ಹಾಸನ: (ನ್ಯೂಸ್ ಮಲ್ನಾಡ್ ವರದಿ) ವಿವಾಹಿತೆಗೆ ಮೆಸೇಜ್ ಮಾಡಿದ್ದ ಎಂಬ ಕಾರಣಕ್ಕೆ ಮಾರಣಾಂತಿಕವಾಗಿ ಹಲ್ಲೆ ಮಾಡಿ ವ್ಯಕ್ತಿಯನ್ನು ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಚನ್ನರಾಯಪಟ್ಟಣದ ದಂಡಿಗನಹಳ್ಳಿ ಹೋಬಳಿಯ ಊಪಿನ ಹಳ್ಳಿ ಗ್ರಾಮದ ಗಂಗಾಧರ್ ಕೊಲೆಯಾದ ವ್ಯಕ್ತಿ. ವೃತ್ತಿಯಲ್ಲಿ ಟೈಲರ್ ಆಗಿದ್ದ ಈತ ವಿವಾಹಿತ ಮಹಿಳೆಗೆ ಮೆಸೇಜ್ ಮಾಡಿದ್ದ ಎಂಬ ಕಾರಣಕ್ಕೆ ಜನಿವಾರ ಗ್ರಾಮದ ಐವರು ಗುರುವಾರ ಬೆಳಗ್ಗೆ ಕಾರಿನಲ್ಲಿ ಕಿಡ್ನಾಪ್ ಮಾಡಿಕೊಂಡು ಹೊತ್ತೊಯ್ದು ರೈಲ್ವೇ ಸೇತುವೆ ಬಳಿ ಗಂಭೀರವಾಗಿ ಹಲ್ಲೆ ನಡೆಸಿ ಎಸ್ಕೇಪ್ ಆಗಿದ್ದರು ಎನ್ನಲಾಗಿದ್ದು. ಈ ಕುರಿತು ಗಂಗಾಧರ್ ತನ್ನ ಅಣ್ಣನಿಗೆ ವಿಷಯವನ್ನು ತಿಳಿಸಿದ್ದ.
ಹಾಸನ: ವರ್ಷದ ಬಳಿಕ ಬಾಗಿಲು ತೆರೆದ ಹಾಸನದ ಅಧಿದೇವತೆ ಹಾಸನಾಂಬ ದೇಗುಲ
ಕೂಡಲೇ ಆತನನ್ನು ಅಣ್ಣ ಮೋಹನ್ ಪಟ್ಟಣದ ಖಾಸಗೀ ಆಸ್ಪತ್ರೆಗೆ ಕರೆತಂದು ಚಿಕಿತ್ಸೆಕೊಡಿಸಿದರೂ ಕೂಡ ಗಂಭೀರವಾಗಿ ಗಾಯಗೊಂಡಿದ್ದ ಆತನಿಗೆ ಚಿಕಿತ್ಸೆ ಫಲಕಾರಿಯಾಗದೆ ಗಂಗಾಧರ್ ಮೃತಪಟ್ಟಿದ್ದಾರೆ.
ಈ ಸಂಬಂಧ ಮೃತನ ಪತ್ನಿ ಸೌಮ್ಯ ಠಾಣೆಗೆ ತೆರಳಿ ದೂರು ದಾಖಲಿಸಿದ್ದು, ಗಂಡನ ಕೊಲೆಗೆ ಜನಿವಾರ ಗ್ರಾಮದ ಭರತ, ಚಿರು, ಸೋಮ, ಅಭಿ, ಪೂಜಾ ಹಾಗೂ ಇನ್ನೋರ್ವ ಆರೋಪಿಯ ಮೇಲೆ ದೂರು ನೀಡಿದ್ದು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ.








0 Comments