ಮಲೆನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಹರಡುತ್ತಿರುವ ಅಡಕೆ ಎಲೆ ಚುಕ್ಕೆ ರೋಗ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ₹8 ಕೋಟಿ ಅನುದಾನ ನಿಗದಿ ಮಾಡಿದ್ದು, ₹4 ಕೋಟಿಯನ್ನು ತಕ್ಷಣಕ್ಕೆ ರೈತರಿಗೆ ವಿತರಿಸಲು ಬಿಡುಗಡೆ ಮಾಡಲಾಗಿದೆ.
ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಕೊಡಗು, ಹಾಸನ ಜಿಲ್ಲೆಯಲ್ಲಿ ಒಟ್ಟು 20 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಎಲೆ ಚುಕ್ಕೆ ರೋಗ ಹಬ್ಬಿದ್ದು, ತೋಟಗಾರಿಕೆ ಇಲಾಖೆಯಿಂದ ಔಷಧಿ ಹಾಗೂ ಸಿಂಪಡಣೆ ವೆಚ್ಚ ಭರಿಸಲು ಅನುದಾನ ಬಿಡುಗಡೆಗೊಳಿಸಲಾಗಿದೆ.
ರೋಗ ನಿಯಂತ್ರಣಕ್ಕೆ ಗುಣಮಟ್ಟದ ಸಸ್ಯ ಸಂರಕ್ಷಣೆ ಔಷಧ ಕೊಳ್ಳಲು ಪ್ರತಿ ಹೆಕ್ಟೇರ್ ಗೆ ₹4000 ಹಾಗೂ ಮೊದಲ ಸಿಂಪಡಣೆಗಾಗಿ 1.5 ಹೆಕ್ಟೇರ್ ತೋಟಗಾರಿಕಾ ಪ್ರದೇಶ ಮಿತಿಗೊಳಪಟ್ಟು ಅನುದಾನ ಒದಗಿಸಲಾಗುವುದು.
ಶೃಂಗೇರಿ: ಗ್ರಾಮ ಭಾರತ್ ತಂಡದ ವತಿಯಿಂದ ಉಚಿತ ನೋಂದಣಿ ಶಿಬಿರ
ಗ್ರಾಮ ಭಾರತ್ ತಂಡದ ವತಿಯಿಂದ ಶೃಂಗೇರಿಯ ಭಾರತೀಬೀದಿ ರಸ್ತೆಯಲ್ಲಿನ ವಿದ್ಯಾವಿಹಾರ ಲಾಡ್ಜ್ ಮುಂಬಾಗ ಹಲವು ಸೇವೆಗಳ ಉಚಿತ ನೋಂದಣಿ ಶಿಬಿರವನ್ನು ಆಯೋಜಿಸಲಾಗಿದೆ.
ಇಲ್ಲಿ ಸಾರ್ವಜನಿಕರು ಉಚಿತವಾಗಿ ಆಭಾ ಕಾರ್ಡ್, ಈ ಶ್ರಮ್ ಕಾರ್ಡ್, ಪಿಎಂ ಕಿಸಾನ್ - ಇ ಕೆವೈಸಿ, ಆಧಾರ್ - ಚುನಾವಣಾ ಗುರುತಿನ ಚೀಟಿ ಜೋಡಣೆ, ಹಿರಿಯ ನಾಗರಿಕರ ಕಾರ್ಡ್ ಹಾಗೂ ರಕ್ತದಾನಿಗಳ ನೋಂದಣಿಯ ಸೌಲಭ್ಯ ಪಡೆಯಬಹುದು.
ದಿನಾಂಕ 03 ಅಕ್ಟೋಬರ್ 2022ರಿಂದ 06 ಅಕ್ಟೋಬರ್ 2022ರವರೆಗೆ ಈ ಸೇವೆಗಳು ಲಭ್ಯವಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಗ್ರಾಮ ಭಾರತ್ ತಾಲೂಕು ಸಂಯೋಜಕ ಆದರ್ಶ ಕಾಂಚಿನಗರ ತಿಳಿಸಿದ್ದಾರೆ .
ಈ ಸಂದರ್ಭದಲ್ಲಿ ಸಂತೋಷ್ ಮೇಗೂರು, ನಿರಂಜನ್ ಶೃಂಗೇರಿ, ಅನಿರುದ್ಧ ಮಾನಗಾರು, ಅನಿರುದ್ಧ ಕೊರಡಕಲ್ಲು, ಅಭಿಲಾಷ್ ಮೆಣಸೆ, ರಂಜಿತ್ ಶೃಂಗೇರಿ ಇದ್ದರು.









0 Comments