ಕೊಪ್ಪ: (ನ್ಯೂಸ್ ಮಲ್ನಾಡ್ ವರದಿ) ಒಮಿನಿ ಕಾರ್ ಹಾಗೂ ಜೀಪ್ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದ ಪರಿಣಾಮ ಓಮಿನಿ ಕಾರ್ ಚಾಲನೆ ಮಾಡುತ್ತಿದ್ದ ಚಾಲಕನ ಕಾಲು ತುಂಡಾಗಿರುವ ದುರ್ಘಟನೆ ಇಂದು ಸಂಭವಿಸಿದೆ.
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಹೆಗ್ಗಾರು ಕುಡಿಗೆ ಸಮೀಪದಲ್ಲಿ ಈ ಅಪಘಾತ ಸಂಭವಿಸಿದ್ದು, ಜೀಪ್ ಹಾಗೂ ಓಮಿನಿ ಕಾರಿನ ನಡುವೆ ಮುಖಾಮುಖಿ ಅಪಘಾತ ಸಂಭವಿಸಿದ ಪರಿಣಾಮ ಓಮಿನಿ ಕಾರನ್ನು ಚಾಲನೆ ಮಾಡುತ್ತಿದ್ದ ಶ್ರೀಧರ್ ಎಂಬುವವರ ಕಾಲು ತುಂಡಾಗಿದೆ, ಅವರ ಪತ್ನಿಯ ಕಾಲಿಗೂ ಪೆಟ್ಟಾಗಿದೆ.
ಶೃಂಗೇರಿಯ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆಯನ್ನು ಒದಗಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಆಸ್ಪತ್ರೆಗೆ ಇಬ್ಬರನ್ನೂ ರವಾನಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಅಪಘಾತದಲ್ಲಿ ನಾಲ್ಕೈದು ಮಂದಿಗೆ ಗಾಯಗಳಾಗಿದ್ದು ಅವರಿಗೆ ಚಿಕಿತ್ಸೆಯನ್ನು ಪೂರೈಕೆ ಮಾಡಲಾಗಿದೆ.
ಸ್ಥಳೀಯರು ಹಾಗೂ ಇತರೆ ಪ್ರವಾಸಿಗರು ಕೂಡಲೇ ನೆರವಿಗೆ ಧಾವಿಸಿ, ಅಪಘಾತಕ್ಕೀಡಾದ ದಂಪತಿಗಳನ್ನು ಆಸ್ಪತ್ರೆಗೆ ದಾಖಲಿಸುವಲ್ಲಿ ಸಹಕರಿಸಿದ್ದಾರೆ.







0 Comments