ತೀರ್ಥಹಳ್ಳಿ: (ನ್ಯೂಸ್ ಮಲ್ನಾಡ್ ವರದಿ) ಕೊಪ್ಪದ ಸ್ಥಳೀಯ ಪ್ರತಿಭೆಗಳಿಂದ ಭಕ್ತಿಸಂಗೀತ ಕಾರ್ಯಕ್ರಮ ನಡೆಯಿತು.

ಪಾಂಚಜನ್ಯ ಸಂಗೀತ ತಂಡದ ಪ್ರತಿಭಾನ್ವಿತ ಕಲಾವಿದರು: 

ಪಾಂಚಜನ್ಯ ಸಂಗೀತ ಎಂಬ ಹೆಸರಿನ ಈ ಗುಂಪಿನ ಗಾಯನದಲ್ಲಿ ಸೌರವ್ ಬಿ.ಪಿ ದನಿಯಾಗಿದ್ದು, ಕೊಪ್ಪದ ಮೇಘನಾ ಹಾಗೂ ಸಂಜನಾ ಗಾಯನಕ್ಕೆ ಜೊತೆಯಾದರು, ತಬಲಾದಲ್ಲಿ ಪವನ್ ಜಿ.ಎಸ್, ಗಿಟಾರ್ ನಲ್ಲಿ ವಿರಿಂಚಿ ಎಸ್ ರಾವ್ ಕೊಪ್ಪ ಜೊತೆಯಾದರು, ಕೀಬೋರ್ಡ್ ನಲ್ಲಿ ಸುಪ್ರೀತ್ ಟಿ.ಎಸ್ ರಾವ್ ಜೊತೆಯಾಗಿದ್ದು ಕೊಳಲಿನಲ್ಲಿ ಪ್ರದೀಪ್ ತೇಜಸ್ವಿವಾದನ ನಡೆಸಿದ್ದಾರೆ. 

ಇದನ್ನೂ ಓದಿ: ಬೈಕ್ ನಿಂದ ಬಿದ್ದು ಸಾವನ್ನಪ್ಪಿದ ಗ್ರಾಮ ಪಂಚಾಯತ್ ಸದಸ್ಯ


ಸಂಜೆ 8 ಗಂಟೆಗೆ ಆರಂಭಗೊಂಡ ಕಾರ್ಯಕ್ರಮ ಎರಡೂವರೆ ಗಂಟೆಗಳ ಕಾಲ ಜನರ ತನುಮನವನ್ನು ಸೆಳೆದಿತ್ತು. ಸ್ಥಳೀಯ ಪ್ರತಿಭೆಗಳ ವಾದ್ಯಗಳಿಂದ ರೂಪುಗೊಂಡ ಕಾರ್ಯಕ್ರಮ ಅಚ್ಚುಕಟ್ಟಾಗಿ ನೆರವೇರಿತು.

ಬೈಕ್ ನಿಂದ ಬಿದ್ದು ಸಾವನ್ನಪ್ಪಿದ ಗ್ರಾಮ ಪಂಚಾಯತ್ ಸದಸ್ಯ : 

ಚಿಕ್ಕಮಗಳೂರು: ಪೆಟ್ರೋಲ್ ಬಂಕ್ ಬಳಿ ಬೈಕ್ ನಿಂದ ಬಿದ್ದ ಪರಿಣಾಮ ಗ್ರಾಮ ಪಂಚಾಯತ್ ಸದಸ್ಯ ದುರ್ಮರಣವನ್ನಪ್ಪಿರುವ ಘಟನೆ ವರದಿಯಾಗಿದೆ.

ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕಿನ ಬೇಗೂರು ಗ್ರಾಮ ಪಂಚಾಯತ್ ಸದಸ್ಯರಾಗಿದ್ದ ಬೇಗೂರು ತಾಂಡ್ಯ ನಿವಾಸಿ ಹಾಲಾನಾಯ್ಕ್ (47) ಮೃತ ದುರ್ದೈವಿ. ಇವರು ಬುಧವಾರ ಪಟ್ಟಣದ ಪೆಟ್ರೋಲ್ ಬಂಕ್ ಬಳಿ ಬೈಕ್ ನಿಂದ ಬಿದ್ದು ಮೃತಪಟ್ಟಿದ್ದಾರೆ.


ಅವರು ಎರಡು ಬಾರಿ ಬೇಗೂರು ಗ್ರಾಮ ಪಂಚಾಯತಿ ಸದಸ್ಯರಾಗಿದ್ದರು, ಹಾಗೂ ಈ ಭಾಗದ ಚಿರಪರಿಚಿತ ವ್ಯಕ್ತಿಯಾಗಿದ್ದರು.

ಮೃತರು ಪತ್ನಿ ರೇಣುಕಾ ಬಾಯಿ, ಮತ್ತು ಆರು ಮಕ್ಕಳನ್ನು ಅಗಲಿದ್ದಾರೆ. ಅಂತ್ಯ ಸಂಸ್ಕಾರ ಮೃತರ ತೋಟದಲ್ಲಿ ನೆರವೇರಿತು ಅಂತೆಯೇ ಈ ಕುರಿತು ಪಟ್ಟಣದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.