ಬಾಳೆಹೊನ್ನೂರು: (ನ್ಯೂಸ್ ಮಲ್ನಾಡ್ ವರದಿ) ವೈಯುಕ್ತಿಕ ದ್ವೇಷದಿಂದಾಗಿ ತೋಟದ ಲೈನ್ ಕೂಲಿ ಕಾರ್ಮಿಕರು ಕತ್ತಿ, ದೊಣ್ಣೆ ಹಾಗೂ ಇತರೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ಬಾಳೆಹೊನ್ನೂರು ಠಾಣೆಯಲ್ಲಿ ಎಸ್ಟೇಟ್ ಮಾಲೀಕರು ಪ್ರಕರಣ ದಾಖಲು ಮಾಡಿದ್ದಾರೆ.
ಕಾಫಿ ಬೆಳೆಗಾರರಾದ ಅಶ್ವಿನಿ ಕೋಂ ಪಿ.ಆರ್ ಜಗದೀಶ ಇವರು ಬಾಳೆಹೊನ್ನೂರು ಠಾಣೆಗೆ ಸಲ್ಲಿಸಿದ ದೂರಿನ ಪ್ರಕಾರ, ತೋಟದ ಕೃಷಿ ಕೆಲಸಕ್ಕೆಂದು ಆಗಮಿಸಿದ್ದ ಕಾರ್ಮಿಕರು 15 ದಿವಸಗಳಿಂದ ಕೂಲಿ ಕೆಲಸ ಮಾಡಿಕೊಂಡು, ತೋಟದ ಕೂಲಿ ಲೈನ್ ನಲ್ಲಿ ವಾಸವಾಗಿದ್ದರು, ಮನೆಯ ಮಾಲೀಕರಿಗೆ ಗೊತ್ತಿಲ್ಲದಂತೆ ಕಾರ್ಮಿಕರು ಕಾಡು ಪ್ರಾಣಿಗಳನ್ನು ಬೇಟೆ ಮಾಡುತ್ತಿದ್ದರು. ಕಾನೂನು ಬಾಹಿರ ಕೃತ್ಯ ಮುಂದುವರೆಸಿದ್ದು ಅವರುಗಳಿಗೆ ತೋಟದ ಸಾಲವನ್ನು ತೀರಿಸಿ ಕೂಲಿ ಲೈನ್ ಮಾಡುವಂತೆ ಮಾಲೀಕರು ತಿಳಿಸಿದ್ದರು ಎನ್ನಲಾಗಿದೆ.
ಮಾರಕಾಸ್ತ್ರಗಳೊಂದಿಗೆ ಬಂದು ಕೊಲೆ ಬೆದರಿಕೆ :
ಅಂತೆಯೇ ಕಾರ್ಮಿಕರಾದ ಅರ್ಪಿತ ರವರ ಕುಮ್ಮಕ್ಕಿನಿಂದ ಎಲ್ಲಾ ಕಾರ್ಮಿಕರುಗಳು ದಿನಾಂಕ 10.10.2022 ರಂದು ರಾತ್ರಿ 10.00 ಗಂಟೆ ಸಮಯದಲ್ಲಿ ತೋಟದ ಮಾಲೀಕ, ಪತ್ನಿ ಹಾಗೂ ಪುತ್ರನ ಜೊತೆಗೆ ಮನೆಯಲಿದ್ದಾಗ ಕಾರ್ಮಿಕರುಗಳು ಕತ್ತಿ, ದೊಣ್ಣೆ ಹಾಗೂ ಇತರೆ ಮಾರಕಾಸ್ತ್ರಗಳೊಂದಿಗೆ ಬಂದು ಏಕಾಏಕಿ ಗೇಟ್ ನೊಳಗೆ ನುಗ್ಗಿ ಬಂದು ಮನೆಯಲ್ಲಿದ್ದ ಹೂವಿನಕುಂಡಗಳನ್ನು ಒಡೆದು ಹಾಕಿ, ನಮ್ಮನ್ನು ಕೊಲೆ ಮಾಡಲು ಪ್ರಯತ್ನಿಸಿದ್ದು ಮಾಲೀಕರು ಮನೆಯೊಳಗೆ ಹೋಗಿ ಚಿಲಕ ಹಾಕಿಕೊಂಡು ನಮ್ಮ ಊರಿನವರಿಗೆ ವಿಷಯ ತಿಳಿಸಿದರು, ಸದರಿ ಕಾರ್ಮಿಕರುಗಳು ನಮಗೆ ಕೊಲೆ ಬೆದರಿಕೆ ಹಾಕಿ, ಇನ್ನೊಂದು ದಿನ ನಮ್ಮನ್ನು ಮುಗಿಸಿಯೇ ಬಿಡುತ್ತೇವೆಂದು ಕೊಲೆ ಬೆದರಿಕೆ ಹಾಕಿರುತ್ತಾರೆ. ಆದ್ದರಿಂದ ತುಂಬಾ ಭಯವಾಗಿ ರಾತ್ರೋರಾತ್ರಿ ಮನೆಯನ್ನು ಬಿಟ್ಟು ಚಿಕ್ಕಮಗಳೂರಿಗೆ ಬಂದಿರುತ್ತೇವೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದು, ಈ ಕಾರ್ಮಿಕರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.
ವರ್ಷದ ಬಳಿಕ ಬಾಗಿಲು ತೆರೆದ ಹಾಸನದ ಅಧಿದೇವತೆ ಹಾಸನಾಂಬ ದೇಗುಲ
ಹಾಸನ: ಹಾಸನ ಜಿಲ್ಲೆಯ ಅಧಿದೇವತೆ ವರ್ಷದಲ್ಲಿ ಕೆಲವು ದಿನಗಳಷ್ಟೇ ಭಕ್ತರಿಗೆ ದರ್ಶನ ನೀಡಿ ಅನುಗ್ರಹಿಸುವ ಹಾಸನಾಂಬೆ ದೇಗುಲವನ್ನು ಇಂದು ತೆರೆಯಲಾಗಿದ್ದು ಪೂಜಾ ಕೈಂಕರ್ಯಗಳು ಆರಂಭವಾಗಿದೆ.
ಈ ಸುಸಂದರ್ಭದಲ್ಲಿ ಜಿಲ್ಲಾಡಳಿತವು ದಸರಾವನ್ನು ಮಾದರಿಯಾಗಿಟ್ಟುಕೊಂಡು ನಗರವನ್ನು ಅಲಂಕರಿಸಿದೆ, ದೇಶದಾದ್ಯಂತ ಕಳೆದ ಎರಡು ವರ್ಷ ಕೊರೋನಾ ಹೆಮ್ಮಾರಿ ಆವರಿಸಿದ್ದರಿಂದ ಹಾಸನದ ಶಕ್ತಿ ದೇವತೆ ದರ್ಶನ ಮಾಡಲು ಅಡಚಣೆ ಕಟ್ಟುನಿಟ್ಟಿನ ಕ್ರಮಗಳು ಜಾರಿಯಲ್ಲಿದ್ದವು.
ಆದರೆ ಪ್ರಸ್ತುತ ಸನ್ನಿವೇಶದಲ್ಲಿ ಎಲ್ಲಾ ಸಂಕಷ್ಟಗಳು ಮಾಯವಾಗಿರುವುದರಿಂದ ಜಾತ್ರಾ ಮಹೋತ್ಸವವನ್ನು ಅದ್ಧೂರಿಯಾಗಿ ಮಾಡಲು ಜಿಲ್ಲಾಡಳಿತವು ಸಕಲ ಸಿದ್ಧತೆ ಹಾಗೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ.
ಹಾಸನಾಂಬೆ ದೇವಾಲಯಕ್ಕೆ ಬರುವ ಲಕ್ಷಾಂತರ ಮಂದಿ ಭಕ್ತರಿಗೆ ಯಾವುದೇ ಸಮಸ್ಯೆ ಆಗದಂತೆ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ಗೋಪಾಲಯ್ಯ ನೇತೃತ್ವದಲ್ಲಿ ಅನೇಕ ಸಭೆಗಳು ನಡೆದಿದ್ದು, ಸಂಬಂಧಿಸಿದ ಅಧಿಕಾರಿಗಳು ಸಹ ಈಗಾಗಲೇ ಎಲ್ಲಾ ವ್ಯವಸ್ಥೆಗಳನ್ನು ಕಲ್ಪಿಸಿದ್ದಾರೆ.
ಈಗಾಗಲೇ ದಸರಾ ಮಹೋತ್ಸವ ಮುಗಿದಿದ್ದು, ಅಲ್ಲಿದ್ದ ಸುಂದರ ಆನೆಗಳ ಕಲಾಕೃತಿಗಳನ್ನು ಶ್ರೀ ಸಿದ್ದೇಶ್ವರ ಜಾತ್ರಾ ಮಹೋತ್ಸವಕ್ಕೆ ತರಲಾಗಿದೆ. ನಗರದ ಮುಖ್ಯ ವೃತ್ತಗಳ ಮಧ್ಯೆ ಮಂಟಪ, ಸ್ವಾಗತದ್ವಾರ ಹಾಗೂ ದಸರಾ ಮಾದರಿಯಲ್ಲಿಯೇ ರಸ್ತೆಗಳಲ್ಲಿ ವಿದ್ಯುತ್ ದೀಪಗಳು ಭಕ್ತರಮನ ಸೆಳೆಯುತ್ತಿವೆ. ಈ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆಯಿದ್ದು, ವರ್ಷಕ್ಕೊಮ್ಮೆ ಹಾಸನಾಂಬೆ ತಾಯಿ ತನ್ನ ದರ್ಶನ ಭಾಗ್ಯ ಕರುಣಿಸಲಿದ್ದು, ಜಿಲ್ಲೆ ಸೇರಿದಂತೆ ರಾಜ್ಯದ ನಾನಾ ಭಾಗದ ಲಕ್ಷಾಂತರ ಭಕ್ತರ ದಂಡೆ ಬರುತ್ತದೆ.
ಇಂದಿನಿಂದ 15 ದಿನಗಳ ಕಾಲ ದೇವಾಲಯದ ಬಾಗಿಲು ತೆರೆಯಲಿದ್ದು ಮೊದಲ ದಿನ ಮತ್ತು ಕೊನೆಯ ದಿನ ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶ ಇರುವುದಿಲ್ಲ. ಹೀಗಾಗಿ ಉಳಿದ 13 ದಿನ ಮಾತ್ರ ಸಾರ್ವಜನಿಕ ದರ್ಶನಕ್ಕೆ ಲಭ್ಯವಿರುತ್ತದೆ.
ಇಂದು ಮಧ್ಯಾಹ್ನ 12.30ಕ್ಕೆ ಸಾಂಪ್ರದಾಯಿಕ ವಿಧ ವಿಧಾನಗಳ ಮೂಲಕ ದೇವಾಲಯದ ಗರ್ಭಗುಡಿ ಬಾಗಿಲು ತೆರೆದಿದ್ದು, ಇಂದು ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶ ಇಲ್ಲ. ನಾಳೆಯಿಂದ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಲಾಗಿದೆ. ಅಕ್ಟೋಬರ್ 25ರ ಮಂಗಳವಾರದಂದು ಅಮವಾಸ್ಯೆ ಇರುವುದರಿಂದ ಸಾರ್ವಜನಿಕರಿಗೆ ದೇವಿಯ ದರ್ಶನಕ್ಕೆ ಅವಕಾಶ ಇರುವುದಿಲ್ಲ.
27 ರಂದು ದೇವಿಯ ದರ್ಶನಕ್ಕೆ ತೆರೆ:
ಪೂಜೆಗಳು ಎಂದಿನಂತೆ ನಡೆಯುತ್ತದೆ. ಅ.27 ರಂದು ಮಧ್ಯಾಹ್ನ ಸುಮಾರು 1.30 ರಿಂದ 2 ಗಂಟೆ ಒಳಗೆ ಶಾಸ್ತ್ರೋಕ್ತವಾಗಿ ಧಾರ್ಮಿಕ ಪೂಜಾ ಕೈಂಕರ್ಯ ಮುಗಿಸಿ ಎಂದಿನಂತೆ ಬಾಗಿಲನ್ನು ಮುಚ್ಚಲಾಗುವುದು.
ಮೂಲಸೌಕರ್ಯಗಳಾದ ಕುಡಿಯುವ ನೀರು, ಶೌಚಾಲಯ, ವೈದ್ಯಕೀಯ ಸೌಲಭ್ಯ ಮತ್ತು ದೇವರ ದರ್ಶನಕ್ಕೆ ಅನುಕೂಲವಾಗುವಂತೆ ಸರತಿ ಸಾಲುಗಳನ್ನು ವ್ಯವಸ್ಥಿತ ರೀತಿಯಲ್ಲಿ ಮಾಡಲಾಗಿದೆ. ವರ್ಷಕ್ಕೊಮ್ಮೆ ದರ್ಶನ ಭಾಗ್ಯ ಲಭಿಸುವ ಹಾಸನಾಂಬೆ ತಾಯಿಯ ದರ್ಶನಕ್ಕಾಗಿ ರಾಜ್ಯ ಮತ್ತು ದೇಶದ ಹಲವೆಡೆಯಿಂದಲೂ ಕೂಡ ಭಕ್ತರ ದಂಡೆ ಹರಿದುಬರಲಿದೆ.






0 Comments