ಚಿಕ್ಕಮಗಳೂರಿನಲ್ಲಿ ಒಂದೇ ದಿನ ಕೊರೋನಾದ ದ್ವಿಶತಕದ ದಾಖಲೆಯಾಗಿದೆ. ದೇಶಾದ್ಯಂತ ಏಕಾಏಕಿ ಕೊರೋನಾ ಪ್ರಕರಣಗಳು ಹೆಚ್ಚುತ್ತಿದ್ದು ಎಲ್ಲೆಡೆ ಜನರು ಭಯಭೀತರಾಗಿದ್ದಾರೆ. ಬೆಡ್ ಹಾಗೂ ಆಕ್ಸಿಜನ್ ಕೊರತೆ ಎಲ್ಲೆಡೆ ತಲೆದೋರಿದೆ. ಈ ನಡುವೆ ಇಂದು ಚಿಕ್ಕಮಗಳೂರು ಜಿಲ್ಲೆಯಲ್ಲಿ ದಾಖಲೆಯ ಕೊರೋನಾ ಕೇಸ್ ಪತ್ತೆಯಾಗಿದ್ದು ಎಲ್ಲರ ನಿದ್ದೆ ಕೆಡಿಸುವಂತೆ ಮಾಡಿದೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಇಂದು ಒಟ್ಟು 229ಕೇಸ್ ಗಳು ಪತ್ತೆಯಾಗಿದ್ದು, ಒಂದು ಸಾವು ಸಂಭವಿಸಿದೆ.

ತಾಲ್ಲೂಕುವಾರು ನೋಡಿದಾಗ 

  • ಚಿಕ್ಕಮಗಳೂರು 81
  • ಶೃಂಗೇರಿ 14
  • ಮೂಡಿಗೆರೆ 38 
  • ಕೊಪ್ಪ 17
  • ಎನ್ ಆರ್ ಪುರ 7
  • ತರೀಕೆರೆ 31
  • ಕಡೂರು 41

ಹೀಗೆ ಒಟ್ಟು 229 ಪ್ರಕರಣಗಳು ದಾಖಲಾಗಿವೆ. ಸಧ್ಯಕ್ಕೆ ಜಿಲ್ಲೆಯಲ್ಲಿ ಬೆಡ್ ಹಾಗೂ ಆಕ್ಸಿಜನ್ ಕೊರತೆ ಇರುವುದಿಲ್ಲ. ಸಾರ್ವಜನಿಕರು ಮಾಸ್ಕ್ ಧರಿಸಿ, ಅಂತರ ಕಾಪಾಡಿಕೊಂಡು ಕೊರೋನಾ ವಿರುದ್ಧದ ಹೋರಾಟದಲ್ಲಿ ಕೈಜೋಡಿಸಬೇಕಿದೆ.

ಭಯ ಬೇಡ ಎಚ್ಚರಿಕೆ ಇರಲಿ.