ಕೊಪ್ಪ: (ನ್ಯೂಸ್ ಮಲ್ನಾಡ್ ವರದಿ) ವಾಕಿಂಗ್ ತೆರಳುತ್ತಿದ್ದ ವೇಳೆ ಬೈಕ್ ಗುದ್ದಿದ ಪರಿಣಾಮ ನಿವೃತ್ತರಾಗಿದ್ದ ಫಾರ್ಮಸಿಸ್ಟ್ ದುರ್ಮರಣವನ್ನಪ್ಪಿರುವ ಘಟನೆ ನಿನ್ನೆ ನಡೆದಿದೆ.

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದ ನಿವಾಸಿಯಾಗಿದ್ದ ನಿವೃತ್ತ ಫರ್ಮಾಸಿಸ್ಟ್ ನಾಗರಾಜ್ (60) ಮೃತರು. ನಿನ್ನೆ ಸಂಜೆಯ ವೇಳೆಗೆ ತಮ್ಮ ಮನೆಯಿಂದ ವಾಕ್ ಮಾಡಲೆಂದು ತೆರಳಿದ್ದ ನಾಗರಾಜ್ ಅವರಿಗೆ ಕೊಪ್ಪದ ಪ್ರಶಮನಿ ಆಸ್ಪತ್ರೆಯ ಸಮೀಪ ಬೈಕ್ ಗುದ್ದಿದ ಪರಿಣಾಮ, ತಲೆ ಹಾಗೂ ಕಾಲಿನ ಭಾಗಕ್ಕೆ ಗಂಭೀರ ಗಾಯಗಳಾಗಿತ್ತು. 

ಇದನ್ನೂ ಓದಿ: ಮೂಡಿಗೆರೆ: ಜಮೀನು ಗಲಾಟೆ ವಿಚಾರ, ಪತ್ರಕರ್ತನ ಮೇಲೆ ಸುಳ್ಳು ಪ್ರಕರಣ ದಾಖಲು: ಕಾರ್ಯನಿರತ ಪತ್ರಕರ್ತರ ಸಂಘ


ಪ್ರಾಥಮಿಕ ಚಿಕಿತ್ಸೆಯನ್ನು ಒದಗಿಸಿ ಕೂಡಲೇ ಶಿವಮೊಗ್ಗದ ಆಸ್ಪತ್ರೆಗೆ ರವಾನಿಸಲಾಯಿತಾದರೂ ಗಂಭೀರವಾಗಿ ಗಾಯಗೊಂಡಿದ್ದ ಅವರು ಕೊನೆಯುಸಿರೆಳೆದಿದ್ದಾರೆ.

ಬೈಕ್ ಚಾಲಕ ಹಾಗೂ ಸಹ ಸವಾರ ಕೂಡ ಈ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಕಳೆದ ಒಂದು ತಿಂಗಳ ಹಿಂದಷ್ಟೇ ಶೃಂಗೇರಿಯ ತಾಲೂಕು ಸಾರ್ವಜನಿಕ ಆಸ್ಪತ್ರೆಯಿಂದ ನಿವೃತ್ತಿ ಹೊಂದಿದ್ದ ಅವರು ಆಸ್ಪತ್ರೆಗೆ ಬರುವ ರೋಗಿಗಳ ಜೊತೆಗೆ ಹಾಗೂ ಸಿಬ್ಬಂದಿಗಳೊಂದಿಗೆ ಆತ್ಮೀಯವಾಗಿ ವ್ಯವಹರಿಸುತ್ತಿದ್ದರು. 

ಮೃತರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದು. ಶೃಂಗೇರಿ ತಾಲೂಕು ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ದಯಾನಂದ್ ಸೇರಿದಂತೆ ಆಸ್ಪತ್ರೆಯ ಸಿಬ್ಬಂದಿ ವರ್ಗ ನಾಗರಾಜ್ ಅವರ ಸಾವಿನ ಕುರಿತು ಸಂತಾಪವನ್ನು ಸೂಚಿಸಿದೆ.

ಈ ಭಾಗದಲ್ಲಿ ಹೆಚ್ಚಿನ ರಸ್ತೆ ಅಪಘಾತಗಳು ಸಂಭವಿಸುತ್ತಿರುವುದರಿಂದ PWD ಇಲಾಖೆ ರಿಫ್ಲೆಕ್ಟರ್ ಸೇರಿದಂತೆ ಅಗತ್ಯವಿರುವ ಸೂಕ್ತ ವ್ಯವಸ್ಥೆಗಳನ್ನು ಕಲ್ಪಿಸಬೇಕೆಂದು ಸಾರ್ವಜನಿಕರು ಅವಶ್ಯಕತೆಗಳ ಕುರಿತು ಒತ್ತಾಯಿಸಿದ್ದಾರೆ.


ಇಂದಿರಾ ಗಾಂಧಿಗೆ ರಾಜಕೀಯ ಪುನರ್ಜನ್ಮ ನೀಡಿದ್ದು ಚಿಕ್ಕಮಗಳೂರು; ಭಾರತ್ ಜೋಡೋ ಯಾತ್ರೆಯಲ್ಲಿ ಪುನರುಚ್ಚರಿಸಿದ ರಾಹುಲ್ ಗಾಂಧಿ : 

ಚಿಕ್ಕಮಗಳೂರು: ಭಾರತ್ ಜೋಡೋ ಯಾತ್ರೆಯ ವೇಳೆ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ನ ಪ್ರಮುಖ ನಾಯಕರು ಇಂದು ಮತ್ತೆ ಇಂದಿರಾಗಾಂಧಿ ಅವರಿಗೆ ರಾಜಕೀಯವಾಗಿ ಪುನರ್ ಜನ್ಮನೀಡಿದ ಕಾಫಿನಾಡು ಚಿಕ್ಕಮಗಳೂರಿನ ಕುರಿತು ಮಾತನಾಡಿದ್ದಾರೆ ಹಾಗೂ ಜನತೆಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಇಂದು ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಯು 1000 ಕಿಮೀ ಪೂರೈಸಿದ್ದು ಈ ವೇಳೆ ಅನೇಕ ನಾಯಕರು ಹಾಗೂ ಕಾಂಗ್ರೆಸ್ ಮುಖಂಡರುಗಳು ಬಳ್ಳಾರಿಯಲ್ಲಿ ಉಪಸ್ಥಿತರಿದ್ದು ಬಿಜೆಪಿ ವಿರುದ್ಧ ಕಿಡಿಕಾರಿದರು. 

ಕಾರ್ಯಕ್ರಮದಲ್ಲಿ ರಾಜಸ್ಥಾನದ ಸಿ.ಎಂ ಅಶೋಕ್​ ಗೆಹ್ಲೋಟ್ ಮಾತನಾಡಿ ಇಂದಿರಾ ಗಾಂಧಿ ಸಾಕಷ್ಟು ಅಭಿವೃದ್ಧಿ ಕಾರ್ಯ ಕೈಗೊಂಡಿದ್ದರು. ಇಂದು ಯಾತ್ರೆ 1,000 ಕಿಲೋ ಮೀಟರ್​ ಪೂರ್ಣಗೊಂಡಿದೆ. ರಾಹುಲ್ ಗಾಂಧಿ ನೇತೃತ್ವದಲ್ಲಿ ಪಾದಯಾತ್ರೆ ನಡೆಯುತ್ತಿದೆ. ಚಿಕ್ಕಮಗಳೂರಿನಲ್ಲಿ ಇಂದಿರಾ ಗಾಂಧಿ ಚುನಾವಣೆಗೆ ಸ್ಪರ್ಧಿಸಿದ್ರು. ಆಗ ನಾವೆಲ್ಲಾ ಪ್ರಚಾರಕ್ಕಾಗಿ ಚಿಕ್ಕಮಗಳೂರಿಗೆ ಬಂದಿದ್ದೆವು. ಅಭೂತಪೂರ್ವ ಮತಗಳಿಂದ ಅವರನ್ನು ಗೆಲ್ಲಿಸಿ ಕಳಿಸಿದ್ದೀರಿ ಎಂದು ಇಂದಿರಾ ಗಾಂಧಿ ಅವರ ಚುನಾವಣೆ ಸಂದರ್ಭವನ್ನು ನೆನಪಿಸಿಕೊಂಡರು. ದೇಶದಲ್ಲಿ ಇಂದು ಸಂವಿಧಾನವನ್ನು ಲೇವಡಿ ಮಾಡಲಾಗುತ್ತಿದೆ. ಸಮಾಜದಲ್ಲಿ ಜಾತಿಯ ವಿಷಬೀಜಗಳನ್ನು ಬಿತ್ತಲಾಗುತ್ತಿದೆ. ಇದನ್ನೆಲ್ಲವೂ ಕಿತ್ತಿ ಒಗೆಯೋದಕ್ಕೆ ಜೋಡೋ ಪಾದಯಾತ್ರೆ ನಡೆದಿದೆ. ದೇಶದಲ್ಲಿ ಹಿಂಸೆಯ ವಾತಾವರಣ ಇದೆ. ಈ ದೇಶದಲ್ಲಿ ಭಾತೃತ್ವದ ವಾತಾವರಣ ನಿರ್ಮಾಣ ಆಗಬೇಕು. ಇಂದಿರಾ ಗಾಂಧಿಯವರು ದೇಶಕ್ಕಾಗಿ ಪ್ರಾಣ ಕೊಟ್ಟರು. ಮುಂದಿನ ದಿನ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದರು.



1000 ಕಿಮೀ ಪೂರೈಸಿದ ಯಾತ್ರೆ: 

ಇಂದು 1 ಸಾವಿರ ಕಿಲೋಮೀಟರ್​​ ಪೂರ್ಣಗೊಳಿಸಿದ್ದೇವೆ. ಕಳೆದ 2 ವರ್ಷದಿಂದ ಸಹಕರಿಸಿದ ಎಲ್ಲರಿಗೂ ನಮಸ್ಕಾರಗಳು. ಯಾತ್ರೆಗೆ ಸೋನಿಯಾ ಗಾಂಧಿ ಬಂದು ದಸರಾ ಆಚರಿಸಿದ್ದಾರೆ. ಸೋನಿಯಾ ಗಾಂಧಿ ಭಾಗಿಯಾಗಿ ನಮಗೆಲ್ಲ ಶಕ್ತಿ ನೀಡಿದ್ದಾರೆ. ಅದೊಂದು ಐತಿಹಾಸಿಕ ಹೆಜ್ಜೆ. ನಮ್ಮ ರಾಜ್ಯದ ಪಾಲಿಗೆ ಇದೊಂದು ಸುವರ್ಣ ಅವಕಾಶ. ಈ ಯಾತ್ರೆ 150 ಸ್ಥಾನಗಳನ್ನ ಗೆಲ್ಲಲು ನೆರವಾಗುತ್ತೆ. ಈ ಪಾದಯಾತ್ರೆ ಖರ್ಗೆ, ಡಿಕೆಶಿ ಸಿಎಂ ಆಗುವುದಕ್ಕೆ ಅಲ್ಲ. ನಿಮ್ಮ ಹೆಜ್ಜೆ ದೇಶಕ್ಕೊಂದು ಕೊಡುಗೆ. ಈ ಹೆಜ್ಜೆ ರೈತರ ಬದುಕು, ಉದ್ಯೋಗದ ಸೃಷ್ಟಿಗೆ. ಬಿಜೆಪಿ ತೊಲಗಿಸಲು ನೀವು ಕಾರಣರಾಗಬೇಕು. ವಾಗ್ಧಾನ ನಮ್ಮದು ವಿಶ್ವಾಸ ನಿಮ್ಮದು ಎಂದು ಸಮಾವೇಶದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕರೆ ಕೊಟ್ಟರು.

ನಮ್ಮ ಅಜ್ಜಿಗೆ ರಾಜಕೀಯ ಪುನರ್ಜನ್ಮ ನೀಡಿದ್ದು ಕರ್ನಾಟಕ, ಚಿಕ್ಕಮಗಳೂರಿನ ಜನರು ಇಂದಿರಾ ಗಾಂಧಿಯವರನ್ನು ಗೆಲ್ಲಿಸಿದ್ರು. ನಮ್ಮ ತಾಯಿ ಸೋನಿಯಾರನ್ನು ಬಳ್ಳಾರಿ ಜನ ಗೆಲ್ಲಿಸಿದ್ರು. ಕರ್ನಾಟಕದ ಜನತೆಗೆ ನನ್ನ ಧನ್ಯವಾದಗಳು ಪಕ್ಷವನ್ನು ಕರ್ನಾಟಕದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ತರುವಲ್ಲಿ ರಾಹುಲ್ ಗಾಂಧಿ ಧನ್ಯವಾದ ತಿಳಿಸಿದರು.