ಕೊಡಗು: (ನ್ಯೂಸ್ ಮಲ್ನಾಡ್ ವರದಿ) ಬುರ್ಖಾ ಧರಿಸಿದ ಮಹಿಳೆ ಬೇರೆಯವರ ಹೆಸರಿನಲ್ಲಿ ಸಾಲ ಪಡೆದುಕೊಂಡು ಕಂಪನಿಯನ್ನು ಸಂಕಷ್ಟಕ್ಕೆ ಸಿಲುಕಿಸಿರುವ ಘಟನೆ ಕೊಡಗಿನಲ್ಲಿ ನಡೆದಿದೆ.
ಮೈಕ್ರೋಫೈನಾನ್ಸ್ ಕಂಪೆನಿಯು ಸಾಲ ನೀಡುವ ವಿಚಾರದಲ್ಲಿ ಮಾಡಿದ ಎಡವಟ್ಟಿನಿಂದಾಗಿ ಕಂಪನಿಯೇ ವಂಚನೆಗೆ ಒಳಗಾಗಿದೆ. ಬುರ್ಖಾ ಧರಿಸಿದ ಮಹಿಳೆಯು ನಕಲಿ ದಾಖಲೆ ನೀಡಿ ಸಾಲ ಪಡೆದಿದ್ದಾಳೆ. ಆದರೆ ದಾಖಲೆಯಲ್ಲಿರುವ ಫೋಟೋ ಮತ್ತು ಮಹಿಳೆಯ ಮುಖದ ವ್ಯತ್ಯಾಸವನ್ನು ಗುರುತಿಸದೆ ನೇರವಾಗಿ ಲಕ್ಷಾಂತರ ರೂಪಾಯಿ ಸಾಲ ನೀಡಿದ ಫೈನಾನ್ಸ್ ಕಂಪನಿಗಳು ಸಂಕಷ್ಟಕ್ಕೊಳಗಾಗಿದೆ.
ಇದನ್ನೂ ಓದಿ: ಆಂಬುಲೆನ್ಸ್ ಚಾಲಕನ ಮೇಲೆ ಹಲ್ಲೆ; ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿಗಳಿಂದ ಪ್ರತಿಭಟನೆ
ಆಶಿಯಾ ಎಂಬಾಕೆ ಕೊಡಗಿನ ಕುಶಾಲನಗರ ಪಟ್ಟಣದಲ್ಲಿನ ಸಮಸ್ತ, ಬೆಲ್ ಸ್ಟಾರ್ ಮೈಕ್ರೋ ಫೈನಾನ್ಸ್ ಕಂಪೆನಿಗಳಿಗೆ ಆಗಮಿಸಿ ತನ್ನದೇ ಹೆಸರಿನ ಬೇರೆಯವರ ಆಧಾರ್ ಕಾರ್ಡ್ ನೀಡಿ ಲಕ್ಷಾಂತರ ಸಾಲ ಮಾಡಿದ್ದಾಳೆ. ಆದರೆ ಫೈನಾನ್ಸ್ ಕಂಪನಿಗಳ ಸಿಬ್ಬಂದಿ ಆಕೆಯ ಬುರ್ಖಾ ತೆಗೆದು ಮುಖ ಪರಿಶೀಲಿಸದೇ ಸಾಲ ಮಂಜೂರು ಮಾಡಿದ್ದಾರೆ. ಪರಿಣಾಮ ಲಕ್ಷಾಂತರ ರೂಪಾಯಿಗಳನ್ನು ಫೈನಾನ್ಸ್ ಕಂಪನಿಗಳು ಕಳೆದುಕೊಂಡಿವೆ.
ಯಾರದ್ದೋ ಹೆಸರಿನಲ್ಲಿ ಇನ್ಯಾರಿಗೋ ಸಾಲ :
ಫೈನಾನ್ಸ್ ಕಂಪೆನಿಗಳಿಗೆ ಬುರ್ಖ ಧರಿಸಿದ ಮಹಿಳೆಯಿಂದ ವಂಂಚನೆ ಎಸಗಲಾಗಿದೆ. ಸರಿಯಾಗಿ ತಪಾಸಣೆ ನಡೆಸದಂತೆ ಯಾರದ್ದೋ ಹೆಸರಿನಲ್ಲಿ ಇನ್ನಾರಿಗೋ ಸಾಲನೀಡಿ ಕೊಡಗಿನ ಮೈಕ್ರೋಫೈನಾನ್ಸ್ ಕಂಪನಿಗಳು ಎಡವಟ್ಟು ಮಾಡಿಕೊಂಡಿವೆ.
ವಂಚಕಿ ಆಶಿಯಾ ಇದೇ ರೀತಿ ಹಲವು ಫೈನಾನ್ಸ್ ಕಂಪೆನಿಗಳಿಗೆ ವಂಚಿಸಿರುವ ಶಂಕೆ ಸದ್ಯಕ್ಕೆ ವ್ಯಕ್ತವಾಗಿದ್ದು, ಪ್ರಸ್ತುತ ಫೈನಾನ್ಸ್ ಕಂಪನಿಗಳು ಮಾಡಿದ ತಪ್ಪಿನಿಂದಾಗಿ ವಂಚನೆಗೊಳಗಾದ ಆಧಾರ್ ಕಾರ್ಡ್ ಮಾಲೀಕರು ಪರದಾಡುವಂತಾಗಿದೆ. ತಮಗೆ ನ್ಯಾಯ ದೊರಕಿಸಿಕೊಡುವಂತೆ ಆಗ್ರಹಿಸುತ್ತಿದ್ದು, ನ್ಯಾಯ ಸಿಗದಿದ್ದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವಂಚನೆಗೊಳಗಾದ ಮಡಿಕೇರಿ ನಿವಾಸಿ ಆಶಿಯಾ, ಮಿಶ್ರಿಯಾ ಹೇಳಿದ್ದಾರೆ.








0 Comments