಜೀವನದ ಆರಂಭದಲ್ಲೇ ಅಂತ್ಯ ಕಂಡಿರುವುದು ಸಂಬಂಧಿಕರಲ್ಲಿ, ಸ್ನೇಹಿತವರ್ಗದಲ್ಲಿ ಇನ್ನಷ್ಟು ಬೇಸರವನ್ನು ತಂದೊಡ್ಡಿದೆ.









0 Comments